ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ : ಡಾ.ಎಸ್‌. ಎಸ್‌. ಬಿರಾದಾರ

ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ : ಡಾ.ಎಸ್‌. ಎಸ್‌. ಬಿರಾದಾರ  Hard work is necessary for success: Dr. S. S. Biradar

ಬಾಗಲಕೋಟೆ 19: ಸೋಲಿಗೆ ಸಮಯದ ಸರಿಯಾದ ಸದ್ಬಳಿಕೆ ಮಾಡಿಕೋಳ್ಳುದಿರುವುದೇ ಕಾರಣ, ಸಾಧನೆ ಮಾಡುವುದು ಬರಿ ಕನಸಿನಿಂದ ಆಗಲಾರದು ನಾವು ಅದರ ಜೊತೆಗೆ ಪರಿಶ್ರಮ ಹಾಕಬೇಕು ಎಂದು ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್‌. ಎಸ್‌. ಬಿರಾದಾರ ಹೇಳಿದರು. 

ನಗರದ ಬಿ.ವಿ.ವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಪಿ.ಯು.ಸಿ. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡೆ, ಸಾಂಸ್ಕೃತಿಕ, ಎನ್‌.ಸಿ.ಸಿ, ಎನ್‌.ಎಸ್‌.ಎಸ್, ರೋವರ್ ರೇಂಜರ್ ಚಟುವಟಿಕೆಗಳ  ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಅವರು 

ಗುರು-ಶಿಷ್ಯರ ಸಂಬಂಧವನ್ನು ಈ ಮಹಾವಿದ್ಯಾಲಯವು ಎತ್ತಿ ತೋರಿಸುತ್ತದೆ. ವಿದ್ಯಾರ್ಥಿಗಳು ಶಿಸ್ತಿನಿಂದ ಇರಬೇಕು. ಸಮಯದೊಂದಿಗೆ ನಾವು ಓಡಬೇಕು ಇಲ್ಲವಾದರೆ ತಟಸ್ಥರಾಗಬೇಕಾಗುತ್ತದೆ ಎಂದರು. 

ಸಾಧನೆಗೆ ಕಠಿಣ ಪರಿಶ್ರಮ ಅಗತ್ಯ ಸಾಧಕರಾಗಲು  ಸುರಕ್ಷಿತ ವಲಯದಿಂದ ಹೊರ ಬರಬೇಕು. ಇಲ್ಲದಿದ್ದರೆ ಸಾಧನೆ ಮರೀಚೀಕೆ ಯಾಗುತ್ತದೆ.ಯಶಸ್ಸಿನ ಮೇಟ್ಟಿಲೇರಲು ಸವಾಲುಗಳನ್ನು ಎದುರಿಸುವ ಮನೋಭಾವನೆ ಬೆಳಿಸಿಕೋಳ್ಳಿ ಎಂದರು. 

ಭಕ್ತಿ, ಶಕ್ತಿ, ಶ್ರದ್ಧೆಯಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಬದುಕಿನಲ್ಲಿ ನಮಗೆ ಸ್ಪಷ್ಟತೆ ಇರಬೇಕು.  ಮಾನಸಿಕ ಸ್ಥಿರತೆ ಮುಖ್ಯ,ಗೊಂದಲಗಳನ್ನು ಬಗೆಹರಿಸುವ  ಜಾಣ್ಮೆ ನಮ್ಮಲ್ಲಿರಲಿ, ಪರಿಶ್ರಮಕ್ಕೆ ಮಿತಿಗಳಿಲ್ಲ ,ಎಷ್ಟೇ ಅಡೆತಡೆಗಳು ಬಂದರು  ನಾವು ಪ್ರಯತ್ನದ ಮೂಲಕ ಅವುಗಳನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ರೂಢಿಸಿಕೊಳ್ಳಬೇಕು ಅಂದಾಗ ಪ್ರಯತ್ನಕ್ಕೆ ಫಲ ಸಿಗುತ್ತದೆ. ಸೋಲಿಗೆ ತಲೆ ಬಾಗದೆ ನಮ್ಮ ಪ್ರಯತ್ನ ಮಾಡಬೇಕು. ಕೇವಲ ಅಕ್ಷರ ಕಲಿತರೆ ಅದು ಜ್ಞಾನವಲ್ಲ ಎಂದು ಹೇಳಿದರು. 

ಪ್ರಾಚಾರ್ಯ ಎಸ್ ಆರ್ ಮೂಗನೂರಮಠ ಮಾತನಾಡಿ ಮಕ್ಕಳ ಬದುಕಲ್ಲಿ ಬಾಲ್ಯ ಮತ್ತು ವಿದ್ಯಾರ್ಥಿ ಜೀವನವು ಅಮೂಲ್ಯ ಘಟ್ಟಗಳಾಗಿದ್ದು ಅವರನ್ನು  ವಿದ್ಯೆಯಿಂದ ವಂಚಿತರನ್ನಾಗಿ ಮಾಡಿದರೆ ಕಷ್ಟಕರ ಜೀವನಕ್ಕೆ ತಳ್ಳಿದಂತಾಗುತ್ತದೆ. ವ್ಯಕ್ತಿಯ ವಿಕಸನವು ಅವನ  ಆಲೋಚನೆಯ ಮೇಲಿರುತ್ತದೆ. ಜ್ಞಾನ ಮತ್ತು ಶರೀರದ ಅಂಗಾಂಗಗಳನ್ನು ಸರಿಯಾಗಿ ಬಳಸಿಕೊಂಡಾಗ ಮಾತ್ರ ಸಾಧನೆಯ ದಾರಿ ಸುಲಭವಾಗುತ್ತದೆ. ಸಾಮರ್ಥ್ಯವನ್ನು ಸರಿಯಾಗಿ ಉಪಯೋಗಿಸಕೊಂಡರೆ ಸಾಧನೇಯ ಹೆಮ್ಮರವಾಗಬಹುದು. ಸಮಯ ಪ್ರಜ್ಞೆ ಎನ್ನುವುದು ಬಹಳ ಮುಖ್ಯ ನಿರಂತರ ಪ್ರಯತ್ನ ಹಾಗೂ ಕಠಿಣ ಪರಿಶ್ರಮದಿಂದ ಅಸಾಧ್ಯವೂ ಸಹ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. 

ಸಾಂಸ್ಕೃತಿಕ ಸಮಿತಿಯ ಸಂಯೋಜಕಾರದ ಡಾ. ಆರ್‌. ಎಮ್‌. ಬೆಣ್ಣೂರ, ಎನ್ ಎಸ್ ಎಸ್ ಘಟಕದ ಸಂಯೋಜಕ ಡಾ. ಆರ್‌. ಆರ್‌. ಅರಿಸಿನಗೋಡಿ,  ಕ್ರೀಡಾ ವಿಭಾಗದ ನಿರ್ದೇಶಕ ಎಮ್‌.ಎಮ್‌.ದೇವನಾಳ ಮತ್ತು ವಿಧ್ಯಾರ್ಥಿ ಪ್ರತಿನಿಧಿಗಳಾದ ಸಚಿನ್ ಕೆಂಪಗೊಂಡದ, ಪ್ರಿಯಾಂಕಾ ನಾಯಕ ಸೇರಿದಂತೆ ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.