ಹಟಗಾರ ಪತ್ತಿನ ಸಹಕಾರಿ ಬ್ಯಾಂಕ್ ನೂತನ ಶಾಖೆ ಉದ್ಘಾಟನಾ ಸಮಾರಂಭ
Hatagara Cooperative Bank new branch inauguration ceremony
ಮಹಾಲಿಂಗಪುರ 07: ಹಣಕಾಸು ಸಂಸ್ಥೆಗಳು ಸ್ಥಿತಿವಂತರ ಜೊತೆಯಲ್ಲಿ ಆರ್ಥಿಕವಾಗಿ ಹಿಂದುಳಿದವರ ಹಿತವನ್ನು ಸಹ ಕಾಪಾಡುವತ್ತ ಗಮನ ಹರಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಜಯಕುಮಾರ ಸರನಾಯಕ ಹೇಳಿದರು.
ಬಾಗಲಕೋಟ ಜಿಲ್ಲಾ ಹಟಗಾರ ಪತ್ತಿನ ಸಹಕಾರಿ ಬ್ಯಾಂಕ್ ಮಹಾಲಿಂಗಪುರ ಪಟ್ಟಣದ ನೂತನ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕಾದರೆ ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿಗಳ ನಿಷ್ಠೆ ಅತ್ಯವಶ್ಯವೆಂದು ಹೇಳುತ್ತ ಹಟಗಾರ ಸಮುದಾಯದ ಈ ಬ್ಯಾಂಕ್ ಉತ್ತರೋತ್ತರವಾಗಿ ಯಶ ಕಾಣಲಿ ಎಂದು ಹಾರೈಸಿದರು.
ನಂತರ ಘಟಕ ಉದ್ಘಾಟಿಸಿದ ಸಿದ್ಧಾರೂಢ ಮಠದ ಸಹಜಾನಂದ ಶ್ರೀಗಳು ಮಾತನಾಡಿ, ಬ್ಯಾಂಕ್ ಗಳೆಂದರೆ ಡ್ಯಾಂ ಗಳಿದ್ದಂತೆ. ಹೇಗೆ ಫಸಲುಗಳ ಬೆಳವಣಿಗೆಗೆ ಸಹಕಾರಿಯಾಗುತ್ತವೆಯೊ ಹಾಗೆ ಎಲ್ಲ ವರ್ಗಗಳ ಜನರಿಗೆ ಆರ್ಥಿಕ ಸಹಕಾರ ಹರಿದು ಹೋಗಬೇಕು. ಇದರಿಂದ ಬಡವ, ಮಧ್ಯಮ ವರ್ಗಗಳ ಜನರು ಆರ್ಥಿಕ ಸಬಲತೆ ಹೊಂದಿ ಬ್ಯಾಂಕ್ ಗಳು ಕೂಡ ಅಭಿವೃದ್ಧಿ ಹೊಂದುತ್ತವೆ ಎಂದರು.ಈ ಸಂದರ್ಭದಲ್ಲಿ ಬಾಗಲಕೋಟ ಬಸವೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಬಿಡಿಸಿಸಿ ಬ್ಯಾಂಕ್ ಮುರುಗೇಶ ಕಡ್ಲಿಮಟ್ಟಿ ಮಾತನಾಡಿದರು. ಜಿಲ್ಲಾ ಹಟಗಾರ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಸಿಂಹಾಸನ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ್, ಪುರಸಭೆ ಸದಸ್ಯ ಬಸವರಾಜ ಚಮಕೇರಿ, ಹಿರಿಯರಾದ ಅಶೋಕ ಅಂಗಡಿ, ಲಕ್ಕಪ್ಪ ಚಮಕೇರಿ, ಜಿ ಎಸ್. ಗೊಂಬಿ, ಮಲ್ಲಪ್ಪ ಭಾವಿಕಟ್ಟಿ, ಗುರುಪಾದ ಅಂಬಿ, ಶ್ರೀಶೈಲಪ್ಪ ಡಬಾಡಿ, ಭೀಮಸಿ ಮಗದುಮ, ಬಸವರಾಜ ರಾಯರ, ರಾಮು ಭದ್ರಣ್ಣವರ ಮತ್ತು ನಿರ್ದೇಶಕರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 