ಭಾರಿ ವಾಹನ ಸಂಚಾರ, ನಿಲುಗಡೆಗೆ ನಿರ್ಬಂಧ
Heavy vehicle traffic, parking restrictions
ಭಾರಿ ವಾಹನ ಸಂಚಾರ, ನಿಲುಗಡೆಗೆ ನಿರ್ಬಂಧ
ಹೂವಿನಹಡಗಲಿ 3: ತಾಲ್ಲೂಕಿನ ಮೈಲಾರ ಸುಕ್ಷೇತ್ರದಲ್ಲಿ ಜರುಗುವ ಮೈಲಾರಲಿಂ-ಗೇಶ್ವರ ಕಾರಣಿಕ ಮಹೋತ್ಸವ ಹಾಗೂ ಜಾತ್ರೆಯಲ್ಲಿ ಅಪಾರ ಭಕ್ತರು ಪಾಲ್ಗೊ-ಳ್ಳುವುದರಿಂದ ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಸೋಮವಾರದಿಂದ ನಾಲ್ಕು ದಿನಗಳವರೆಗೆ ಸುಕ್ಷೇತ್ರ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದಾರೆ.ಫೆ. 3ರ ಸಂಜೆ 4 ಗಂಟೆಯಿಂದ ಫೆ.5ರಂದು ಬೆಳಿಗ್ಗೆ 10ರ ವರೆಗೆ ಭಕ್ತರ ವಾಹನ ಹೊರತುಪಡಿಸಿ ಸರಕು ಸಾಗಣೆ ಹಾಗೂ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿದೆ. ಗುತ್ತಲ, ಹೊಳಲು, ಕುರುವತ್ತಿ ಮಾರ್ಗಗಳ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ. ಫೆ. 3 ಬೆಳಿಗ್ಗೆ 8ರಿಂದಫೆ.5ರ ಸಂಜೆ 6 ಗಂಟೆವರೆಗೆ ನಿಗದಿಪಡಿಸಿದ ಸ್ಥಳಗಳಲ್ಲಿ ವಾಹನ ನಿಲುಗಡೆಮಾಡತಕ್ಕದ್ದು, ಕುರುವತ್ತಿ ರಸ್ತೆ, ಹೊಳಲು ರಸ್ತೆ, ಗುತ್ತಲ ರಸ್ತೆ, ಡೊಂಬರಹಳ್ಳಿರಸ್ತೆಗಳಲ್ಲಿ ಕೆಎಸ್‌ಆರ್ ಟಿಸಿ ಬಸ್, ನಾಲ್ಕು ಚಕ್ರ ವಾಹನ, ದ್ವಿಚಕ್ರ ವಾಹನಗಳಪಾರ್ಕಿಂಗ್ ಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ನಿಗದಿತ ಸ್ಥಳಗಳಲ್ಲಿ ಮಾತ್ರ ಪಾರ್ಕಿಂಗ್ ಮಾಡಬೇಕು ಎಂದು ಆದೇಶ ಇದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 