ರಸ್ತೆ ಬದಿಯಲ್ಲಿಯೇ ಕಸದ ರಾಶಿ : ಸಿ.ಟಿ ಫಾರ್ಮ್ ಹೋಗುವ ರಸ್ತೆಯಾಗಿದೆ ದುರ್ಗಂಧದ ಆಗರ
Heaps of garbage on the side of the road: The road leading to CT Farm is a stench-filled place
ಮುಂಡಗೋಡ 09 : ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಸಿ.ಟಿ ಫಾರ್ಮ್ ಹೋಗುವ ರಸ್ತೆ ಬದಿ ಎಲ್ಲೆಲ್ಲಿಯೂ ಪ್ಲಾಸ್ಟಿಕ್ ರಾಶಿಯೇ ಕಂಡುಬರುತ್ತದೆ. ಸೀಟಿ ಪಾರ್ಮ ಹೋಗುವ ರಸ್ತೆಯುದ್ದಕ್ಕೂ ಪ್ಲಾಸ್ಟಿಕ್ ರಾಶಿಗಳಲ್ಲದೆ, ಮನೆಯ ತ್ಯಾಜ್ಯ ಸಹ ಚೆಲ್ಲಿರುವುದರಿಂದ ದುರ್ನಾತ ಬೀರುತ್ತಿದೆ.
ರಸ್ತೆಯ ಬದಿಯಲ್ಲೇ ಸಾರ್ವಜನಿಕರು ಕಸದ ರಾಶಿ ಗುಡ್ಡೆ ಹಾಕುತ್ತಿದ್ದಾರೆ.ಪಟ್ಟಣದಿಂದ ಬಂಕಾಪುರ ಹೋಗುವ ದಾರಿಯಲ್ಲಿ ರಸ್ತೆ ಬದಿಯಲ್ಲಿ ಕಸದ ರಾಶಿ ರಾಶಿಯಾಗಿ ಸಂಗ್ರಹವಾಗಿದ್ದು, ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಬೈಕ್ ಮತ್ತು ಆಟೋಗಳಲ್ಲಿ ಹೆಬ್ಬಾರ ನಗರಕ್ಕೆ ಮದುವೆ ಸಮಾರಂಭಕ್ಕೆ ಸಂಚರಿಸುವ ಜನರು ಸಹಜವಾಗಿಯೇ ಮೂಗು ಮುಚ್ಚಿಕೊಳ್ಳುತ್ತಾರೆ, ಆದರೆ ನಾಲ್ಕು ಚಕ್ರದ ವಾಹನಗಳು ಮತ್ತು ಭಾರೀ ವಾಹನಗಳಲ್ಲಿ ಸಂಚರಿಸುವವರು ದುರ್ವಾಸನೆ ಬೀರುವ ಈ ರಸ್ತೆ ಆದಷ್ಟು ಬೇಗ ದಾಟಲು ಬಯಸುತ್ತಾರೆ. ಪಟ್ಟಣದ ಸಿ.ಟಿ ಫಾರ್ಮ್ ಹೋಗುವ ರಸ್ತೆಯುದ್ದಕ್ಕೂ ಕಸ ಮತ್ತು ಕೊಳಕಿನ ರಾಶಿ ಬಿದ್ದಿದ್ದರೂ ಪಟ್ಟಣ ಪಂಚಾಯಿತಿ ಈ ಬಗ್ಗೆ ಅಧಿಕಾರಿಗಳು ಇದನ್ನು ಏಕೆ ಇನ್ನೂ ಗಮನಿಸಿಲ್ಲ ಎಂದು ಜನರು ಕೇಳುತ್ತಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 