ಬ್ರೆಜಿಲ್‌ನಲ್ಲಿ ಭಾರೀ ಪ್ರವಾಹ: ಸಾವಿನ ಸಂಖ್ಯೆ 52ಕ್ಕೇರಿಕೆ

ರಿಯೊ  ಡಿ ಜನೈರೊ, ಜ. 29 ಆಗ್ನೇಯ ಬ್ರೆಜಿಲ್‌ನ ಮಿನಾಸ್ ಗೆರೈಸ್  ರಾಜ್ಯದಲ್ಲಿ ಉಂಟಾದ ಭಾರೀ ಪ್ರವಾಹದಿಂದಾಗಿ ಒಟ್ಟು 52 ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ನಾಗರಿಕ ರಕ್ಷಣಾ ಸಂಸ್ಥೆ ಬುಧವಾರ ತಿಳಿಸಿದೆ.ಓರ್ವ  ವ್ಯಕ್ತಿ ಕಾಣೆಯಾಗಿದ್ದಾರೆ, 65 ಮಂದಿ ಗಾಯಗೊಂಡಿದ್ದಾರೆ, 28,893 ಜನರು  ಸ್ಥಳಾಂತರಗೊಂಡಿದ್ದು, 4,397 ಜನರು ನಿರಾಶ್ರಿತರಾಗಿದ್ದಾರೆ ಎಂದು ಸಂಸ್ಥೆ  ಪ್ರಕಟಣೆಯಲ್ಲಿ ತಿಳಿಸಿದೆ.

ಈ ಪ್ರದೇಶದಲ್ಲಿ ಶುಕ್ರವಾರದಿಂದ ಧಾರಾಕಾರ  ಮಳೆ ಸುರಿಯಲಾರಂಭಿಸಿದ್ದು, ಪರಿಣಾಮ 101 ಪಟ್ಟಣಗಳಲ್ಲಿ ಅಧಿಕಾರಿಗಳು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ, ಅವುಗಳಲ್ಲಿ ಹಲವು ಪಟ್ಟಣ ಪ್ರವಾಹದಿಂದ ಸಂಪೂರ್ಣವಾಗಿ ಜಲಾವೃತವಾಗಿವೆಮಿನಾಸ್ ಗೆರೈಸ್‌ನ ಪುನರ್ನಿರ್ಮಾಣ ಪ್ರಯತ್ನಕ್ಕಾಗಿ ಬ್ರೆಜಿಲ್‌ನ ಫೆಡರಲ್ ಸರ್ಕಾರವು  ಭಾನುವಾರ 90 ಮಿಲಿಯನ್ ರಿಯಲ್‌ಗಳನ್ನು (21.4 ಮಿಲಿಯನ್ ಅಮೆರಿಕನ್ ಡಾಲರ್) ವಾಗ್ದಾನ  ಮಾಡಿದೆ. ರಾಜ್ಯ ರಾಜಧಾನಿ ಬೆಲೊ ಹೊರಿಜಾಂಟೆದಲ್ಲಿ ಪ್ರವಾಹ, ಮಣ್ಣು ಕುಸಿತ ಮತ್ತು ಕಟ್ಟಡ ಕುಸಿತದಿಂದಾಗಿ ಶುಕ್ರವಾರದಿಂದ 13 ಜನರನ್ನು ಬಲಿಯಾಗಿದ್ದಾರೆ.