ರಾಜ್ಯಮಟ್ಟದ ಕೌಶಲ್ಯ ಸ್ಪರ್ಧೆಯಲ್ಲಿ ಶಿಗ್ಗಾವಿ ಸಂಸ್ಥೆಯ ಹನುಮಂತಪ್ಪ ವಾಲ್ಮೀಕಿ ಪ್ರಥಮ

ರಾಜ್ಯಮಟ್ಟದ ಕೌಶಲ್ಯ ಸ್ಪರ್ಧೆಯಲ್ಲಿ ಶಿಗ್ಗಾವಿ ಸಂಸ್ಥೆಯ ಹನುಮಂತಪ್ಪ ವಾಲ್ಮೀಕಿ ಪ್ರಥಮ  Hanumanthappa Valmiki from the Shiggaon institute secures first place in the state-level skills comp

ಶಿಗ್ಗಾವಿ, ಆ.13: ಬೆಂಗಳೂರಿನ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ನಲ್ಲಿ ನಡೆದ ರಾಜ್ಯಮಟ್ಟದ ‘ಅಸೆಂಬ್ಲಿ ಫಂಡಮೆಂಟಲ್ ಸ್ಕಿಲ್‌’ ಸ್ಪರ್ಧೆಯಲ್ಲಿ ಶಿಗ್ಗಾವಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಹನುಮಂತಪ್ಪ ವಾಲ್ಮೀಕಿ ಅವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದು ಹಾವೇರಿ ಜಿಲ್ಲೆ ಹಾಗೂ ಶಿಗ್ಗಾವಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ.  

ಹನುಮಂತಪ್ಪ ವಾಲ್ಮೀಕಿ ಅವರ ಈ ಅಮೋಘ ಸಾಧನೆಗೆ ಶಿಗ್ಗಾವಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.  ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಹನುಮಂತಪ್ಪ ವಾಲ್ಮೀಕಿ ಅವರು ಸಂಸ್ಥೆಯ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಸಂಸ್ಥೆಯ ಸಿಬ್ಬಂದಿ ತಿಳಿಸಿದ್ದಾರೆ.