ಸಂತೆ ಮೇಳ ಕಾರ್ಯಕ್ರಮಕ್ಕೆ ಹನುಮೇಶ್ ಬಾರ ಕೇರ್‌ರಿಂದ ಚಾಲನೆ

ಸಂತೆ ಮೇಳ ಕಾರ್ಯಕ್ರಮಕ್ಕೆ  ಹನುಮೇಶ್ ಬಾರ ಕೇರ್‌ರಿಂದ ಚಾಲನೆ  Hanumesh Bara Care kicks off the Santa Mela program

ಕೊಪ್ಪಳ 10 : ನಗರದ ಮಿಲ್ಲತ್ ಪಬ್ಲಿಕ್ ಶಾಲೆ ಆವರಣದಲ್ಲಿ ಬುಧವಾರದಂದು ಶಾಲಾ ಮಕ್ಕಳಿಂದ ಏರಿ​‍್ಡಸಿದ ಸಂತೆಮೇಳ ಕಾರ್ಯಕ್ರಮಕ್ಕೆ ಉದ್ಯಮಿ ಸಮಾಜ ಸೇವಕ ಯುವ ನಾಯಕ ಹನುಮೇಶ್ ಬಾರಕೇರ್ ರವರು ಚಾಲನೆ ನೀಡಿ ಮಾತನಾಡಿದರು, ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಯಲು ಈ ನೂತನ ಮಾದರಿಯ ಸಂತೆ ಮೇಳ ಕಾರ್ಯಕ್ರಮ ಅತ್ಯಂತ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು, ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ರವರು  ಶಾಲಾ ಮಕ್ಕಳಿಂದ ಏರಿ​‍್ಡಸಿದ  ಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು, ಸಮಾರಂಭದ ಅಧ್ಯಕ್ಷತೆಯನ್ನು ಮಿಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಧ್ಯಕ್ಷ  ಸೈಯದ್ ಗೌಸ್ ಪಾಷಾ ಖಾಜಿ ವಹಿಸಿದ್ದರು, ಸಮಾರಂಭದಲ್ಲಿ ಸಮಾಜ ಸೇವಕ ಲ್ಯಾಂಡ್ ಡೆವಲೋಪರ್ ಶಫೀಕ್ ಅಹಮದ್ ದಾಗ ದಾರ್, ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ, ಅಂಜುಮನ್ ಕಮಿಟಿ ಅಧ್ಯಕ್ಷ ಎಂ ಡಿ ಆಸಿಫ್ ಕರ್ಕಿಹಳ್ಳಿ, ಪಾಲಕರ ಪ್ರತಿನಿಧಿ  ಫತಹೇ ಸಾಬ್ ಚುಟ್ಟದ್ ಯುವ ನಾಯಕ ಸಿರಾಜ್ ಲಾಠಿ ಮತ್ತು ಶಾಲೆಯ ಸಂಚಾಲಕರುಗಳಾದ ಅಬ್ದುಲ್ ಅಜೀಜ್ ಮಾನ್ವಿ ಕರ್ ಹಾಗೂ ಸೈಯದ್ ಇಮಾಮ ಹುಸೇನ್ ಸಿಂದೋಗಿ, ಮುಖ್ಯ ಶಿಕ್ಷಕ ಮೊಹಮ್ಮದ್ ಅಜೀಜ್ ರವಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.