ವಿಜೃಂಭಣೆಯಿಂದ ಹನುಮ ಜಯಂತಿ ಆಚರಣೆ
Hanuman Jayanti celebrated with pomp and show
ಲೋಕದರ್ಶನ ವರದಿ
ವಿಜಯಪುರ 02: ಆಂಜನೇಯ ಸ್ವಾಮಿಯು ಮಹಾದೇವನ ಅವತಾರ, ಅಷ್ಟ ಸಿದ್ಧಿ ಮತ್ತು ನವ ನಿಧಿಯನ್ನು ಹೊಂದಿರುವವನು. ಶಾಶ್ವತವಾದ ಶಕ್ತಿ, ನಿಷ್ಠೆ ಮತ್ತು ಭಕ್ತಿಯನ್ನು ಹೊಂದುತ್ತಾ ರಾಮನನ್ನು ಒಲಿಸಿಕೊಂಡವನು. ನಾವೆಲ್ಲರೂ ಹನುಮ ಜಯಂತಿಯನ್ನು ಯಾವುದೇ ಜಾತಿ-ಮತ-ಪಂಥಗಳ ಬೇಧವಿಲ್ಲದೇ ಶ್ರದ್ಧೆ, ಭಕ್ತಿ-ಭಾವ ಮತ್ತು ಸಾಮರಸ್ಯತೆಯಿಂದ ಆಚರಿಸಿ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗೋಣ. ಹನುಮಂತ ದೇವರು ಹಿಂದೂಗಳ ಪ್ರಬಲ ದೇವರು ಎಂದು ಪರಿಗಣಿಸಲಾಗುತ್ತಿದೆ. ಅವನಿಗೆ ಸರ್ವವಿಭಂಜನ ಹಾಗೂ ಸಂಕಟ ಮೋಚನ ಎಂದೂ ಕರೆಯುತ್ತಾರೆ. ಆಂಜನೇಯ ಸ್ವಾಮಿಯನ್ನು ಪೂಜಿಸಿದರೆ ಧನಾತ್ಮಕ ಶಕ್ತಿಯ ಜೊತೆಗೆ ಜೀವನದಲ್ಲಿ ಭಯ, ಸಂಕಷ್ಟ ದೂರಾಗಿ ಮನಸ್ಸಿಗೆ ಶಾಂತಿ-ನೆಮ್ಮದಿ ದೊರೆಯುತ್ತದೆ ಎಂದು ಹಿರಿಯ ಹಿಂತಕ ದ್ರುವ ಕುಲಕರ್ಣಿ ಅವರು ಅಭಿಪ್ರಾಯಪಟ್ಟರು. ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ ಕಾಲನಿಯಲ್ಲಿ ಜೈ ಹನುಮಾನ ಮಂದಿರದಲ್ಲಿ ಆಯೋಜಿಸಿದ್ದ ದಿ. 2ರಂದು ಹಮ್ಮಿಕೊಂಡ ಹನುಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಜೀವನ ನಿರ್ವಹಣೆ, ಮತ್ತು ಸಂಸಾರ ನೌಕೆಯನ್ನು ನಡೆಸುವಲ್ಲಿಯೇ ತಮ್ಮ ಜೀವನ ಸಾಗಿಸುತ್ತಿರುವ ಮನೆ ಹಿರಿಯರು, ಮಹಿಳೆಯರು, ಮಕ್ಕಳ ಮನದಲ್ಲಿ ಕೀರ್ತನೆ, ಹರಿಕಥೆ, ಮಹಾಭಾರತ, ರಾಮಾಯಣದ ಧಾರ್ಮಿಕ ಮತ್ತು ಸಾಂಸ್ಕೃತಿಕ-ಸಂಸ್ಕಾರ, ನಡೆ-ನುಡಿ, ಆಚಾರ-ವಿಚಾರ ಮತ್ತು ಮೌಲ್ವಿಕ ವೈಚಾರಿಕ ವಿಷಯಗಳ ಬಗೆಗೆ ಅರಿವು ಮೂಡಿಸಬೇಕಾಗಿದೆ ಎಂದರು. ದಾರಿ ತಪ್ಪುತ್ತಿರುವ ಇಂದಿನ ಯುವ ಜನಾಂಗಕ್ಕೆ ಮಹಾಭಾರತ, ರಾಮಯಣ, ಭಗವದ್ಗೀತೆಯ ಸಂದೇಶಗಳು ಮತ್ತು ವೈಚಾರಿಕ ಹಿನ್ನೆಲೆಯ ಬಗ್ಗೆ ತಿಳಿಸಿಕೊಟ್ಟು ಅವರು ಸಚ್ಚಾರಿತ್ರ್ಯ ಸದಾಚಾರ, ಸದ್ಭಾವನೆ, ಸನ್ನಡತೆ ಮತ್ತು ಸನ್ಮಾರ್ಗದತ್ತ ಸಾಗುವಂತೆ ಪ್ರೇರೇಪಿಸಬೇಕಾಗಿದೆ. ಮಾತೃ ದೇವೋಭವ, ಪಿತೃ ದೇವೋಭವ ಮತ್ತು ಗುರು ದೇವೋಭವ ಎಂಬ ಸಂಸ್ಕೃತಿ-ಪರಂಪರೆ ನಮ್ಮದು. ಅದಕ್ಕಾಗಿ ನಾವೆಲ್ಲರೂ ನಮ್ಮ ಅಜ್ಜ-ಅಜ್ಜಿ, ತಂದೆ-ತಾಯಿ ಮತ್ತು ಮನೆಯ ಹಿರಿಯರನ್ನು ಪೂಜ್ಯನೀಯ-ಗೌರವದಿಂದ ಭಾವ ಮನೋಭಾವ ನಮ್ಮದಾಗಬೇಕು. ಅಂದಾಗ ಮಾತ್ರ ಅದು ನಮ್ಮ ಮಕ್ಕಳು-ಮುಂದಿನ ಪೀಳಿಗೆಗೆ ಮಾದರಿಯಾಗಿ ಅವರು ಮುಂದೆ ನಮ್ಮನ್ನು ಗೌರವಿಸುವಂತಾಬೇಕು ಎಂದರು.
ಬಿ.ಎಲ್..ಡಿ.ಇ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿ ಡಾ. ಜ್ಯೋತಿ ಖೊದ್ನಾಪೂರ ಅವರು ಮಾತನಾಡಿ, ಅಧ್ಯಾತ್ಮ ಮತ್ತು ವಿಜ್ಞಾನ ಎರಡು ಒಂದೇ ನಾಣ್ಯದ ಮುಖಗಳಿದ್ದಂತೆ. ನಮ್ಮ ಋಷಿ ಮುನಿಗಳು, ಮತ್ತು ಹಿರಿಯರು ಧ್ಯಾನ, ತಪ್ಪಸ್ಸು, ಯೋಗದ ಮಹತ್ವದ ಬಗ್ಗೆ ನಮಗೆ ಪರಿಚಯಿಸಿದ್ದಾರೆ. ನಮ್ಮ ಬದುಕು ಸುಖಮಯ ಮತ್ತು ಸುಂದರವಾಗಬೇಕಾದರೆ ನಮ್ಮಲ್ಲಿ ಇತರರಿಗೆ ಸದಾ ಒಳ್ಳೆಯದನ್ನೇ ಮಾಡುವ ಮನಸ್ಥಿತಿ ಒಡಮೂಡಬೇಕು ಎಂದರು. ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ, ಎಂ.ಆರ್.ಪಾಟೀಲ, ಪ್ರೊ. ಎಂ.ಎಸ್.ಖೊದ್ನಾಪೂರ, ಎಸ್.ಜಿ. ನಿಂಗನಗೌಡ್ರ, ವೆಂಕಟೇಶ ಹೊಸಮನಿ, ಬಿ.ಆರ್.ಬಿರಾದಾರ, ಆರ್.ಬಿ.ಕುಮಟಗಿ, ಸುರೇಶ ಹಲಕುಡೆ, ಆರ್.ಎಸ್.ಕೋಷ್ಠಿ, ಲಕ್ಷ್ಮಣ ಶಿಂಧೆ ಇನ್ನಿತರರು ಸಹ ಉಪಸ್ಥಿತರಿದ್ದರು. ಹನುಮ ಜಯಂತಿ ಅಂಗವಾಗಿ ಮುಂಜಾನೆ ಆಂಜನೇಯ ಸ್ವಾಮಿಗೆ ಪುಷ್ಪಾಲಂಕಾರ, ಮಹಾಭಿಷೇಕ, ತೊಟ್ಟಿಲು ಕಾರ್ಯಕ್ರಮ ಮತ್ತು 21 ಬಾರಿ ಹನುಮಾನ ಚಾಲೀಸ ಪಠಣ ನಡೆಯಿತು, ಕಾರ್ಯಕ್ರಮದಲ್ಲಿ ನವರಸಪುರದ ಸುತ್ತಮುತ್ತಲಿನ ಎಲ್ಲ ಬಡಾವಣೆಗಳ ಹಿರಿಯರು, ಮಹಿಳೆಯರು, ಮಕ್ಕಳು ಮತ್ತು ಸಾರ್ವಜನಿಕರು ಸೇರಿದಂತೆ ನೂರಾರು ಜನ ಮಹಾಪ್ರಸಾದ ಸೇವಿಸಿ ಆಂಜನೇಯ ಸ್ಟಾಮಿಯ ಅನುಗ್ರಹಕ್ಕೆ ಪಾತ್ರರಾದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 