ಹಾರವಾಡದ ಬೆಳಿಗ್ಗೆ ದಾಳಿ- ವಿಷ್ಣು ವೈ.ನಾಯ್ಕ ಬಂಧನ

ಹಾರವಾಡದ ಬೆಳಿಗ್ಗೆ ದಾಳಿ- ವಿಷ್ಣು ವೈ.ನಾಯ್ಕ ಬಂಧನ

ಕಾರವಾರ 27: ಮಂಗಳವಾರ ಬೆಳಿಗ್ಗೆ ಹಾರವಾಡ ಗ್ರಾಮದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಬಕಾರಿ ಪೊಲೀಸರ ತಂಡ ಓರ್ವನನ್ನು ಬಂಧಿಸಿ, ಆತನಿಂದ 9.750 ಲೀಟರ್ ಗೋವಾ ವಿಸ್ಕಿ ವಶಪಡಿಸಿಕೊಳ್ಳಲಾಗಿದೆ. ಇದು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡ ಮದ್ಯವಾಗಿತ್ತು ಎಂದು ಕಾರವಾರ ಅಬಕಾರಿ ಪೊಲೀಸರು ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.