ಭುವನೇಶ್ವರ್, ಜೂನ್ 28: ಅಸ್ಸಾಂನಲ್ಲಿ ಭಾರಿ ಮಳೆ ಮುಂದುವರಿದಿದ್ದು ಪ್ರವಾಹ ಭೀತಿ ಇದೆ. ಸುಮಾರು ಎರಡು ಲಕ್ಷ 62 ಸಾವಿರ ಜನರು ಪ್ರವಾಹ ಪೀಡಿತ 21 ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಈವರೆಗೆ 18 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೇ ತುಂಬಿ ಹರಿಯುತ್ತಿರುವ ನೀರು ಬೆಳಗಳಿಗೆ ಭಾರಿ ಹಾನಿ ಉಂಟು ಮಾಡಿದೆ. ರಸ್ತೆ ಮತ್ತು ಸೇತುವೆ, ಕಾಲುವೆಗಳಲ್ಲಿ ನೀರು ಹರಿಯುತ್ತಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ.ಸುಮಾರು 19 ಸಾವಿರ ಜನರು ತಾತ್ಕಾಲಿಕ ಆಶ್ರಯ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸ್ಥಳೀಯ ಆಡಳಿತ ಪ್ರವಾಹದಿಂದ ಬಾಧಿತರಾದವರಿಗೆ ಆಹಾರ ಸಾಮಗ್ರಿಗಳನ್ನು ನೀಡಿದೆ.ಎಲ್ಲ ಪ್ರವಾಹ ಪೀಡಿತರಿಗೆ ನೆರವು ನೀಡುವಂತೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನೋವಾಲ್ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.