ಸಿಂದಗಿ ಸರಕಾರಿ ತಾಲೂಕಾಸ್ಪತ್ರೆಯಲ್ಲಿ ಆರೋಗ್ಯ ಶಿಬಿರ

ಸಿಂದಗಿ ಸರಕಾರಿ ತಾಲೂಕಾಸ್ಪತ್ರೆಯಲ್ಲಿ ಆರೋಗ್ಯ ಶಿಬಿರ Health camp at Sindagi Government Taluka Hospital

ಲೋಕದರ್ಶನ ವರದಿ 

       ಸಿಂದಗಿ 06; ಯುವಕರು ಮಾದಕ ವಸ್ತುಗಳಾದ ಮದ್ಯಪಾನ ದೂಮ್ರಪಾನ ಮೊಬೈಲ ಹಾಗೂ ಡ್ರಗ್ಸ್ಕೆಟ್ಟ ವ್ಯಸನಗಳಿಗೆ ಬಲಿಯಾಗುತ್ತಿದ್ದು ಹಾಗೂ ರೈತರು ಕೂಲಿಕಾರ್ಮಿಕರು ಆತುರದ ಬದುಕಿಗೆ ಹೆಚ್ಚು ಒಲವು ನೀಡಿ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಿದ್ದಾರೆ ಎಂದು ತಾಲೂಕ ಆಸ್ಪತ್ರೆಯ ಆಪ್ತ ಸಮಾಲೋಚಕಿ ರೂಬಿನಾ ನಧಾಪ ವಿಷಾದ ವ್ಯಕ್ತಪಡಿಸಿದರು. 

      ತಾಲೂಕಿನ ಯರಗಲ್ ಬಿ ಕೆ ಗ್ರಾಮದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ದಿ ಕೇಂದ್ರ ಹಾಗೂ ಸರಕಾರಿ ತಾಲೂಕ ಆಸ್ಪತ್ರೆ ಸಿಂದಗಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ  ಮಾತನಾಡಿ, ಪ್ರತಿತಿಂಗಳದ ಮೊದಲನೆ ಮಂಗಳವಾರ ವಿಜಯಪುರ ಜಿಲ್ಲಾ ಆಸ್ಪತ್ರೆಯಿಂದ ಮನೋವೈದ್ಯರು ಬರುತ್ತಾರೆ. ಮಾನಸಿಕ ಗೊಂದಲ ಇದ್ದವರು ಬಂದು ಸೂಕ್ತವಾದ ಸಲಹೆ ಪಡೆದುಕೊಳ್ಳಬಹುದು ಎಂದರು. 

       ತಾಲೂಕ ಆಸ್ಪತ್ರೆ ರಪೀಕ ಮುಲ್ಲಾ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಹೇಚ್ಚು ರೈತರು ಕೂಲಿಕಾರ್ಮಿಕರು ತಮ್ಮ ಆರೋಗ್ಯವನ್ನು ನಿರ್ಲಕ್ಷಸಿ ಕೇಲಸಗಳಿಗೆ ಹೆಚ್ಚು ಒತ್ತು ನೀಡುತ್ತಾರೆ ವರ್ಷದಲ್ಲಿ ಎರಡು ಬಾರಿ ಅಧಿಕ ರಕ್ತದೊತಡ ಹಾಗೂ ಸಕ್ಕರೆಕಾಯಿಲೆ ಇಂತಹ ಸಾಮಾನ್ಯ ಆರೋಗ್ಯ ತಪಾಷಣೆ ಮಾಡುವುದರ ಜೊತೆಗೆ ಮುಜಾಗ್ರತ ಕ್ರಮಗಳನ್ನು ವಹಿಸಬೇಕೆಂದು ತಿಳಿಸಿದರು.                                                                                                         

        ಸಂಗಮ ಸಂಸ್ತೆಯ ನಿರ್ದೇಶಕ  ಪಾ.ಸಂತೋಷ ಮಾತನಾಡಿ, ತಾಲ್ಲೂಕಿನ ಹಳ್ಳಿಗಳಲ್ಲಿ ರೈತರ ಗುಂಪುಗಳು ರಚಿಸಿ ಸಾವಯವ ಹಾಗೂ ನೈಸರ್ಗಿಕ ಕೃಷಿಯಿಂದ ಮಣ್ಣಿನ ಪಲವತ್ತತೆ ಹಾಗೂ ಆರೋಗ್ಯ ಗುಣ್ಣಮಟ್ಟ ಹೆಚ್ಚಿಸಿ ಆರೋಗ್ಯದ ಸಮತೋಲನ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.  ಪ್ರಕಾಶ ರಾಠೋಡ, ಮಡಿವಾಳಮ್ಮ ಹೀರೆಮಠ, ಸಿ.ಪ್ರೀಯಾಂಕ, ಬಸವರಾಜ ಬಿಸನಾಳ, ಸಂಗಮ ಸಂಸ್ಥೆಯ ಕಾರ್ಯಕರ್ತರು ಅಡಿವೆಪ್ಪ ಹೇರ್ರೈತ ಸಂಘದ ಸದಸ್ಯರು ಗ್ರಾಮದ ಹಿರಿಯರು ಮಹಿಳೆಯರು ಭಾಗವಹಿಸಿ ಆರೋಗ್ಯ ತಪಾಸನೆ ಮಾಡಿಕೊಂಡರು.