ಬನ್ನಿಹಟ್ಟಿ ಗ್ರಾಮಕ್ಕೆ ಹಾವೇರಿ- ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲುಗಡೆ
Haveri-Kukke Subrahmanya bus stop for Bannihatti village
ಬ್ಯಾಡಗಿ 08: ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಹಾವೇರಿ- ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲುಗಡೆ ಮಾಡಿರುವುದು ಸಂತಸ ತಂದಿದೆ ಎಂದು ಸಮಾಜ ಸೇವಕ ಮಾಲತೇಶ ಪೂಜಾರ ಹೇಳಿದರು.ಅವರು ಬನ್ನಿಹಟ್ಟಿ ಗ್ರಾಮಕ್ಕೆ ಹಾವೇರಿ- ಕುಕ್ಕೆ ಸುಬ್ರಹ್ಮಣ್ಯ ಬಸ್ ನಿಲುಗಡೆ ಮಾಡುವಂತೆ ಹಲವಾರು ಬಾರಿ ಮೌಖಿಕವಾಗಿ ಹಾಗೂ ಮನವಿಯನ್ನು ನೀಡಿ ಡಿಪೋ ಮ್ಯಾನೇಜರ ಅವರಿಗೆ ಒತ್ತಾಯಿಸಲಾಗಿತ್ತು, ಗ್ರಾಮದಿಂದ ದಿನನಿತ್ಯ ಹಲವಾರು ಭಕ್ತರು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಸೇವೆಗೆ ತೆರಳುತ್ತಿದ್ದರು.
ಪ್ರಯಾಣಿಕರ ಹಿತದೃಷ್ಟಿಯಿಂದ ಬಸ್ ನಿಲುಗಡೆ ಮಾಡಿದ್ದು, ಭಕ್ತರಿಗೆ ತೆರಳಲು ಅನುಕೂಲವಾಗುವಂತೆ ಮಾಡಿದ್ದಕ್ಕಾಗಿ ಡಿಪೋ ಮ್ಯಾನೇಜರ ಅವರಿಗೆ ಗ್ರಾಮಸ್ಥರಿಂದ ಅಭಿನಂದನೆ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಬನ್ನಿಹಟ್ಟಿ ಗ್ರಾಮದಲ್ಲಿ ಹಾವೇರಿ- ಕುಕ್ಕೆ ಸುಬ್ರಹ್ಮಣ್ಯ ಬಸ್ ಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.
ಗ್ರಾಮಸ್ಥರಾದಜಗದೀಶ ಕೆರಕರ, ಚೆನ್ನಬಸಪ್ಪ ಬೂದಿಹಾಳ, ಬಸವರಾಜ ಪೂಜಾರ, ಬಸನಗೌಡ ಮರಿಗೌಡ್ರ, ಪರಮೇಶಪ್ಪ ಕುರುವತ್ತಿ, ಶಂಕ್ರ್ಪ ಆನವಟ್ಟಿ, ಪರಶುರಾಮ ಪೂಜಾರ, ಚನ್ನಬಸಪ್ಪ ಕೋಣನವರ, ಪರಡೆಪ್ಪ ಹೊಸೂರ, ಬಸವರಾಜ ಚಿಕ್ಕಣಜಿ, ನಾಗಪ್ಪ ಚನ್ನಳ್ಳಿ ಕರಬಸಪ್ಪ ಕೋಣನವರ, ಮಹಾಂತೇಶ ಸೇರಿದಂತೆ ಇತರರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 