ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡದ್ದು ತಿಳಿದು ಪ್ರೀಯಕರ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಿಕ ಘಟನೆ

ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡದ್ದು ತಿಳಿದು ಪ್ರೀಯಕರ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಿಕ ಘಟನೆ  Heartbreaking incident of a boyfriend committing suicide after learning that his girlfriend had comm

ಲೋಕದರ್ಶನ ವರದಿ, 

ಜಮಖಂಡಿ 09 : ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ತಿಳಿದು.ಪ್ರೀಯಕರ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಹೃದಯವಿದ್ರಾವಿಕ ಘಟನೆ ನಡೆದಿದೆ. ರಬಕವಿ, ಬನಹಟ್ಟಿ ಪಟ್ಟಣದಲ್ಲಿ ಈ ಘಟನೆ ಜರುಗಿದ್ದು. ಇಬ್ಬರು ಮದುವೆ ಮಾಡಿಕೊಳ್ಳುವ ವಿಚಾರವಾಗಿ ಮನೆಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರ ನಡುವೆ ಸಣ್ಣ-ಪುಟ್ಟ ಗಲಾಟೆ ಶುರುವಾಗಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಹಿತಿ ತಿಳಿದುಬರುತ್ತದೆ. 

ಇಬ್ಬರೂ ಪ್ರೇಮಿಗಳು ಚರ್ಚೆ ಮಾಡುವಾಗ ಗಲಾಟೆ ಮಾಡಿಕೊಂಡಿದ್ದಾರೆ. ಇದರಿಂದ ಮನನೊಂದ ಯುವತಿ ಪವಿತ್ರಾ ರಾಜಶೇಖರ ಒಂಟಿ (19) ತನ್ನ ಮನೆಯಲ್ಲಿ ನೇಣು ಬಿಗಿದ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. 

ಪ್ರೀಯತಮೆ ಪವಿತ್ರಾ ರಾಜಶೇಖರ ಒಂಟಿ ಆತ್ಮಹತ್ಯೆಗೆ ಶರಣಾದ ಮಾಹಿತಿ ತಿಳಿದುಕೊಂಡ ಪ್ರೀಯಕರ ಕಾರ್ತಿಕ ಚನ್ನಪ್ಪ ನಾಯಕ (21) ಯುವಕ ಜೀವದ ಭಯಗೊಂಡು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಮಾಹಿತಿ ಲಭ್ಯವಾಗಿದೆ. 

ಇಬ್ಬರು ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದು. ಸ್ಥಳಕ್ಕೆ ಬಾಗಲಕೋಟ ಜಿಲ್ಲಾ ಎಸ್,ಪಿ, ಸಿದ್ದಾರ್ಥ ಘೋಯಲ್ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಇಬ್ಬರೂ ಪಾಲಕರು ಏನು ದೂರು ನೀಡುತ್ತಾರೆ ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತೇವೆಂದು ಮಾಹಿತಿಯನ್ನು ನೀಡಿದ್ದಾರೆ.