ಪಾಕ್ ನಲ್ಲಿ ಮದುವೆ ಮನೆಯಿಂದಲೇ ಹಿಂದೂ ಮಹಿಳೆ ಅಪಹರಣ

ಇಸ್ಲಾಮಾಬಾದ್, ಜನವರಿ 27 ಪಾಕಿಸ್ತಾನದಲ್ಲಿ ಅದೂ ಪೊಲೀಸ್ ಅಧಿಕಾರಿಗಳ ಉಸ್ತವಾರಿಯಲ್ಲಿ  ಹಿಂದೂ ಮಹಿಳೆಯನ್ನು ಮದುವೆ ಮನೆಯಿಂದಲೇ,  ಅದೂ ಹಾಡಹಗಲೇ  ದುಷ್ಮರ್ಮಿಗಳು ಅಪಹರಿಸಿದ್ದಾರೆ.  ಪ್ರಾಂತೀಯ ರಾಜಧಾನಿ ಕರಾಚಿಯಿಂದ 215 ಕಿ.ಮೀ ದೂರದಲ್ಲಿರುವ ಸಿಂಧ್ ಪ್ರಾಂತ್ಯದ ಮಾಟಿಯಾರಿ ಜಿಲ್ಲೆಯಲ್ಲಿರುವ ಹಲಾದಲ್ಲಿರುವ ತನ್ನ ವಿವಾಹದ ಸ್ಥಳದಿಂದಲೇ  ಮಹಿಳೆಯನ್ನು  ಅಪಹರಿಸಲಾಗಿದೆ ಎಂದೂ ಅರೋಪಿಸಲಾಗಿದೆ. ಅಪಹರಣ, ಬಲವಂತದ ಮದುವೆ ಮತ್ತು ಯುವ ಹಿಂದೂ ಹುಡುಗಿಯರನ್ನು ಇಸ್ಲಾಂಗೆ ಮತಾಂತರಗೊಳಿಸುವ ಹತ್ತು ಹಲವು   ಪ್ರಕರಣಗಳಿಗೆ ಸಿಂಧ್ ಕುಖ್ಯಾತವಾಗಿದೆ.ವರದಿಗಳ ಪ್ರಕಾರ, ಭಾರ್ತಿ ಬಾಯಿ (24) ಎಂಬ ಮಹಿಳೆ ನಂತರ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡು ಮುಸ್ಲಿಂ ಪುರುಷನ ಜೊತೆ ಮದುವೆಯಾಗಿದ್ದಾಳೆ ಎನ್ನಲಾಗಿದೆ. 

ಭಲಾತಿ ಅವರು ಹಾಲಾ ನಗರದಲ್ಲಿ ಹಿಂದೂ ವ್ಯಕ್ತಿಯನ್ನು ಮದುವೆಯಾಗಲಿದ್ದಾರೆ ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ, ಅಪರಿಚಿತ ದುಷ್ಕರ್ಮಿಗಳು ಮದುವೆ ಮನೆಗೆ ನುಗ್ಗಿ ಆಕೆಯನ್ನು ಬಲವಂತವಾಗಿ  ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಶಾರುಖ್ ಗುಲ್ ಎಂಬ ಅಪಹರಣಕಾರ ಹಲವು  ಪುರುಷ, ಮತ್ತು  ಪೊಲೀಸರೊಂದಿಗೆ ಬಂದು ತನ್ನ ಮಗಳನ್ನು ಹಗಲು ಹೊತ್ತಿನಲ್ಲೇ ಅಪರರಣ ಮಾಡಿದ್ದಾನೆ ಎಂದು ಭಾರತಿ ಬಾಯಿಯ ತಂದೆ ಕಿಶೋರ್ ದಾಸ್ ದೂರಿದ್ದಾರೆ. ನಂತರ, ಭಾರತಿ ಇಸ್ಲಾಂಗೆ ಮತಾಂತರಗೊಂಡು,  ಮತ್ತು ಶಾರುಖ್ ಗುಲ್ ಅವರ ವಿವಾಹದ ದಾಖಲೆಗಳು  ಸಾಮಾಜಿಕ ಮಾಧ್ಯಮದಲ್ಲಿ ಸಖತ್  ವೈರಲ್ ಆಗಿದೆ.ಆಕೆಯ ಮತಾಂತರದ ದಾಖಲೆಗಳ ಪ್ರಕಾರ, 2019 ರ ಡಿಸೆಂಬರ್ 1 ರಂದು ಭಾರತಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಎಂಬದು ಗೋಚರಿಸಿದೆ  ಇದೇ ಅವಳ ಅಪಹರಣಕ್ಕೆ  ಕಾರಣವಾಗಿರಬಹುದು ಎನ್ನಲಾಗಿದೆ. ಆಕೆಯ ಕುಟುಂಬವು ಅವಳನ್ನು ಹಿಂದಿರುಗಿಸಬೇಕೆಂದು ಒತ್ತಾಯಿಸಿದೆ ಮತ್ತೊಂದೆಡೆ, ಘಟನೆಗೆ ಕನಿಷ್ಠ ಒಂದು ತಿಂಗಳ ಮೊದಲು ಭಾರತಿ ಇಸ್ಲಾಂಗೆ ಮತಾಂತರಗೊಂಡಿದ್ದಳು ಎಂದೂ  ಹೇಳಲಾಗುತ್ತಿದೆ. ಇಸ್ಲಾಂಗೆ  ಮತಾಂತರವಾಗಿ,   ಮುಸ್ಲಿಂ ಪುರುಷನನ್ನು ಬಲವಂತವಾಗಿ ಮದುವೆಯಾಗಿದ್ದಾರೆ ಎಂದೂ ಆಕೆಯ ಪೋಷಕರು   ಆರೋಪಿಸಿದ್ದಾರೆ. -