ಹಾವೇರಿ ವತಿಯಿಂದ ಜಿಲ್ಲಾಧಿಕಾರಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ
Haveri sends a letter of appeal to the Governor through the district authorities
ಹಾವೇರಿ 11 : ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಹಾವೇರಿ ವತಿಯಿಂದ ಜಿಲ್ಲಾಧಿಕಾರಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕಾಂಗ್ರೇಸನ ನಾಯಕರಾದ ರಾಹುಲ್ ಗಾಂಧಿ ಅವರು ವಿದೇಶಕ್ಕೆ ಹೋದ ಸಂದರ್ಭದಲ್ಲಿ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದೀಜೀಯವರ ಕುರಿತು ತನ್ನ ಅವಹೇಳನಕಾರಿ ಮಾತುಗಳಿಂದ ಅವಮಾನಿಸುತ್ತ ಬಂದಿದ್ದಾರೆ, ಕಳೇದ ವಾರ ಲೋಕಸಭೆಯಲ್ಲಿ ಅಧಿವೇಶನ ನಡೆಯುತ್ತಿದ್ದಾಗ ರಾಹುಲ್ ಗಾಂದಿಯವರು ತಮ್ಮ ಪಕ್ಷದ ಮಹಿಳಾ ಸಂಸದರ ಮೂಲಕ ಪ್ರಧಾನ ಮಂತ್ರಿ ಯವರಿಗೆ ದೈಹಿಕವಾಗಿ ಹಲ್ಲೆ ನಡೆಸಲು ಷಡ್ಯಂತ್ರವನ್ನು ರೂಪಿಸಿತ್ತು ಎಂದು ಪತ್ರಿಕೆಗಳಲ್ಲಿ ವರದಿ ಆಗಿತ್ತು,
ಹಾಗೆಯೇ ಕಾಂಗ್ರೇಸನ ನಾಯಕರು ರೂಪಿಸಿರುವ ಸಂಚಿನ ಭಾಗವಾಗಿ ದಿನಾಂಕ: 08/2/2026 ರಂದು ಕರ್ನಾಟಕ ಬೂತ್ ಕಾಂಗ್ರೇಸನ ಪದಾಧಿಕಾರಿಗಳು ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದೀಜೀಯವರ ಭಾವಚಿತ್ರವನ್ನು ಬಳಸಿ ದೇಶದ ಸಂಸತ್ತಿಗೆ ಬರಲು ಧೈರ್ಯವಿಲ್ಲದ ಪುಕ್ಕಲ್ಲ ದೇಶವನ್ನು ಹೇಗೆ ರಕ್ಷಿಸುತ್ತಾರೆ? ಎಂದು ಸುಳ್ಳು ಸುದ್ದಿಯ ಬ್ಯಾಬರನ್ನು ವಿಧಾನಸೌಧದ ಮುಂದೆ ತರಲು ಹಗಲಿರುಳು ಶ್ರಮಿಸುತ್ತಿರುವ ಮತ್ತು ಆಫರೇಷನ್ ಸಿಂಧೂರ ದಂತಹ ಐತಿಹಾಸಿಕ ಕಾರ್ಯಚರಣೆಯ ನಿರ್ಧಾರ ಮಾಡಿದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದೀಜೀಯವರನ್ನು ಅವಮಾನಿಸುತ್ತಿರುವ ಕಾಂಗ್ರೇಸ ಪಕ್ಷದ ನಾಯಕರ ಮತ್ತು ಕಾರ್ಯಕರ್ತರನ್ನು ನಡೆಯನ್ನು ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಕರ್ನಾಟಕ ತೀವೃವಾಗಿ ಖಂಡಿಸುತ್ತದೆ.
ಕಾಂಗ್ರೇಸ ಪಕ್ಷದ ನಾಯಕರು ಹೀಗೆ ಮುಂದುರೆದರೆ ಬಿ,ಜೆ,ಪಿ ಮಹಿಳಾ ಮೋರ್ಚಾದಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲೇಡೆ ತೀವೃವಾದ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಪ್ಪ ಬಳ್ಳಾರಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ: ಶೋಭಾ ನಿಸ್ಸೀಮಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸಂತೋಷ ಆಲದಕಟ್ಟಿ, ನೀಲಪ್ಪ ಚಾವಡಿ, ನಗರ ಮಂಡಲ ಅಧ್ಯಕ್ಷರಾದ ಕಿರಣಕುಮಾರ ಕೊಳ್ಳಿ, ಜಿಲ್ಲಾ ಯುವ ಮೋರ್ಚಾ ಆದ್ಯಕ್ಷರಾದ ಕಿರಣ ಕೊಣನವರ, ಬ್ಯಾಡಗಿ ಮಂಡಲ ಅಧ್ಯಕ್ಷರಾದ ನಿಂಗಪ್ಪ ಬಟ್ಟಲಕಟ್ಟಿ,
ಮಹಿಳಾ ಮೋರ್ಚಾ ಅಧ್ಯಕ್ಷರಾದ ಬಸಮ್ಮ ಅಬಲೂರ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿದ್ಯಾ ಶೆಟ್ಟಿ, ಲತಾ ಬಡ್ನಿಮಠ, ಹಾವೇರಿ ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ರೋಹಿಣಿ ಪಾಟೀಲ, ಹಿರೇಕೆರೊರ ಮಹಿಳಾ ಮೋರ್ಚಾ ಅಧ್ಯಕ್ಷರಾದ ಲತಾ ಬಣಕಾರ, ಹಾವೇರಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ನಂದಾ ನರಗುಂಡ, ವಿಜಯಲಕ್ಷೀ ಹೆಗಡೆ, ಅಕ್ಕಮ್ಮ ಹರ್ತಿ, ಶ್ರೀದೇವಿ ಹಿರೇಮಠ, ಕನವಳ್ಳಿ, ಪಕ್ಷದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರೆಂದು ಜಿಲ್ಲಾ ಮಾಧ್ಯಮ ಪ್ರತಿನಿಧಿ ವಿಜಯಕುಮಾರ ಚಿನ್ನಿಕಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 