ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ

ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನ Hemareddy Mallamma play performance

ಲೋಕದರ್ಶನ ವರದಿ 

ಧಾರವಾಡ 16: ನಗರದ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ದಿ. 21ರ ಗುರುವಾರ ಸಂಜೆ 5-30ಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಪು ಸಭಾಭವನದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಅಂಗವಾಗಿ ಕರ್ನಾಟಕ ನಾಟಕ, ಜಾನಪದ ಕಲಾವಿದರ ಅಭಿವೃದ್ಧಿ ಸಂಘ, ಹುಬ್ಬಳ್ಳಿ ಇವರ ತಂಡದಿಂದ ಹೆಲನ್ ಮೈಸೂರು ನಿರ್ದೇಶನದ ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನವನ್ನು ಏರಿ​‍್ಡಸಲಾಗಿದೆ. ಈ ನಾಟಕ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು, ಕಲಾವಿದರು, ರೆಡ್ಡಿ ಸಮುದಾಯದ ಬಂಧುಗಳು ಆಗಮಿಸಬೇಕೆಂದು ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಪತ್ರಿಕಾ ಪ್ರಕಟೆಯಲ್ಲಿ ತಿಳಿಸಿದ್ದಾರೆ. 

ಈ ನಾಟಕ ಕಲಾವಿದರು  

ಕರ್ನಾಟಕ ನಾಟಕ, ಜಾನಪದ ಕಲಾವಿದರ ಅಭಿವೃದ್ಧಿ ಸಂಘ ಹುಬ್ಬಳ್ಳಿ, ಇವರ ಪ್ರಸ್ತುತಪಡಿಸುವ ಶ್ರೀಕಂಠ ಶಾಸ್ತ್ರಿಗಳು ಹಿರೇಮಠ ನಲವಡಿ ರಚನೆಯ ಸಂಪೂರ್ಣ ಹೇಮರೆಡ್ಡಿ ಮಲ್ಲಮ್ಮ ನಾಟಕವು ಲಕ್ಷ್ಮೀದೇವಿ ಶಿಗ್ಗಾವ್ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ. ಸೈಯದ್ ಮಾಸ್ಟರ್ ಸಂಗೀತ ಸಂಯೋನೆ, ಅನಿಲ್ ಕುಮಾರ (ಧಾರವಾಡ) ತಬಲಾ ಸಾಥ ನೀಡುವರು. ಮಲ್ಲಮ್ಮನ ಪಾತ್ರದಲ್ಲಿ ಹೆಲನ್ ಮೈಸೂರು. ಮಹಾದೇವಿ ಪಾತ್ರದಲ್ಲಿ ಮಾಲಾಶ್ರೀ, ನಾಗಮ್ಮನ ಪಾತ್ರದಲ್ಲಿ ಚೈತ್ರಾ ಶಿಗ್ಗಾಂವಿ. ಪದ್ದವ್ವ ಮೋಹನ್ ಲಾಲ್ ಪಾತ್ರದಲ್ಲಿ, ಮಹೇಶ. ಮಲ್ಲಿಕಾರ್ಜುನ ಹಾಗೂ ವೇಮನ ಯೋಗಿ ಪಾತ್ರದಲ್ಲಿ ಚಿದಾನಂದ ಗವಾಯಿ,  ಹೇಮರೆಡ್ಡಿಯ ಪಾತ್ರದಲ್ಲಿ ವೆಂಕಟೇಶ ಪ್ರಸಾದ, ಲಂಬಿಕಾ ಯೋಗಿ ಪಾತ್ರದಲ್ಲಿ ಕೃಷ್ಣ ಶಿಗ್ಗಾಂವಿ, ಚಿತ್ರರಂಜಿನಿ ಪಾತ್ರದಲ್ಲಿ ಸವಿತಾ ಅವರು ಅಭಿನಯಿಸಲಿದ್ದಾರೆ. 

ಈ ಸಂಸ್ಥೆ ಸುಮಾರು 17 ವರ್ಷಗಳಿಂದ ಪೌರಾಣಿಕ ಭಕ್ತಿ ಪ್ರಧಾನವಾದ ಜಾನಪದ ಸಾಮಾಜಿಕ ಹಲವು ಪ್ರಕಾರಗಳ ಜನರಲ್ಲಿ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಈ ಸಂಸ್ಥೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಕೂಡ ಆಗಿದೆ ಮಂಗಳಮುಖಿಯರನ್ನು ಭಿಕ್ಷಾಟನೆಯನ್ನು ಬಿಡಿಸಿ ಅವರಿಗೆ ಕಲೆಯನ್ನು ಕಲಿಸಿ ಅವರನ್ನು ಕಲಾವಿದರನ್ನಾಗಿ ಮಾಡಿದ ಹೆಮ್ಮೆ ಕೂಡ ಇದೆ. ಸಾಕಷ್ಟು ಹಿರಿಯ ಕಲಾವಿದರಿಗೆ ಆಶ್ರಯ ನೀಡಿದ ಸಂಸ್ಥೆ ಕೂಡ ಇದಾಗಿದೆ ಸಾಕಷ್ಟು ಗ್ರಾಮೀಣ ರಂಗಭೂಮಿಯ ಬಡ ಯುವಕರನ್ನು ರಂಗಭೂಮಿಗೆ ಉಚಿತವಾಗಿ ತರಬೇತಿ ನೀಡಿದೆ ಎಂದು ಮುಖ್ಯಸ್ಥರಾದ ಹೆಲನ್ ಮೈಸೂರು ತಮ್ಮ ಅಭಿಪ್ರಾಯದಲ್ಲಿ ತಿಳಿಸಿದ್ದಾರೆ.