ಭಾರಿ ಹಿಮಪಾತ: 40 ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದು

ಬೀಜಿಂಗ್, ಡಿಸೆಂಬರ್ 16 (ಸ್ಪುಟ್ನಿಕ್) ಚೀನಾದ ರಾಜಧಾನಿಯಲ್ಲಿ    ಸುರಿಯುತ್ತಿರುವ ಭಾರಿ  ಹಿಮದ ಕಾರಣ  ಬೀಜಿಂಗ್ ಕ್ಯಾಪಿಟಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ 40 ಕ್ಕೂ ಹೆಚ್ಚು ವಿಮಾನಗಳ ಸಂಚಾರ  ರದ್ದುಪಡಿಸಲಾಗಿದೆ. ವಿಮಾನ ನಿಲ್ದಾಣದ ಆಧಿಕಾರಿಗಳು ಈ ಮಾಹಿತಿ ನೀಡಿದ್ದು , ಹಿಮಭರಿತ ಹವಾಮಾನ ಪರಿಸ್ಥಿತಿ  ಭಾರೀ ಮಂಜಿನಿಂದ ಉಲ್ಬಣಗೊಂಡಿವೆ, ಮತ್ತು ನಗರದ ಹವಾಮಾನ ಇಲಾಖೆಯು ಈಗಾಗಲೇ ನಗರದ ವಿವಿಧ ಪ್ರದೇಶಗಳಲ್ಲಿ ಭಾರಿ ಹಿಮಪಾತದ  ಎಚ್ಚರಿಕೆ ನೀಡಿದೆ.ಸೋಮವಾರ, 1,328 ವಿಮಾನಗಳನ್ನು ಒಡಿಸಿ, 213,000 ಕ್ಕೂ ಹೆಚ್ಚು ಜನರನ್ನು ಸಾಗಿಸಲು ಯೋಜಿಸಲಾಗಿತ್ತು ಆದರೆ  ಇದಕ್ಕೆ ಹವಾಮಾನ ಅಡ್ಡಿಯಾಗಿದೆ .ವಿಮಾನ ನಿಲ್ದಾಣದಲ್ಲಿನ  ಹಿಮದ ಗೆಡ್ಡೆ ತೆಗೆಯಲು 400 ಸಿಬ್ಬಂದಿ  ಮತ್ತು 67 ವಿಶೇಷ ವಾಹನಗಳನ್ನು ನಿಯೋಜನೆ ಮಾಡಲಾಗಿದೆಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.