ಇಂದಿನಿಂದ ಎರಡು ದಿನಗಳ ಕಾಲ ಹಜಾರೆ ಹಬ್ಬ
Hazare festival to last for two days from today
ರಬಕವಿ-ಬನಹಟ್ಟಿ 20 : ರಬಕವಿ-ಹೊಸೂರಿನ ಪದ್ಮಾವತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ಪದ್ಮಾವತಿ ಅಂತರಾಷ್ಟ್ರೀಯ ಶಾಲೆ ಹಾಗೂ 11ನೇ ಹಜಾರೆ ಹಬ್ಬ ಡಿ.21 ಮತ್ತು 22 ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ಜರುಗಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸತೀಶ ಹಜಾರೆ ತಿಳಿಸಿದರು.
ಸಂಸ್ಥೆಯ ಸಭಾ ಭವನದಲ್ಲಿ ಏರಿ್ಡಸಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಅವರು, ಡಿ.21 ರಂದು ಸಂಜೆ 3-30ಕ್ಕೆ ವಾರ್ಷಿಕೋತ್ಸವ ನಿಮಿತ್ತ ಅನೇಕ ಕ್ರೀಡೆಗಳಲ್ಲಿ ಮತ್ತು ಸಾಧಕ ವಿಧ್ಯಾರ್ಥಿಗಳಿಗೆ ಪಾರಿತೋಷಕ ವಿತರಣೆ ಸಮಾರಂಭ ಜರುಗಲಿದ್ದು, ಈ ಸಮಾರಂಭದ ಅಧ್ಯಕ್ಷತೆಯನ್ನು ವಸಂತರಾವ ಹಜಾರೆ ಹಾಗೂ ಪದ್ಮಾವತಿ ಹಜಾರೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭೆಕಂದಾಯ ಅಧಿಕಾರಿ ಬಾಬುರಾವ ಕಮತಗಿ, ಶಿಕ್ಷಕ ರುದ್ರ್ಪಯರಗಣಿ, ನಾಮದೇವ ಸೌದಾಗರ, ಗೋಪಾಲ ಲಡ್ಡಾ, ರೇವಪ್ಪ ಬಿಳ್ಳೂರ, ಇಸಿಒ ಬಿ. ಎಂ. ಹಳಮನಿ, ಸಿಆರ್‌ಪಿ ಸಂತೋಶ ಬಡ್ಡಿಆಗಮಿಸಲಿದ್ದಾರೆ.
ಡಿ.22 ರಂದು ಸಾಂಸ್ಕೃತಿಕ ಸಮಾರಂಭ ಸಂಜೆ 4.30ಕ್ಕೆ ಜರುಗಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ರಬಕವಿ ಜವಳಿ ಉದ್ದಿಮೆದಾರ ಗಣಪತರಾವ ಹಜಾರೆ ಹಾಗೂ ಚಡಚಣ ಜವಳಿ ಉದ್ದಿಮೆದಾರ ಬಾಹುಬಲಿ ಮುತ್ತಿನ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಧಾರವಾಡದ ಮಹೇಶ ಮಸಾಳ, ಮುಂಬೈ ಪ್ರಾಂತದಆರ್‌ಎಸ್‌ಎಸ್ ನ ಮುಖ್ಯಸ್ಥ ಅರವಿಂದರಾವ ದೇಶಪಾಂಡೆ, ಡಿಡಿಪಿಐ ಅಜೀತ ಮನ್ನಿಕೇರಿ, ಡಿಡಿಪಿಯು ಪುಂಡಲಿಕ ಕಾಂಬಳೆ, ಬಿಇಒ ಅಶೋಕ ಬಸನ್ನವರ, ಎಆರ್‌ಟಿಒ ಭಾಗ್ಯಶ್ರೀ ಕಟ್ಟಿಮನಿ ಆಗಮಿಸಲಿದ್ದಾರೆ. ಪೂರ್ವಭಾವಿ ಸಭೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಭಾರತಿ ತಾಳಿಕೊಟಿ, ಪ್ರಾಚಾರ್ಯ ಬಸವರಾಜ ಕಲಾದಗಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 