ಕಂಪ್ಲಿ ಸದ್ಭಕ್ತರಿಂದ ಶ್ರೀಶೈಲಕ್ಕೆ ಪಾದಯಾತ್ರೆ
Hiking to Srisailam by devotees of Kampli
ಕಂಪ್ಲಿ 19: ಪಟ್ಟಣದ ಕಲ್ಯಾಣಚೌಕಿ ಮಠದ ಕೆ.ಎಂ.ಬಸವರಾಜ ಶಾಸ್ತ್ರಿ ಮತ್ತು ಹೊಸಪೇಟೆಯ ಮರುಳಸಿದ್ಧಾಶ್ರಮದ ಸಿದ್ದಲಿಂಗಯ್ಯ ತಾತನವರ ಮಾರ್ಗದರ್ಶನದಲ್ಲಿ ಮತ್ತು ವೀರಶೈವ ಸಮಾಜದ ಯುವ ಮುಖಂಡರಾದ ಪುಟ್ಟಿ ಸಚಿನ್ ನೇತೃತ್ವದಲ್ಲಿ ಪಟ್ಟಣದ ಐವತ್ತಕ್ಕೂ ಅಧಿಕ ಭಕ್ತರು ಬುಧವಾರ ಶ್ರೀಶೈಲ ಭ್ರಮರಾಂಭದೇವಿ ಮಲ್ಲಿಕಾರ್ಜುನಸ್ವಾಮಿ ದರ್ಶನಕ್ಕೆ ಪಾದಯಾತ್ರೆಯಲ್ಲಿ ತೆರಳಿದರು.
ಬೆಳಗಿನ ಜಾವ ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಮತ್ತು ಕಲ್ಯಾಣಚೌಕಿ ಮಠದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಪಾದಯಾತ್ರೆಗೆ ಕಲ್ಯಾಣಚೌಕಿ ಮಠದ ಕೆ.ಎಂ.ಬಸವರಾಜ ಶಾಸ್ತ್ರಿ ಮತ್ತು ಹೊಸಪೇಟೆ ಮರುಳಸಿದ್ಧಾಶ್ರಮದ ಸಿದ್ಧಯ್ಯ ತಾತನವರು ಚಾಲನೆ ನೀಡಿದರು.
ಮಾರ್ಗಮಧ್ಯ ಸಿಗುವ ಬಳ್ಳಾರಿ ಕನಕದುರ್ಗಮ್ಮದೇವಿ ಪೂಜೆ ಸಲ್ಲಿಸಿ ಯಾತ್ರೆಯನ್ನು ಮುಂದುವರಿಸಿದರು. ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದರ್ಶನಕ್ಕೆ ಪಾದಯಾತ್ರೆ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳ ಮತ್ತು ಹೊರ ರಾಜ್ಯಗಳ ಸಾವಿರಾರು ಸದ್ಭಕ್ತರು ಪಾದಯಾತ್ರೆಯಲ್ಲಿ ತೆರಳುತ್ತಿರುವುದು ಕಂಡು ಬಂತು. ರಸ್ತೆಯುದ್ದಗಲಕ್ಕೂ ಮಹಿಳೆಯರು, ಮಕ್ಕಳು ನಡೆದುಕೊಂಡು ಹೋಗುತ್ತಿರುವುದು ಕಂಡು ಬಂತು. ಪಾದಯಾತ್ರಿಗಳಿಗೆ ಬಳ್ಳಾರಿಯಿಂದ ಆಂದ್ರ್ರದೇಶದ ಜೊಪ್ಪಡ ಬಂಗ್ಲೆ ಗ್ರಾಮದವರೆಗೂ ಅಲ್ಲಲ್ಲಿ ಉಚಿತವಾಗಿ ಉಪಹಾರ ಊಟದ ವ್ಯವಸ್ಥೆಯನ್ನು ಮಾಡಿದ್ದರೆಂದು ಹಾಗೂ ಜೊಪ್ಪಡಬಂಗ್ಲೆ ಗ್ರಾಮದಲ್ಲಿ ಸಿರುಗಪ್ಪ ತಾಲ್ಲೂಕು ಗಜಗಿನಹಾಳು ಗ್ರಾಮದ ವೀರೇಶಗೌಡ ಮತ್ತು ಕುಟುಂಬದವರು ಶಿವರಾತ್ರಿಯಲ್ಲಿ 10 ದಿನಗಳ ಕಾಲ ಮತ್ತು ಈಗ 12ದಿನಗಳ ಕಾಲ ಅಂದರೆ ಯುಗಾದಿ ಹಬ್ಬದವರೆಗೂ ಪಾದಯಾತ್ರೆ ಬರುವ ಸಕಲ ಸದ್ಭಕ್ತರಿಗೂ ಬೆಳಗಿನ ಉಪಹಾರ, ಎರಡು ಸಮಯ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆಂದು ಕೆ.ಎಂ.ಬಸವರಾಜಶಾಸ್ತ್ರಿ ತಿಳಿಸಿದರು. ಪಾದಯಾತ್ರೆ ಮಾಡುವುದರಿಂದ ದೈಹಿಕ ಆರೋಗ್ಯ,ಮಾನಸಿಕ ಶಾಂತಿ ನೆಮ್ಮದಿ ದೊರಕಲಿದ್ದು, ದೈಹಿಕವಾಗಿ ಸದೃಢಿರುವವರು ವರ್ಷಕ್ಕೊಮ್ಮೆಯಾದರೂ ಶ್ರೀಶೈಲ ಭ್ರಮರಾಂಭದೇವಿ ಮಲ್ಲಿಕಾರ್ಜುನ ಸ್ವಾಮಿಯ ದರ್ಶನ ಮಾಡಬೇಕೆಂದು ಹೊಸಪೇಟೆ ಮರುಳಸಿದ್ಧಾಶ್ರಮದ ಸಿದ್ದಲಿಂಗಯ್ಯ ತಾತ ತಿಳಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 