ಹ್ಯಾರಿ, ಮೇಘನ್ ರಾಜಮನೆತನ ಸೌಲಭ್ಯ ಬಿಟ್ಟುಕೊಟ್ಟಿದ್ದಾರೆ; ಬಕ್ಕಿಂಗ್ ಹ್ಯಾಂ ಅರಮನೆ ಹೇಳಿಕೆ

ಲಂಡನ್, ಜ 19:     ರಾಜಕುಮಾರ ಹ್ಯಾರಿ ಹಾಗೂ ಪತ್ನಿ  ಮೇಘನ್  ಮರ್ಕ್ಲ್  ಇನ್ನು ಮುಂದೆ ರಾಜಮನೆತನ ಸೌಲಭ್ಯವನ್ನು ಬಳಸುವುದಿಲ್ಲ.  ರಾಜಮನೆತನ    ಕರ್ತವ್ಯಗಳಿಗೆ ಸಾರ್ವಜನಿಕ ಹಣ ನೀಡುವುದಿಲ್ಲ    ಎಂದು  ಬಕಿಂಗ್ ಹ್ಯಾಮ್ ಅರಮನೆ  ಹೇಳಿಕೆಯಲ್ಲಿ  ತಿಳಿಸಿದೆ.

ದಂಪತಿ  ಈಗ   ಬ್ರಿಟನ್  ಮಹಾರಾಣಿಯವರನ್ನು ಅಧಿಕೃತವಾಗಿ  ಪ್ರತಿನಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಬ್ರಿಟನ್   ರಾಜಮನೆತನದ  ನಿವಾಸವಾಗಿರುವ ಫ್ರಾಗ್ಮೋರ್ ಕಾಟೇಜ್  ನವೀಕರಣದ   ಸರ್ಕಾರಿ ವೆಚ್ಚವನ್ನು ಮರುಪಾವತಿಸುವ  ಇಚ್ಚೆಯನ್ನು   ದಂಪತಿ ಹಂಚಿಕೊಂಡಿದ್ದಾರೆ.   

ಈ ಹೊಸ ಮಾದರಿ  ಈ ವರ್ಷದ  ಎಪ್ರಿಲ್ ನಿಂದ  ಜಾರಿಗೆ ಬರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 

ರಾಜಮನೆತನದ ಜವಬ್ದಾರಿಗಳಿಂದ ಮುಕ್ತಗೊಳ್ಳಲು ಎರಡನೇ ಎಲಿಜಬತ್  ರಾಣಿಯ    ಮೊಮ್ಮಗ ಹ್ಯಾರಿ ಹಾಗೂ  ಪತ್ನಿ  ಅಮೆರಿಕಾದ  ಟಿವಿ   ನಟಿ  ಮೇಘನ್ ಮರ್ಕ್ಲ್  ಘೋಷಿಸಿಕೊಂಡ   ವಾರದ  ನಂತರ  ಅರಮನೆ ಪ್ರಕಟಣೆ  ಹೊರಡಿಸಿದೆ.