ಮಹಾಲಿಂಗಪೂರ :ಕನರ್ಾಟಕದ ಬೆಳಗಾವ ಜಿಲ್ಲೆ,ಮಹಾರಾಷ್ಟ್ರದ ಕ್ರಿಷ್ಣಾ ಕಣಿವೆಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಕೆಳಮಟ್ಟದಲ್ಲಿ ಬರುವಂತ ಉತ್ತರ ಕನರ್ಾಟಕ ವಾಯುವ್ಯ ಭಾಗದ ಘಟಪ್ರಭಾ, ಮಲಪ್ರಭಾ, ಕೃಷ್ಣಾ, ಭೀಮಾ ಒಟ್ಟು ಐದು ನದಿಗಳು ಅಪಾಯಕಾರಿ ಮಟ್ಟ ಮೀರಿ ಹರಿಯುತ್ತಿವೆ. ದೇಶದ ಹಲವಾರು ಕಡೆಗಳಲ್ಲಿ ಪ್ರಾಣ ಹಾನಿ ಜೊತೆಗೆ ಆಸ್ತಿಪಾಸ್ತಿ ನಷ್ಟವೂ ಉಂಟಾಗಿದ್ದನ್ನು ಮಾದ್ಯಮಗಳಲ್ಲಿ ನೋಡುತಿದ್ದೇವೆ.ಹಿರಣ್ಯಕೇಶಿ ಹಾಗೂ ಧೂಪದಾಳ್ ಜಲಗಾರದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರ ಬಿಡುತ್ತಿರುವುದರಿಂದ ಬಾಗಲಕೋಟ ಜಿಲ್ಲೆಯ ಐದು ಸೇತುವೆಗಳು ಮುಳಗಡೆಗೊಂಡಿವೆ.
ಮಹಾಲಿಂಗಪೂರ ದಿಂದ ಎಂಟು ಕಿ.ಮಿ ದೂರದ ಮುಧೋಳ ತಾಲೂಕಿನ ಡವಳೇಶ್ವರ್ ಗ್ರಾಮದ ಹತ್ತಿರವಿರುವ ಘಟಪ್ರಭಾ ನದಿಯು ಗಾಯದ ಮೇಲೆ ಬರೆ ಎಳದಂತೆ ಹದಿನೈದು ದಿವಸಗಳಲ್ಲಿ ಎರಡನೆ ಸಲ ತುಂಬಿ ಹರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲೆಯ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಗಡಿಭಾಗದಲ್ಲಿ ಬರುವ ಹಳ್ಳಿಗಳ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡು ಜನರೆಲ್ಲಾ ಪರದಾಡುವಂತಾಗಿದೆ.ಡವಳೇಶ್ವರ್ ಸೇತುವೆ ಬಾಗಲಕೋಟ ಹಾಗೂ ಬೆಳಗಾವಿ ಜಿಲ್ಲೆಯನ್ನು ಜೋಡಿಸುವ ಸಂಪರ್ಕ ಕೊಂಡಿ.
ಕೌಜಲಗಿ,ಕುಲಗೋಡ್,ಯಾದವಾಡ ಹಾಗೂ ಇದರ ಸುತ್ತಲಿನ ಹತ್ತಾರು ಹಳ್ಳಿಗಳು ಸೇರಿ ನದಿ ಪಾತ್ರಗಳ ಹಳ್ಳಿಗಳಾದ ಡವಳೇಶ್ವರ್, ವೆಂಕಟ್ಯಾಪೂರ, ತಿಮ್ಮಾಪೂರ್ಬೀಸನಕೊಪ್ಪ, ಯರಗುದ್ರಿ, ಮಲ್ಲಾಪೂರ್, ನಂದಗಾವ, ಅವರಾದಿ, ಅರಳಿಮಟ್ಟಿ, ಮಿಜರ್ಿ,ಒಂಟಗೋಡಿ,ಇನ್ನೂ ಹಲವಾರು ಹಳ್ಳಿಗಳ ಜನ ಹೈನುಗಾರಿಕೆ ಪದಾರ್ಥ, ಕಾಯಿಪಲ್ಯ, ದವಸ ಧಾನ್ಯ,ಬಟ್ಟೆ- ಬರೆ ಇನ್ನೂ ಅನೇಕ ತರಹದ ವಸ್ತುಗಳ ವ್ಯಾಪಾರ ವಹಿವಾಟಿಗಾಗಿ ವ್ಯಾಪಾರಸ್ಥರು ಹಾಗೂ ಗ್ರಾಹಕರು, ವಿಧ್ಯಾಭ್ಯಾಸಕ್ಕಾಗಿ ವಿಧ್ಯಾಥರ್ಿಗಳು ಪ್ರಮುಖ ವ್ಯಾಪಾರ ಮತ್ತು ಶೈಕ್ಷಣಿಕ ಕೇಂದ್ರವಾದ ಮಹಾಲಿಂಗಪೂರವನ್ನು ಅವಲಂಭಿಸಿದ್ದಾರೆ. ಈಗಾಗಲೆ ಮೂರು ದಿವಸ ಕಳೆದು ಹೊಗಿದ್ದು ಮುಂದಿನ ದಿನಗಳಲ್ಲಿ ಇದೆ ರೀತಿ ಪ್ರವಾಹ ಪರಿಸ್ಥಿತಿ ಮುಂದುವರೆದರೆ ಇನ್ನೂ ಹೆಚ್ಚಿನ ಜನ ಜಾನುವಾರುಗಳಿಗೆ ಹಾಣಿಯಾಗಲಿದ್ದು ಕಾರಣ ಜಿಲ್ಲಾಡಳಿತ ಇತ್ತ ಗಮನಹರಿಸಿ ಬೋಟ್ ವ್ಯವಸ್ಥೆ ಜೊತೆಗೆ ಮುಳುಗು ತಜ್ಞರನ್ನು ನೇಮಿಸಬೇಕು.
ಸಾಂಕ್ರಾಮಿಕ ರೋಗಗಗಳಾದ ಚಿಕೂಂಗುನ್ಯಾ,ಮಲೇರಿಯಾ, ಡೆಂಗ್ಯು ಇತ್ಯಾದಿ ರೋಗಗಳು ಹರಡುವ ಭೀತಿ ಇದೆ.ಆದ್ದರಿಂದ ಔಷಧ ಪರಿಕರಗಳ ವ್ಯವಸ್ಥೆಯನ್ನೂ ಸಹ ಮಾಡಿದರೆ ಒಳ್ಳೆದು ಎಂದು ಜನ ಆಡಿಕ್ಕೊಳ್ಳುತಿದ್ದಾರೆ.
ಹೊಲ ಗದ್ದೆಗಳಲ್ಲಿ ನೀರು ಹೊಕ್ಕು ಕಬ್ಬಿನ ಬೆಳೆಗೆ ಹೆಚ್ಚಿನ ಹಾನಿಯಾಗದಿದ್ದರು ಪ್ರತಿ ಶತ ಇಪ್ಪತ್ತೈದು ಭಾಗ ಜಮೀನುಗಳಲ್ಲಿ ರೈತ ಬೆಳೆದ ಆಥರ್ಿಕ ಬೆಳೆಗಳಾದ ಅರಿಷಿನ,ಗೊಂಜಾಳು,ಹುರಳೆ,ಹೆಸರು,ತೊಗರೆ,ಅಲಸಂದಿ,ಟೊಮೆಟೊ,ಹೀರೆ,ಬದನೆ ಹಾಳಾಗಿ ಹೋಗುವಲ್ಲಿ ಯಾವುದೆ ಸಂಶಯವಿಲ್ಲ.
ಅನೇಕ ಕಡೆ ಮನೆಗಳಲ್ಲಿ ನೀರು ಹೊಕ್ಕು ಬಟ್ಟೆ-ಬರೆ, ಪಾತ್ರೆ ಪಗಡೆಗಳು,ಗ್ಯಾಸ್ ಟ್ಯಾಂಕ್,ಆಹಾರ ಸಾಮಗ್ರಿಗಳೂ ಸಹಿತ ಜೀವನಾವಶ್ಯ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.ಪ್ರವಾಹದ ಇಳಿಕೆಗೆ ಜನ ದೇವರಲ್ಲಿ ಪ್ರಾಥರ್ಿಸುತಿದ್ದಾರೆ.