ಸುಖ ದುಃಖ ಜೊತೆಗಾರರು ಜೀವನದಲ್ಲಿ ಎರಡನ್ನು ಅಳವಡಿಸಿಕೊಂಡು ಹೋಗಬೇಕು

ಸುಖ ದುಃಖ ಎರಡು ಜೊತೆಗಾರರು ಎಂದು ಉಲ್ಲೇಖಿಸಿದ್ದಾರೆಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು

ಸುಖ ದುಃಖ ಜೊತೆಗಾರರು ಜೀವನದಲ್ಲಿ ಎರಡನ್ನು ಅಳವಡಿಸಿಕೊಂಡು ಹೋಗಬೇಕು 

ಬ್ಯಾಡಗಿ  25:  ಬುದ್ದ ಬಸವಾದಿ ಶರಣರು, ಸಂತರು ದಾರ್ಶಿನಿಕರು ದುಃಖದ ಅನ್ವೇಷಣೆಯಲ್ಲಿ  ತೊಡಗಿ ಜೀವನ ಎನ್ನುವ ಪಯಣದಲ್ಲಿ ಸುಖ ದುಃಖ ಎರಡು ಜೊತೆಗಾರರು ಎಂದು ಉಲ್ಲೇಖಿಸಿದ್ದಾರೆಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.  ರವಿವಾರ ಸಂಜೆ ಅವರು ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ   ನಡೆದ ಅಂತಿಮ ದಿನದ ಆಧ್ಯಾತ್ಮ ಪ್ರವಚನ  ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಓರ್ವ ವ್ಯಕ್ತಿ ತನ್ನ ಪಾಪ ಕರ್ಮಗಳ ಆಧಾರದ ಮೇಲೆ ಸುಖ  ದುಃಖವನ್ನು ಅನುಭವಿಸುತ್ತಾನೆ.ಪ್ರತಿಯೊಬ್ಬರೂ ದೇಹವನ್ನು ಕೆಡದ ಹಾಗೆ ಕಾಯ್ದುಕೊಂಡರೂ, ದೇಹ ಮುಪ್ಪನ್ನು ಆವರಿಸುವುದನ್ನು ಯಾರಿಂದಲೂ ತಡೆಯಲು ಅಸಾಧ್ಯವೆಂದರು.ದೇವಾನು ದೇವತೆಗಳೇ ಭೂಮಿಯಲ್ಲಿ ಉಳಿದಿಲ್ಲ, ಗುರು ಶಿಷ್ಯರ ಸಂಬಂಧ, ಅಣ್ಣ ತಮ್ಮಂದಿರ ಸಂಬಂಧ, ತಾಯಿ ಮಗುವಿನ ಸಂಬಂಧ ಯಾವುಗಳೂ ಜಗದಲ್ಲಿ ಉತ್ತಮವಾಗಿ ಉಳಿದಿಲ್ಲ ಹೀಗಾದಲ್ಲಿ ಸುಖ ಸಂಬಂಧಗಳನ್ನು ಕಾಣುವುದಾದರೂ ಹೇಗೆ ? ಎಂದು ಪ್ರಶ್ನಿಸಿದರು.  ಗಂಡ ಹೆಂಡತಿ ಸಂಸಾರದಲ್ಲಿ ಸಂಶಯದಿಂದ ಬದುಕಬಾರದೆಂದರು.  

ಮನುಷ್ಯನ ಇಚ್ಛೆಯಂತೆ ಯಾವುದು ನಡೆಯದು. ನಿಸರ್ಗದ ಇಚ್ಚೆಯಂತೆ ಎಲ್ಲವು ನಡೆಯುತ್ತದೆ.ನೋವಿಲ್ಲದ ಮನೆ, ಸಾವಿಲ್ಲದ ಮನೆ ಎಲ್ಲಿವೇ ಹೇಳಿ.ಸಾವು ಜೀವನ ಚಕ್ರದ ಒಂದು ಅನಿವಾರ್ಯ ಭಾಗವಾಗಿದೆ, ಆದರೂ ನಮ್ಮಲ್ಲಿ ಅನೇಕರು ತಮ್ಮ ಮರಣವನ್ನು ಸ್ವೀಕರಿಸುವುದನ್ನು ತಪ್ಪಿಸಲು ನಾವು ಎಲ್ಲವನ್ನೂ ಮಾಡುತ್ತೇವೆ. ಆದರೇ ಸಾವು ಎಲ್ಲರಿಗೂ ಉಂಟು. ಇದೇ ಈಶ್ವರನ ಮಹಿಮೆ ಎಂದರು.ಮತದಾನದಲ್ಲಿ ಪವಿತ್ರತೆ ಉಳಿದಿಲ್ಲ. ಹೀಗಾದಲ್ಲಿ ದೇಶ ಕಟ್ಟುವುದಾದರೂ ಹೇಗೆ ?ಮನುಷ್ಯನಲ್ಲಿರುವ ಅನೇಕ ಮೌಲ್ಯಗಳಲ್ಲಿ ದಾನವು ಒಂದು. ದಾನ ಗುಣವು ಮನುಷ್ಯ ಜೀವನದ ಅತ್ಯಂತ ಶ್ರೇಷ್ಠ ಗುಣವಾಗಿದೆ ಎಂದರು.ಕಷ್ಟಗಳು ಬಂದಾಗ ಆತ್ಮ ಹತ್ಯೆಗೆ ಕೈ ಹಾಕದೇ ಧೀರನಾಗಿ  ಬದುಕುವ ಕಲೆ ಕಲಿಯಬೇಕು. ಮನಸ್ಸಿಗೆ ದುಃಖ, ನೋವುಂಟಾಗಬಾರದೆಂದು ಪ್ರತಿಯೊಬ್ಬರೂ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ಮನುಷ್ಯ ನೋವನ್ನು ಅನುಭವಿಸದೆ ಹೋದರೆ ಸುಖದ ಮಹತ್ವ ತಿಳಿಯುವುದಿಲ್ಲವೆಂದರು.ದೇವರು ನಮಗೆ ಬದುಕಲು ಗಾಳಿ, ನೀರು, ಆಹಾರ ಕೊಟ್ಟಿದ್ದಾನೆ. ಇದೇ ದೇವನ ಇಚ್ಚೆ,ಗುಡಿಯಲ್ಲಿ ಹೋದಾಗ ಜನ್ಮ ಕೊಟ್ಟ ದೇವನಿಗೆ ಧನ್ಯತೆ ಅರ​‍್ಿಸಬೇಕು.ದೇವನಿಗೆ ಎಲ್ಲವನ್ನೂ ಅರ​‍್ಿಸಿ, ತನ್ನದೇನಿಲ್ಲೆನ್ನುವ ಭಾವನೆ ಮೂಡಿಸಿಕೊಳ್ಳಬೇಕುಅಂದಾಗ ಸುಖ ಸಂಸಾರ ಹೊಂದಲು ಸಾಧ್ಯವಿದೆ ಎಂದರು