ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ: ಯುವಕರು ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕು ಹಾವೇರಿ 0

ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ: ಯುವಕರು ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕು  ಹಾವೇರಿ 0 Healthy Resolution Program: Youth should develop good habits Haveri 0

ಲೋಕದರ್ಶನ ವರದಿ 

ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ: ಯುವಕರು ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕು  

ಹಾವೇರಿ 04: ಒಳ್ಳೆಯ ಹವ್ಯಾಸಗಳು ಕಹಿ ಎನಿಸಿದರು ಜೀವ ರಕ್ಷಕ ಓಷಧಿಗಳು ಮನುಷ್ಯನ ಜೀವನದಲ್ಲಿ ಕೆಟ್ಟವ್ಯಾಸಗಳು ಮುಂದೊಂದು ದಿನ ಖಾಯಿಲೆಗೆ ಕಾಡುತ್ತೇವೆ. ಒಳ್ಳೆಯ ಹವ್ಯಾಸಗಳು ಎಷ್ಟೇ ಕಹಿ ಎನಿಸಿದರೂ ಜೀವ ರಕ್ಷಕದಂತೆ ಕಾಪಾಡುತ್ತೇವೆ ಎಂದು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು. 

        ನಗರದ ಸರ್ಕಾರಿ ಕನ್ನಡ ಪ್ರೌಢಶಾಲೆಯಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏರಿ​‍್ಡಸಿದ್ದ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು  

      ವಿಶ್ವಸಂಸ್ಥೆಯ ಮತ್ತು ಆರೋಗ್ಯ ಸಂಸ್ಥೆಯ ಸಮೀಕ್ಷೆಗಳ ಪ್ರಕಾರ 14 ರಿಂದ 23ರ ವಯೋಮತಿಯಲ್ಲಿರುವವರು ಮಾದಕ ವಸ್ತುಗಳ ರುಚಿ ನೋಡುವವರ ಪ್ರಸ್ತುತ 10 ಜನರಲ್ಲಿ 3 ಜನರು ಧೂಮಪಾನ ಮತ್ತಿತರ ಚಟಗಳಿಗೆ ದಾಸರಾಗುತ್ತಿದ್ದಾರೆ ಆತಂಕಕಾರಿ ವಿಷಯವೇನೆಂದರೆ ಪ್ರತಿವರ್ಷ ದೇಶದಲ್ಲಿ 55,000 ಗುಟುಕ ವ್ಯಸನಿಗಳಾಗುತ್ತಾರೆ.ಒಂದು ಬಾರಿ ಗುಟ್ಕಾ ಸೇವನೆಯಿಂದ 4000 ವಿಧದ ರಾಸಾಯನಿಕಗಳು ದೇಹ ಸೇರುತ್ತವೆ ಪ್ರತಿ ವರ್ಷ 10 ಲಕ್ಷ ಜನರು ಕ್ಯಾನ್ಸರ್ ಗೆ ಬಲಿ ಆಗುತ್ತಾರೆ ಎಂದು ಉದಾಹರಣೆಗಳ ಮೂಲಕ ತಿಳಿಸಿದರು. 

      ಯೋಜನೆಯ ಕೃಷಿ ಅಧಿಕಾರಿ ಬಸವರಾಜ ಮಾತನಾಡಿ ಧರ್ಮಸ್ಥಳ ಪೂಜಾರಿ ಪ್ರಗತಿ ನಿಧಿ ಪ್ರಗತಿ ಬಂದು ಜ್ಞಾನವಿಕಾಸ ಶಾಲೆಗಳಿಗೆ ಪೀಠೋಪಕರಣ ಮುಂತಾದ ಹತ್ತು ಹಲವು ಸಮಾಜಮುಖಿ ಜನಪರ ಯೋಜನೆಗಳು ವರದಾನವಾಗಿವೆ ಎಂದರು. 

 ಮುಖ್ಯೋಪಾಧ್ಯಯರಾದ ಪುಷ್ಪಲತಾ ಬಿದರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹದಿಹರೆಯದ ವಯಸ್ಸು ಅತ್ಯಂತ ಅಪಾಯಕಾರಿ ವಯಸ್ಸಿನಲ್ಲಿ ವಿದ್ಯಾರ್ಥಿಗಳು ಉತ್ತಮವ್ಯಾಸಗಳನ್ನು ರೂಡಿಸಿಕೊಂಡು ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಬೇಕು.ಸಮಾಜದ ಸ್ವಸ್ಥ ಕಾಪಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿ ಧರ್ಮಸ್ಥಳ ಪೂಜ್ಯರ ವಿದಾಯಕ ಕಾರ್ಯಕ್ರಮಗಳನ್ನು ಶ್ಲಾಖಿಸಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸ್ವಾಸ್ಥ ಸಂಕಲ್ಪ ಪ್ರತಿಜ್ಞೆ ಮಾಡಿದರು ಒಕ್ಕೂಟದ ಶಾಂತಮ್ಮ, ಮೇಲ್ವಿಚಾರಕರು ಹಾಗೂ ನೇತ್ರಾವತಿ ವೇದಿಕೆಯಲ್ಲಿದ್ದರು.ಪಿ.ಎಸ್ ಉಪ್ಪಣಸಿ ಸ್ವಾಗತಿಸಿದರು ಹಾಗೂ ನಿರ್ಮಲ ಗೌಡ ವಂದಿಸಿದರು.