ಅಥಣಿ ; ಈಗ ಕಳೇದೆರಡು ದಿನಗಳಿಂದ ಪಟ್ಟಣ -ತಾಲೂಕಿನಾದ್ಯಂತ ಬೆಳೆಗ್ಗೆಯಿಂದಲೇ ಜಿಟಿ ಜಿಟಿ ಮಳೆ ಆರಂಭವಾಗಿ ಮಧ್ಯ್ನಾಹ- ಸಾಯಾಂಕಾಲ ಅರ್ಧಗಂಟೆ ಜೋರಾಗಿ ಮಳೆ ಬೀಳುತ್ತಿತ್ತು. ಬಳಿಕ ಆಗಾಗ ಜಿಟಿಜಿಟಿ ಮಳೆ ಬೀಳುತ್ತಿದೆ.. ನೀರಾವರಿ ಇಲಾಖೆಯ ಮಾಹಿತಿ ಪ್ರಕಾರ ಮಹಾರಾಷ್ಟ್ರದ ಕೋಯಿನಾ ಹಾಗೂ ಮತ್ತಿತರ ಪ್ರದೇಶಗಳಿಂದ ಹರಿದುಬರುತ್ತಿರುವ ನೀರು, ಇಲ್ಲಿಯ ಹಿಪ್ಪರಗಿ ಅಣೆಕಟ್ಟೆಗೆ ಬಂದು ಮುಂದೆ ಸಾಗುತ್ತಿರುವುದು. ಒಳ ಹರಿವು 1 ಲಕ್ಷ 41 ಸಾವಿರ ಕ್ಯೂಸೆಕ್ ಇದ್ದು , ಹೋರಹರಿವು 1 ಲಕ್ಷ 40 ಸಾವಿರ ಕ್ಯೂಸೆಕ್ ಇದೆ.
ಆಲಮಟ್ಟೆಯಲ್ಲೂ ಸಹ 1 ಲಕ್ಷ 28 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ಇದ್ದು, ಹೋರಹರಿವು 45 ಸಾವಿರ ಕ್ಯೂಸೆಕ್ ಆಣೆಕಟ್ಟೆ ನೀರಿನ ಮಟ್ಟ 518.33 ಮೀಟರ್ ಇದೆ ಎಂದು ನೀರಾವರಿ ಇಲಾಖೆಯ ಸಹಾಯಕ ಅಭಿಯಂತ ಅರುಣ ಯಲಗುದ್ರಿ ಮಾಹಿತಿ ತಿಳಿಸಿದ್ದಾರೆ.
ಪಟ್ಟಣದಲ್ಲಿಯಂತೇಯೇ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಹ ಮಳೆಯಾಗುತ್ತಿರುವುದು.ಅಷ್ಟೋಂದು ಜೋರುಯಿಲ್ಲದ್ದರಿಂದ ಹಾನಿಯಾದ ವರದಿಯಾಗಿಲ್ಲವೆಂದು ತಹಸೀಲ್ದಾರ ಪ್ರಶಾಂತ ಪಾಟೀಲ ಹೇಳಿದ್ದಾರೆ.
ಜಿಲ್ಲೆ, ಹಾಗು ಉತ್ತರಕನರ್ಾಟಕದಲ್ಲಿ ಬಾರಿ ಮಳೆಯಾಗುತ್ತಿರುವ ತಾಲೂಕಿನ ಮಾತ್ರ ಈ ಧ್ವನಿಯಿಲ್ಲ.(