ಸಾತ್ವಿಕತೆ ಮತ್ತು ಸತ್ವಯುತ ಆಹಾರದಿಂದ ಆರೋಗ್ಯ ರಕ್ಷಣೆ: ಸೀತಾ ಕೋಟಿ
Health protection through sattvic and sattvic food: Sita Koti
ರಾಣೇಬೆನ್ನೂರು 17: ಮಾನವನ ಆರೋಗ್ಯ ಜೀವನಕ್ಕೆ ದಂತಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ದಂತಗಳು ಭಾದೆ ಬಂದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅದಕ್ಕಾಗಿ ದಂತಗಳ ರಕ್ಷಣೆಗೆ ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದೆ ಎಂದು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸೀತಾ ಕೋಟಿ ಹೇಳಿದರು.
ನಗರ ಹೊರ ವಲಯದ, ಆರಿ್ಟ. ಇ. ಎಸ್. ಕಲಾ, ವಿಜ್ಞಾನ, ವಾಣಿಜ್ಯ ವಿದ್ಯಾಲಯದಲ್ಲಿ, ಇನ್ನರ್ ವ್ಹಿಲ್ ಸೇವಾ ಸಂಸ್ಥೆ, ದಾವಣಗೆರೆ ಬಾಪೂಜಿ ದಂತ ವಿಜ್ಞಾನ ಮಹಾವಿದ್ಯಾಲಯ, ಸಮುದಾಯ ದಂತ ಚಿಕಿತ್ಸಾಲಯ ವಿಭಾಗ, ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ಐಕ್ಯೂಎಸಿ ಆಯೋಜಿಸಿದ್ದ ದಂತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂದಿನ ಆಹಾರ ಕ್ರಮಗಳಲ್ಲಿ ಯಾವುದೇ ಸತ್ವವಿಲ್ಲ. ಸಾತ್ವಿಕತೆ ಮತ್ತು ಸತ್ವಯುತ ಆಹಾರದಿಂದ ಮಾತ್ರ ಆರೋಗ್ಯ ರಕ್ಷಣೆ ಎನ್ನುವ ವಾಸ್ತವಿಕ ಸ್ಥಿತಿಯನ್ನು, ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾಗಿದೆ ಎಂದರು.
ಸಮಗ್ರ ಆರೋಗ್ಯ ರಕ್ಷಣೆಯಲ್ಲಿ ದಂತಗಳ ಪಾತ್ರ ಕುರಿತಂತೆ ಕಾಲೇಜು ಪ್ರಾಂಶುಪಾಲ ಸಿ.ಎ. ಹರಿಹರ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಇನ್ನರ್ ವ್ಹಿಲ್ ಸಂಸ್ಥೆಯ ಅಧ್ಯಕ್ಷ ಸಂಜನಾ ಕುರವತ್ತಿ, ಉಪಾಧ್ಯಕ್ಷ ಪ್ರಮೀಳಾ ಜಂಬಿಗಿ, ಭಾಗ್ಯಶ್ರೀ ಗುಂಡಗಟ್ಟಿ, ರಶ್ಮಿ ಪಿಸೆ, ಮತ್ತು ಸದಸ್ಯರು, ಗ್ರಂಥಪಾಲಕ ಡಾ,ಪಿ.ಬಿ. ಕೊಪ್ಪದ, ಪ್ರವೀಣ್ ಎನ್.ಎ, ಬಾಪೂಜಿ ದಂತ ವಿದ್ಯಾಲಯದ ಡಾ, ಪ್ರಶಾಂತ್ ಜಿ.ಎಂ., ಡಾ. ಮಿಥುನ್, ಡಾ, ಪ್ರಿಯಾ, ವೈದ್ಯರಾದ ಶ್ರೀನಿಧಿ, ಅನನ್ಯ, ಅಮೃತಾ, ಹೇವಿನಿ ಅವರುಗಳು, ವಿದ್ಯಾರ್ಥಿಗಳ ನಿತ್ಯ ಅನುಸರಿಸಬೇಕಾದ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕ ಡಾ. ಮಧುಕುಮಾರ ಆರ್, ಅಂಜನಾ ಪವಾರ, ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು. ಕಲ್ಲನಗೌಡ ಪ್ರಾರ್ಥಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ, ಸರಸ್ವತಿ ಬಮ್ಮನಾಳ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 