ವಚನಗಳ ಮೂಲಕ ಕಾಯಕದ ಮಹತ್ವ ಸಾರಿದ್ದಾರೆ : ಪಠಾಣ

ವಚನಗಳ ಮೂಲಕ ಕಾಯಕದ ಮಹತ್ವ ಸಾರಿದ್ದಾರೆ : ಪಠಾಣ He has conveyed the importance of Kayaka through his verses: Pathana

ಶಿಗ್ಗಾವಿ   17: ಕಾಯಕನಿಷ್ಠ ಯೋಗಿ ಶಿವಶರಣ ನುಲಿಯ ಚಂದಯ್ಯನವರು ಶ್ರೇಷ್ಠ ವಚನಕಾರರು. ತಮ್ಮ ವಚನಗಳ ಮೂಲಕ ಕಾಯಕದ ಮಹತ್ವ ಸಾರಿದ್ದಾರೆ ಎಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು.   

ಪಟ್ಟಣದ ಸಂತೆ ಮೈದಾನದಲ್ಲಿ ತಾಲೂಕು ಕೊರವ ಸಮಾಜದಿಂದ  ಆಯೋಜಿಸಿದ್ದ ಶ್ರೀ ಶರಣ ನುಲಿಯ ಚಂದಯ್ಯನವರ 918 ನೇಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಮತ್ತೊಬ್ಬರ ಒಳಿತು ಬಯಿಸುವ ಕೊರವ ಸಮಾಜದ ಸಾಮಾಜಿಕ ಚಟುವಟಿಕೆಗಳಿಗೆ ಅನುಕೂಲವಾಗಲು ಪಟ್ಟಣದಲ್ಲಿ ಸುಸಿಜ್ಜಿತ ಸಭಾ ಭವನವೊಂದು ಬರುವ ವರ್ಷದೊಳಗೆ ನಿರ್ಮಿಸುವುದಾಗಿ ಶಾಸಕ ಯಸೀರಖಾನ್ ಪಠಾಣ ಭರವಸೆ ನೀಡಿದರು.   ಸಮಾಜದ ಬಹು ದಿನದ ಬೇಡಿಕೆ ಭವನ ನಿರ್ಮಾಣಕ್ಕೆ ಪುರಸಭೆಯಿಂದ ಜಾಗ ಪಡೆದು, ಕಟ್ಟಡಕ್ಕೆ ಸೂಕ್ತ ಅನುದಾನ ಕಲ್ಪಿಸುತ್ತೇನೆ. ಸಂಪ್ರದಾಯಕ ಆಚರಣೆಗಳಲ್ಲಿ ಕೊರವ ಸಮಾಜ ಎಲ್ಲರಿಗೂ ಅವಶ್ಯ. ಬೆಳೆಯುತ್ತಿರುವ ಸಮಾಜದ ಬೇಕುಗಳಿಗೆ ಸ್ಪಂದಿಸಿ ಪರಿಹಾರ ಕಲ್ಪಿಸಲು ಬದ್ಧನಾಗಿದ್ದೇನೆ ಎಂದರು.  ಗಡಿ ಪ್ರದೇಶ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ ತಮ್ಮ ಕಾಯಕ ನಿಷ್ಠೆಯಿಂದ ಪರಮಾತ್ಮನನ್ನು ಒಲಿಸಿಕೊಂಡ ಸೌಮ್ಯ ಸ್ವಾಭಾವದ ಸಮಾಜ ಇದಾಗಿದ್ದು, ನೂಲಿಯ ಚಂದಯ್ಯನವರು ತಳ ಸಮುದಾಯದಲ್ಲಿ ಜನಿಸಿ, ಶ್ರೇಷ್ಠ ವಚನಗಳನ್ನು ರಚಿಸಿ ಸಮಾಜದ ಕಣ್ಣಡಿಯಾಗಿದ್ದಾರೆ. ಚಂದಯ್ಯನವರ ವಚನಗಳನ್ನು ನಿತ್ಯ ಪಠಿಸಬೇಕು. ವಚನಗಳ ಸಾರ ಅರಿಯಬೇಕು ಎಂದರು.  ಸವಣೂರ ತಹಸೀಲ್ದಾರ್ ರವಿ ಕೊರವರ ಮಾತನಾಡಿ ಸಮಾಜದ ಕಾಯಕ ಶ್ರೇಷ್ಠವಾಗಿದೆ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ. ಶಿಕ್ಷಣದಿಂದಲೇ ಸಮಾಜ ಸುಧಾರಣೆ ಸಾಧ್ಯ. ಅನೇಕರು ಅತ್ಯುನ್ನುತ ಹುದ್ದೆ ಅಲಂಕರಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸಣ್ಣ ಸಮಾಜ ಎಂದು ಕೊರಬೇಡಿ ಕಾಯಕದಲ್ಲಿ ದೊಡ್ಡ ಸಮಾಜವಾಗಿದೆ ಎಂದರು.

ವಿರಕ್ತಮಠ ಸಂಗನಬಸವ ಶ್ರೀಗಳು ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷೆ  ಮಲ್ಲಮ್ಮ ಸೋಮನಕಟ್ಟಿ, ಅಶೋಕ ಕಾಳೆ, ಫಕ್ಜೀರ​‍್ಪ ಕುಂದೂರ, ರಮೇಶ ಹರಿಜನ, ರಾಮಣ್ಣ ವಡ್ಡರ, ವಿರೇಶ ಆಜೂರು, ಆನಂದ ಮರಡೂರು, ಕೆಂಬಗೋಡೆಪ್ಪ ಭಜಂತ್ರಿ, ಅರುಣಕುಮಾರ ಕೊರಗರ, ಹರೀಶ, ವಿಜಯ ವಾಜಂತ್ರಿ, ತಿರುಪತಿ ಭಜಂತ್ರಿ, ಈಶ್ವರ​‍್ಪ ಭಜಂತ್ರಿ, ಫಕ್ಕೀರ​‍್ಪ ಭಜಂತ್ರಿ, ರಾಘವೇಂದ್ರ ಭಜಂತ್ರಿ, ಗುಡ್ಡಪ್ಪ ಜಲದಿ, ಎಫ್‌.ಮಣಕಟ್ಟಿ, ವಿಠ್ಠಲ ಭಜಂತ್ರಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.ಶಿವಾನಂದ ಭಜಂತ್ರಿ ಉಪನ್ಯಾಸ ನೀಡಿದರು. ನಂತರ ನುಲಿಯ ಚಂದಯ್ಯನವರ ಭಾವಚಿತ್ರದ ಮೆರವಣಿಗೆ ಪಟ್ಟಣದಲ್ಲಿ ನಡೆಯಿತು.