ಸ್ನೇಹ, ಸಂಘಟನೆ, ಕಾವ್ಯಾಸಕ್ತಿ ಹೊಂದಿದ್ದ ಹೆಗಡೆ

ಸ್ನೇಹ, ಸಂಘಟನೆ, ಕಾವ್ಯಾಸಕ್ತಿ ಹೊಂದಿದ್ದ ಹೆಗಡೆ Hegde, who had a passion for friendship, organization, and poetry


ಧಾರವಾಡ 08 : ನಗರದ ಸರಕಾರಿ ನೌಕರರ ಸಭಾಭವನದಲ್ಲಿ ಶುಕ್ರವಾರ ಸಂಜೆ ನಡೆದ ಸಭೆಯಲ್ಲಿ ಬುಧವಾರ ನಿಧನರಾದ ಅಖಿಲ ಭಾರತ ಪ್ರಾಥಮಿಕ ಶಿಕ್ಷಕ ಮಹಾಮಂಡಳ(ಎಐಪಿಟಿಎಫ್) ಸಂಪನ್ಮೂಲ ಘಟಕದ ಮಾಜಿ ಸದಸ್ಯ ಮಂಜುನಾಥ ಹೆಗಡೆ ಹೊಲನಗದ್ದೆ ಅವರಿಗೆ ಅವರ ಶಿಕ್ಷಕ ಮಿತ್ರರು ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದರು. 

ಎಲ್ಲರೊಂದಿಗೆ ಹೃದ್ಯವಾದ ಸ್ನೇಹ ಮತ್ತು ಶಿಕ್ಷಕ ಸಂಘಟನೆಗಳಲ್ಲಿ ಕ್ರಿಯಾಶೀಲತೆ ಹೊಂದಿದ್ದ ಶಿಕ್ಷಕ ಮಂಜುನಾಥ ಹೆಗಡೆ ಹೊಲನಗದ್ದೆ ಅವರು ಹೆಸರಾಂತ ಕವಿಗಳ ಕಾವ್ಯಗಳನ್ನು ಓದಿ ವಿಶ್ಲೇಷಿಸುವ ಕಾವ್ಯಾಸಕ್ತಿಯನ್ನೂ ರೂಢಿಸಿಕೊಂಡಿದ್ದರು ಎಂದು ಬಣ್ಣಿಸಲಾಯಿತು.  

ಬೆಂಗಳೂರು ನ್ಯಾಷನಲ್ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಮೌಳೇಶ, ಡಿಡಿಪಿಐ ಗೀರೀಶ ಪದಕಿ, ಎ.ಐ.ಪಿ.ಟಿ.ಎಫ್‌. ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ, ವಿವಿಧ ಸಂಘಟನೆಗಳ ಮಲ್ಲಿಕಾರ್ಜುನ ಚಿಕ್ಕಮಠ, ಶಂಕರ ಗಂಗಣ್ಣವರ, ಗುರುಮೂರ್ತಿ ಯರಗಂಬಳಿಮಠ, ಗುರು ತಿಗಡಿ, ಕೆ.ಎಚ್‌. ನಾಯಕ, ನಾರಾಯಣ ಭಜಂತ್ರಿ, ಎ.ಎನ್‌.ಪಾಟೀಲ, ನಾಗಲಿಂಗ ಹುಗ್ಗಿ ಮಾತನಾಡಿ ಹೆಗಡೆ ಒಡನಾಟದ ನೆನಪುಗಳನ್ನು ಮೆಲಕು ಹಾಕಿದರು.  

ಸಭೆಯಲ್ಲಿದ್ದ ಎಚ್‌.ಎಸ್‌.ಬಡಿಗೇರ, ಗುರು ಪೋಳ, ಶಂಕರ ಘಟ್ಟಿ, ರಾಜಶೇಖರ ಹೊನ್ನಪ್ಪನವರ, ಡಾ.ಪಿ.ಎಸ್‌.ಲಗಮಣ್ಣವರ, ಫೀರೋಜ ಗುಡೇನಕಟ್ಟಿ, ಮಹಾಂತೇಶ ನರೇಗಲ್, ಗಂಗವ್ವ ಕೋಟಿಗೌಡ್ರ, ಮಲ್ಲಮ್ಮ ಪಾಟೀಲ, ಎಂ.ಆರ್‌.ಕಬ್ಬೇರ, ಎ.ಎನ್‌.ಮುತ್ತಗಿ, ಆರ್‌.ಎಸ್‌.ದಾದುಗೋಳ, ಎಸ್‌.ವಿ.ಅಂಗಡಿ, ಎಸ್‌.ಡಿ.ಪವಾರ, ವೈ.ಐ.ಗಡೆಣ್ಣವರ, ಎ.ಬಿ.ಚೆನ್ನವೀರಗೌಡರ, ಮುರುಘೇಶ ಸವಣೂರ, ಎಸ್‌.ವ್ಹಿ.ಹಡಪದ, ನಾಗರಾಜ ಗುರಿಕಾರ, ಕೆಮ್ಮಣಕೇರಿ ಅವರು ಪುಷ್ಪನಮನ ಸಲ್ಲಿಸಿದರು. ಕೊನೆಯಲ್ಲಿ ಅಗಲಿದ ಶಿಕ್ಷಕನಿಗೆ ಶಾಂತಿ ಕೋರಿ ಮೌನಾಚರಣೆ ನಡೆಯಿತು.