ಬಾಬರಿ ಮಸೀದಿ ದ್ವಂಸದ ವೇಳೆ ಹಿಂದೂಗಳು ತಾಲಿಬಾನಿಗಳಂತೆ ವತರ್ಿಸಿದ್ದರು: ರಾಜೀವ್ ಧವನ್
ನವದೆಹಲಿ 20: ಬಾಬರಿ ಮಸೀದಿ ದ್ವಂಸವಾಗಿದ್ದ ಡಿಸೆಂಬರ್ 6, 1992 ರಂದು "ಹಿಂದೂಗಳು ತಾಲಿಬಾನಿಗಳಂತೆ" ವತರ್ಿಸಿದ್ದರು ಎಂದು ಅಯೋಧ್ಯೆ ವಿವಾದ ಪ್ರಕರಣದಲ್ಲಿ ಮುಸ್ಲಿಮ್ ಪಕ್ಷದ ಪರ ವಕೀಲರಾದ ರಾಜೀವ್ ಧವನ್ ಹೇಳಿದ್ದಾರೆ.
ಸುಪ್ರೀಂ ಕೋಟರ್್ ನಲ್ಲಿ ಅಯೋಧ್ಯೆ ಪ್ರಕರಣ ವಿಚಾರಣೆ ನಡೆಯುತ್ತಿದ್ದ ವೇಳೆ ವಕೀಲರು ಈ ಹೇಳಿಕೆ ನಿಡಿದ್ದಾರೆ. "ಹಿಂದೂಗಳು ಅಂದು ತಾಲಿಬಾನಿಗಳಂತೆ ವತರ್ಿಸಿದ್ದರು. ಡಿಸೆಂಬರ್ 6ರಂದು ಹಿಂದೂಗಳು ನಡೆಸಿದುದು ಒಂದು ಭಯೋತ್ಪಾದನೆ ಕೃತ್ಯವೇ ಹೊರತು ಬೇರಲ್ಲ ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಧವನ್ ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ದ್ವಂಸವನ್ನು ತಾಲಿಬಾನಿಗಳು ಅಫ್ಘಾನಿಸ್ಥಾನದ ಬಮಿಯಾನ್ ಬುದ್ದನ ಪ್ರತಿಮೆಗಳ ದ್ವಂಸಕ್ಕೆ ಹೋಲಿಸಿದ್ದರು. ಅಲ್ಲದೆ ಹಿಂದೂ ತಾಲಿಬಾನಿಗಳು ಬಾಬರಿ ಮಸೀದಿಯನ್ನು ನಾಶ ಮಾಡಿದ್ದಾರೆ ಎಂದು ವಾದಿಸಿದ್ದರು.
ಡಿಸೆಂಬರ್ 1992ರ ಘಟನೆಯು "ಹಿಂದೂ ಭಯೋತ್ಪಾದನೆ"ಗೆ ಒಂದು ಉದಾಹರಣಯಾಗಲಿದೆ ಎಂದು ಅವರು ಹೇಳಿದ್ದಾರೆ.1526 ರಿಂದ 1992 ರ ಡಿಸೆಂಬರ್ 6 - ಅದನ್ನು ದ್ವಂಸ ಮಾಡುವವರೆಗೂ ಅಲ್ಲಿ ಮಸೀದಿ ಇದ್ದಿತ್ತು ಎಂದು ಅವರು ವಾದಿಸಿದ್ದಾರೆ. ಅಲ್ಲಿ ಇದಕ್ಕೂ ಮುನ್ನ ದೇವಾಲಯವಿತ್ತು ಎಂದು ನಾನು ಭಾವಿಸಲಾರೆ. ಆದರೆ ಹಿಂದೂಗಳಿಗೆ ಅಲ್ಲಿ ಪೂಜೆ ನೆರವೇರಿಸಲು ಅವಕಾಶ ನಿಡಲಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಏತನ್ಮಧ್ಯೆ, ಅಯೋಧ್ಯೆಯ ವಿಷಯವನ್ನು ಸಂವಿಧಾನ ಪೀಠಕ್ಕೆ ವಗರ್ಾಯಿಸಬೇಕೆ ಅಥವಾ ಬೇಡವೆ ಎನ್ನುವ ಕುರಿತ ತೀರ್ಪನ್ನು ನ್ಯಾಯಾಲಯವು ಕಾಯ್ದಿರಿಸಿದೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 