ಸಿಕ್ಕ 50ಸಾವಿರ ಹಣ ಮರಳಿಸಿ ಮಾದರಿಯಾದ ಹನುಮಂತ
Hanuman returns the 50 thousand rupees he received, becoming an example
ಪಾಲಬಾವಿ, 29 : ರಾಯಬಾಗ ತಾಲೂಕು ಹಂದಿಗುಂದ ಗ್ರಾಮದ ಹೇರ್ ಕಟಿಂಗ್ ಸಲೂನ್ ಮಾಲಿಕ ಹನುಮಂತ ನಂದೇಶ್ವರ ಎಂಬುವರಿಗೆ ದಿ.25ರಂದು ಸಿಕ್ಕ ನಗದು 50 ಸಾವಿರ ಹಣವನ್ನು ಕಲಾದಗಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಭುವನೇಶ್ವರಿ ಕಲಾಳ ಅವರಿಗೆ ಒಪ್ಪಿಸಿದ ಪ್ರಾಮಾಣಿಕ ಘಟನೆಗೆ ಹಂದಿಗುಂದ ಗ್ರಾಮದ ಹನುಮಂತ ನಂದೇಶ್ವರ ಸಾಕ್ಷಿಯಾಗಿದ್ದಾನೆ. ಮೇ.25ರಂದು ಸೋಮವಾರ
ಕಲಾದಗಿ ಬಸ್ ನಿಲ್ದಾಣದಲ್ಲಿ ಮಕ್ಕಳೊಂದಿಗೆ ಕುಳಿತಿರುವ ಸಮಯದಲ್ಲಿ ತನಗೆ ಸಿಕ್ಕ 50 ಸಾವಿರ ಹಣವನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಅಪರೂಪದ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಕಲಾದಗಿ ಪಟ್ಟಣದಲ್ಲಿ ನಡೆದಿತ್ತು. "ಲೋಕದರ್ಶನ" ದಿನಪತ್ರಿಕೆಯು ದಿ.27.05.2026ರಂದು "ಬಸ್ ನಿಲ್ದಾಣದಲ್ಲಿ ಸಿಕ್ಕ 50ಸಾವಿರ ಹಣ ಠಾಣೆಗೆ ಒಪ್ಪಿಸಿದ ಹಂದಿಗುಂದದ ಹನುಮಂತ ಎಂಬ ಶೀರ್ಷಿಕೆಡಿ ವರದಿ ಪ್ರಕಟವಾಗಿತ್ತು"
ಇಂದು ಬಕ್ರೀದ್ ಹಬ್ಬದ ದಿನದಂದು ಅದೇ ಕಲಾದಗಿ ಗ್ರಾಮದ ಅಬ್ದುಲ್ ರಜಾಕ್ ದಸ್ಕೀರ್ ಸಾಬ್ ಬಾರೂಕವಾಲೆ ಎಂಬುವರು 50 ಸಾವಿರ ಹಣ ಕಳಕೊಂಡ ವ್ಯಕ್ತಿಗೆ ಕಲಾದಗಿ ಪೊಲೀಸ್ ಠಾಣಾ ಪಿಎಸ್‌ಐ ಪ್ರವೀಣ್ ಬಿಳಗಿ ಹಂದಿಗುಂದ ಗ್ರಾಮದ ಹನುಮಂತ ನಂದೇಶ್ವರ ಸೇರಿಕೊಂಡು 50 ಸಾವಿರ ಹಣವನ್ನು ಒಪ್ಪಿಸಿದರು. ಈ ಸಂದರ್ಭದಲ್ಲಿ ಮಹಾಲಿಂಗ ಮರನೂರ, ಪೊಲೀಸ್ ಸಿಬ್ಬಂದಿಗಳಾದ ಎಸ್.ಜಿ.ಹೇಳವಾರ, ಎಂ.ಕೆ.ಭಜಂತ್ರಿ, ಎಸ್.ಪಿ.ತುರಾತ, ಮಹಿಳಾ ಸಿಬ್ಬಂದಿ ಬಿ.ಬಿ.ಕಾಳಗಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 