ಚಿಕಾಗೊ, ಜನವರಿ 18, ಚಿಕಾಗೋದ ವಿಮಾನ ನಿಲ್ದಾಣಗಳಲ್ಲಿ ಭಾರಿ ಹಿಮ , ಮಳೆಯ ಕಾರಣ 690 ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ ಎಂದು ಚಿಕಾಗೊ ವಿಮಾನಯಾನ ಇಲಾಖೆ ತಿಳಿಸಿದೆ."ಚಿಕಾಗೊದಲ್ಲಿ ಚಳಿಗಾಲದ ಮತ್ತು ಪ್ರತಿಕೂಲ ಹವಾಮಾನದ ಕಾರಣ ವಿಮಾನಯಾನ ಸಂಸ್ಥೆಗಳು 690 ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದೆ ಎಂದೂ ವಿಮಾನ ನಿಲ್ದಾಣ ಟ್ವೀಟ್ ನಲ್ಲಿ ತಿಳಿಸಿದೆ.ಇಲಾಖೆಯ ಪ್ರಕಾರ, ಒ'ಹೇರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ 686 ವಿಮಾನಗಳು ರದ್ದಾಗಿದ್ದರೆ, ಮಿಡ್ವೇ ಅಂತಾರಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 169 ವಿಮಾನ ಸಂಚಾರ ರದ್ದಾಗಿವೆ. ಜೊತೆಗೆ ಹಿಮದ ಕಾರಣ ಸುಮಾರು 470 ವಿಮಾನಗಳ ಆಗಮನವೂ ವಿಳಂಬವಾಗಿವೆ.ಹಿಮದ ಬಿರುಗಾಳಿ, ಮಳೆ ಶುಕ್ರವಾರ ಮಧ್ಯಾಹ್ನ ಚಿಕಾಗೊವನ್ನು ಅಪ್ಪಳಿಸಿದೆ. ಹಿಮಪಾತದಿಂದಾಗಿ ಅಪಾಯಕಾರಿ ರಸ್ತೆ ಪರಿಸ್ಥಿತಿಗಳ ಬಗ್ಗೆ ರಾಷ್ಟ್ರೀಯ ಹವಾಮಾನ ಸೇವೆ ಎಚ್ಚರಿಸಿದೆ. ಶನಿವಾರ ಮುಂಜಾನೆ ಈ ಪ್ರದೇಶದಲ್ಲಿ 5 ಇಂಚುಗಳಷ್ಟು ಹಿಮ ಆವೃತವಾಗಿತ್ತು.
ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಶುಕ್ರವಾರ ಸಂಜೆ ಒ'ಹೇರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಚಾರ ನಿಲ್ಲಿಸಲಾಗಿದೆ ಎಂದು ಚಿಕಾಗೊ ಟ್ರಿಬ್ಯೂನ್ ವರದಿ ಮಾಡಿದೆ, ವಿಮಾನ ನಿಲ್ದಾಣಕ್ಕೆ ಬರಲು ನಿಗದಿಯಾದ ಎಲ್ಲಾ ಒಳಬರುವ ವಿಮಾನಗಳನ್ನು ನಿರ್ಬಂಧಿಸಲಾಗಿದೆ . ಆದಾಗ್ಯೂ, ಈ ಸಮಯದಲ್ಲಿ ಮಿಡ್ವೇ ವಿಮಾನ ನಿಲ್ದಾಣದ ಮೇಲೆ ನಿಲುಗಡೆ ಪರಿಣಾಮ ಬೀರುವುದಿಲ್ಲ ಎಂದೂ ನಗರ ವಿಮಾನಯಾನ ಇಲಾಖೆಯ ವಕ್ತಾರ ಕರೆನ್ ಪ್ರೈಡ್ ಹೇಳಿದ್ದಾರೆ.