ಕೃಷಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ : ಡಾ. ಶೈಲೇಂದ್ರ ಬೆಲ್ದಾಳೆ

ಕೃಷಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ : ಡಾ. ಶೈಲೇಂದ್ರ ಬೆಲ್ದಾಳೆ High priority is being given to agricultural irrigation: Dr. Shailendra Beldale

ಬೀದರ್ 27 : ರೈತರಿಗೆ ನೀರಾವರಿ ಸೌಲಭ್ಯವನ್ನು ಒದಗಿಸುವುದು ಹಾಗೂ ಅವರ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯ ನೀರು ಇದ್ದರೆ ಕೃಷಿ ಬೆಳೆಯುತ್ತದೆ, ಕೃಷಿ ಬೆಳೆಯಿದರೆ ಗ್ರಾಮ ಅಭಿವೃದ್ಧಿಯಾಗುತ್ತದೆ ಶ್ರಿ ಇದು ನಮ್ಮ ಎಲ್ಲರಿಗೂ ತಿಳಿದಿರುವ ಸತ್ಯ ಹೀಗಾಗಿ ನಮ್ಮ ಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ ಹೇಳಿದರು.ಬೀದರ್ ನಗರದ ಪ್ರತಾಪ ನಗರದಲ್ಲಿಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರದ ಪರಿಶಿಷ್ಟ ಸಮುದಾಯದ 28 ಫಲಾನುಭವಿಗಳಿಗೆ ನೀರಾವರಿಗೆ ಅಗತ್ಯವಾದ ಮೋಟಾರ್, ಪಂಪ್‌ಸೆಟ್ ಸೇರಿದಂತೆ ಇತರೆ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಮಾಜದ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಕನಸು ಕಂಡಿದ್ದರು. ಅವರ ಆ ಕನಸನ್ನು ಸಾಕಾರಗೊಳಿಸುವ ದಾರಿಯಲ್ಲಿ ಈ ಗಂಗಾ ಕಲ್ಯಾಣ ಯೋಜನೆ ಒಂದು ಮಹತ್ವದ ಹೆಜ್ಜೆಯಾಗಿದೆ. ಇಂತಹ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಫಲಾನುಭವಿಗಳು ತಮ್ಮ ಜೀವನದಲ್ಲಿ ಮುನ್ನಡೆ ಸಾಧಿಸಬೇಕು ಎಂದು ನಾನು ಆಶಿಸುತ್ತೇನೆ.  

ನಮ್ಮ ದೇಶದ ಬೆನ್ನೆಲುಬು ರೈತರು. ರೈತರ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಆದರೆ, ಇಂದಿಗೂ ಅನೇಕ ರೈತರು ನೀರಿನ ಅಭಾವದಿಂದ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಮಳೆ ಆಧಾರಿತ ಕೃಷಿ ಅನಿಶ್ಚಿತತೆಯಿಂದ ಕೂಡಿದೆ. ಇಂತಹ ಸಂದರ್ಭದಲ್ಲಿ ಗಂಗಾ ಕಲ್ಯಾಣ ಯೋಜನೆ ರೈತರ ಜೀವನದಲ್ಲಿ ಒಂದು ಹೊಸ ಬೆಳಕನ್ನು ತರಬಲ್ಲ ಮಹತ್ವದ ಯೋಜನೆಯಾಗಿದೆ.ಈ ಯೋಜನೆಯ ಮೂಲಕ ಸರ್ಕಾರ ರೈತರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಅವರ ಕೃಷಿಯನ್ನು ಸ್ವಾವಲಂಬಿ ಹಾಗೂ ಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಮೋಟಾರ್, ಪಂಪ್‌ಸೆಟ್ ಮುಂತಾದ ಪರಿಕರಗಳು ರೈತರ ಕೃಷಿಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಬಲ್ಲವು. ಇದರಿಂದ ಬೆಳೆ ಉತ್ಪಾದನೆ ಹೆಚ್ಚುತ್ತದೆ, ಆದಾಯ ಹೆಚ್ಚುತ್ತದೆ ಮತ್ತು ಕುಟುಂಬದ ಜೀವನಮಟ್ಟ ಸುಧಾರಿಸುತ್ತದೆ.  ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಕಾಂತ ಶೇಖಾಪುರ, ರಾಜಕುಮಾರ ಸಿಂಧೆ, ಪ್ರಹ್ಲಾದ ಬಂಬುಳಗೆ, ಸಚಿನಕುಮಾರ ಕೋಣಿ, ರಾಮು ದೊಡ್ಡಭಾವಿ, ಪ್ರಕಾಶ ಗಾದಗಿ ನರಸಿಂಮಲು ಬರೂರ, ಅನೀಲಕುಮಾರ ಬನ್ನಳ್ಳಿ, ಶಾಂತಕುಮಾರ ಪಟ್ನೆ, ವಿಶಾಲ, ರಾಜಕುಮಾರಸೇರಿದಂತೆ ಹಲವರು ಉಪಸ್ಥಿತರಿದ್ದರು.ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರ ಮಾಧ್ಯಮ ಸಂಯೋಜಕ ಸಹಾಯಕ ನಾಗೇಶ ಸಿದ್ದಾ.