ಯಮಕನಮರಡಿಯಲ್ಲಿ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ

ಯಮಕನಮರಡಿಯಲ್ಲಿ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ  Healthy Resolution Program at Yamakanamardhi

ಯಮಕನಮರಡಿ. 18 ; ಸ್ಥಳೀಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದಿನಾಂಕ 17/7/2025 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣಾಭಿವೃದ್ಧಿ ಯೋಜನೆ ಹುಕ್ಕೇರಿ ಜಿಲ್ಲಾ ಜನ ಜಾಗೃತಿ ವೇದಿಕೆ ಚಿಕ್ಕೋಡಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರಸ್ತಾವಿಕವಾಗಿ ಹನುಮಂತ್ ಸರ್   ಯಮಕಣಮರಡಿ  ವಲಯದ ಮೇಲ್ವಿಚಾರಕರು. ಶ್ರೀ ಧರ್ಮಸ್ಥಳ ಯೋಜನೆಯ  ರೂಪರೇಷಗಳನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಧಾರ್ಮಿಕವಾಗಿ ಶೈಕ್ಷಣಿಕವಾಗಿ ಹೆಗಡೆಯವರ ಆದರ್ಶಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. 

ಡಾಕ್ಟರ್ ಪ್ರಶಾಂತ್ ಬೆನ್ನೂರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಇವತ್ತಿನ ದಿನಮಾನಗಳಲ್ಲಿ ಮೊಬೈಲ್ ಬಳಕೆ ಆಹಾರ ಮೃದುವಾದ ಆಹಾರ ಸಾವಯವ ತರಕಾರಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು ಅನುರಾಧ ಕಾಪಸಿ ಮಹಿಳಾ ಒಕ್ಕೂಟಗಳ ಅಧ್ಯಕ್ಷರು ಇವರು ಯುವ ಜನತೆ ತರಕಾರಿಗಳ ಬಳಸುವ ಹೃದಯಾಘಾತದ ಬಗ್ಗೆ ಹಾಗೂ ದೇಶದ ಸಂಪತ್ತಿನ ಬಗ್ಗೆ  ವಿದ್ಯಾರ್ಥಿಗಳಿಗೆ ಅರಿವಿರಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಪಡಿಸಿದರು ಗ್ರಾಮ ಪಂಚಾಯತಿಯ ಅಧ್ಯಕ್ಷರು ಯಮಕಣ್ಣಮರಡಿ ಆಶ್ಮಾ ಪಣಿಬಂದ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು.

 ಕಾರ್ಯಕ್ರಮದ ಅಧ್ಯಕ್ಷೀಯ ಸ್ಥಾನವನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್‌ಎ ರಾಮನ್ ಕಟ್ಟಿ ವಹಿಸಿಕೊಂಡಿದ್ದರು ಸವಿತಾ ಮಜತಿ ಸೇವಾ ಪ್ರತಿನಿಧಿ ಶ್ರೀಮತಿ ಯಶೋಧ ನಾಯಕ್ ಸೇವಾ ಪ್ರತಿನಿಧಿ ಉಪಸ್ಥಿತಿ ಇದ್ದರು ಮಹಾವಿದ್ಯಾಲಯದ ಉಪನ್ಯಾಸಕರು ಉಪಸ್ಥಿತಿ ಇದ್ದರೂ ಕಾರ್ಯಕ್ರಮವನ್ನು ಎಸ್ ಆರ್  ತಬರಿ ನಡೆಸಿಕೊಟ್ಟರು.  ಎಸ್‌.ಎ.ಮಲಗೌಡನವರ ವಂದಿಸಿದರು.