ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ
Health check-up and blood donation camp at Haveri District Stadium
ಲೋಕದರ್ಶನ ವರದಿ
ಹಾವೇರಿ 25: ಉತ್ತಮ ಆಹಾರ ಪದ್ದತಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವುದರ ಜತೆಗೆ ದಿನ ನಿತ್ಯವು ಒಂದಿಲ್ಲಾ ಒಂದು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆರೋಗ್ಯ ರಕ್ಷಣೆ ಮಾಡಿಕೊಳ್ಳುವಂತೆ ವಿಧಾನಸಭೆ ಉಪಸಭಾಧ್ಯಕ್ಷ,ಶಾಸಕ ರುದ್ರ್ಪ ಲಮಾಣಿ ಹೇಳಿದರು. ಶಾಸಕ ರುದ್ರ್ಪ ಲಮಾಣಿ ಜನ್ಮದಿನದ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣ ಬಳಿ ಭಾನುವಾರ ದರ್ಶನ್ ಲಮಾಣಿ ಅಭಿಮಾನಿ ಬಳಗದಿಂದ ಏರಿ್ಡಸಿದ್ದ ಉಚಿತ ಆರೋಗ್ಯ ತಪಾಸಣೆ, ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಬದಲಾದ ಆಹಾರ ಪದ್ದತಿಯಿಂದ ಜನತೆಯು ಹಲವಾರು ಕಾಯಿಲೆಯಿಂದ ಬಳಲುತ್ತಿದ್ದಾರೆ. ಸಾಮಾನ್ಯ ಜನತೆಗೆ ಇಂತಹ ಉಚಿತ ಆರೋಗ್ಯ ತಪಾಸಣೆಯ ಶಿಬಿರಗಳು ಹೆಚ್ಚು, ಹೆಚ್ಚು ನಡೆಯಬೇಕಾಗಿದೆ ಎಂದು ತಿಳಿಸಿದರು. ಇದೇ ವೇಳೆ ಶಾಸಕ ರುದ್ರ್ಪ ಲಮಾಣಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿಕೊಂಡು ಜನ್ಮ ದಿನವನ್ನು ಸಂಭ್ರಮಿಸಿದರು. ಅಭಿಮಾನಿಗಳು ಶಾಸಕರಿಗೆ ಹೂ ಗುಚ್ಚ ಶುಭಾಶಯ ಕೋರಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ ಲಮಾಣಿ,ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ,ಶಂಕರ ಮೆಹರವಾಡೆ,ದಾಸಪ್ಪ ಕರ್ಜಗಿ,ರಾಘವೇಂದ್ರ ಬಾಸೂರ, ಮಲ್ಲಿಕಾರ್ಜುನ ಬೂದಗಟ್ಟಿ,ಸಂಜಯಗಾಂಧಿ ಸಂಜೀವಣ್ಣವರ,ಸುಭಾಷ್ ಚವ್ಹಾಣ,ಡಾ. ಸಂಜಯ ಡಾಂಗೆ,ಜಮೀರ್ ಜಿಗರಿ,ಅತಾವುಲ್ಲಾ ಖಾಜಿ,ಸುಧೀರ ಲಮಾಣಿ,ನಾಗರಾಜ ಜೋರಾಪುರಿ, ಶಾಂತಕ್ಕ ಶಿರೂರ, ಮಮತಾ ಜಾಬಿನ್, ಪ್ರಮೋದ್ ನವಲೆ, ಸಂಜನಾ ಲಮಾಣಿ, ಈರಣ್ಣ ಚೌಡಣ್ಣನವರ,ನಾಗರಾಜ ಬಡೆಮ್ಮನವರ,ವಿನಯ್ ಪಾಲನಕರ, ನೂರಅಹ್ಮದ ಕರ್ಜಗಿ,ಬಸವರಾಜ ಜಾಬೀನ್,ಶ್ರೀಧರ ದೊಡ್ಡಮನಿ, ಅಶೋಕಸಿಂಗ ರಜಪೂತ, ಉಮರ್ ಇನಾಮದಾರ, ಉಮೀದ ನದಾಫ, ರಾಧಾ ಸವಣೂರ,ಬಸವರಾಜ ಮಾಳಗಿ,ಮಹಾಲಿಂಗಯ್ಯ ಪಾಟೀಲ ಸೇರಿದಂತೆ ಅನೇಕರಿದ್ದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 