ಪರಿಶ್ರಮವೇ ಯಶಸ್ಸಿನ ಮೊದಲ ಹೆಜ್ಜೆ: ಶ್ರೀ ಸಂತೋಷ ಕಾಮಗೌಡ.

 ಪರಿಶ್ರಮವೇ ಯಶಸ್ಸಿನ ಮೊದಲ ಹೆಜ್ಜೆ: ಶ್ರೀ ಸಂತೋಷ ಕಾಮಗೌಡ. Hard work is the first step to success: Sri Santhosha Kamagowda.

ಲೋಕದರ್ಶನ ವರದಿ 

ಪರಿಶ್ರಮವೇ ಯಶಸ್ಸಿನ ಮೊದಲ ಹೆಜ್ಜೆ: ಶ್ರೀ ಸಂತೋಷ ಕಾಮಗೌಡ. 

ಗೋಕಾಕ  11: ನಗರದ ಪ್ರತಿಷ್ಟಿತ ಗೋಕಾಕ ಶಿಕ್ಷಣ ಸಂಸ್ಥೆಯ ಜೆ.ಎಸ್‌.ಎಸ್‌. ಪದವಿ ಮಹಾವಿದ್ಯಾಲಯದಲ್ಲಿ ದಿನಾಂಕ:10-09-2026 ರಂದು ಆಯೋಜಿಸಿದ್ದ “ಆರಂಭ-2026” ಶೀರ್ಷಿಕೆಯಡಿಯಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಜೊತೆಗೆ 2026-27ನೇ ಶೈಕ್ಷಣಿಕ ಸಾಲಿನ ಕ್ರೀಡಾ, ಸಾಂಸ್ಕ್ರತಿಕ ಹಾಗೂ ವಿವಿಧ ಸಂಘ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯ ಕುಲಸಚಿವರಾದ ಶ್ರೀ ಸಂತೋಷ ಕಾಮಗೌಡರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸನ್ನು ಸಾಧಿಸಲು ನಿರಂತರ ಪರಿಶ್ರಮ, ಶಿಸ್ತು ಮತ್ತು ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. “ಪರಿಶ್ರಮವೇ ಯಶಸ್ಸಿನ ಮೊದಲ ಹೆಜ್ಜೆ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಬಿ.ಎಂ.ತುರಡಗಿ ರವರು ಸ್ವಾಗತಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕ್ರತಿಕ ಮತ್ತು ವಿವಿಧ ಸಂಘಗಳ ಕಾರ್ಯಕ್ರಗಳು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕೆಂದು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರಮನ್ನರಾದ ಶ್ರೀ.ವ್ಹಿ.ಎ.ಕಡಕೋಳ ರವರು ಮಾತನಾಡಿ, ಕಾಲೇಜು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗೆ ಸದಾ ಸಿದ್ದವಿದ್ದು, ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು. 

 ಪ್ರಸಕ್ತ ಸಾಲಿಗೆ ವಿದ್ಯಾರ್ಥಿ ಮುಖ್ಯ ಪ್ರತಿನಿಧಿ, ವರ್ಗ ಪ್ರತಿನಿಧಿಗಳು, ಕ್ರೀಡಾ ಹಾಗೂ ವಿವಿಧ ಸಂಘ ಚಟುವಟಿಕೆಗಳ ಕಾರ್ಯದರ್ಶಿಗಳಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪುಷ​‍್ಾರೆ್ಪಣ ಮೂಲಕ ಅಭಿನಂದಿಸಲಾಯಿತು. 

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ನಡೆದ ಗಾಯನ, ನೃತ್ಯ ಸೇರಿದಂತೆ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆಯೊಂದಿಗೆ ವಿದ್ಯಾರ್ಥಿಗಳ ಗಮನ ಸೆಳೆದವು. 

ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ.ಆರ್‌.ಎಂ.ವಾಲಿ ಉಪಪ್ರಾಚಾರ್ಯರಾದ ಡಾ.ಆರ್‌.ಎಸ್‌.ಬಳಿಗಾರ, ದೈಹಿಕ ಶಿಕ್ಷಣ ನಿರ್ದೇಶಕಿ ಶ್ರೀಮತಿ.ಎ.ಎಲ್‌.ದರಗದ ಮತ್ತು ವಿದ್ಯಾರ್ಥಿ ಮುಖ್ಯ ಪ್ರತಿನಿಧಿ ಕು.ಮಹಾಲಕ್ಷ್ಮೀ ಸಣ್ಣಕ್ಕಿನವರ ಉಪಸ್ಥಿತರಿದ್ದರು. ಡಾ.ಕೃಷ್ಣಮೂರ್ತಿ.ಎಂ.ಎಸ್ ನಿರೂಪಣೆ ಕಾರ್ಯ ನಿರ್ವಹಿಸಿದರೆ, ಡಾ.ವಿ.ಆರ್‌.ಶಿಂಧೆ ವಂದನಾರೆ​‍್ಣ ಮಾಡಿದರು.  

ಕಾರ್ಯಕ್ರಮದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ, ವಿವಿಧ ಸಂಘಗಳ ಸಂಯೋಜಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.