ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳು ಶ್ರೇಷ್ಠ: ಡಾ.ಮೀನಾ

ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳು ಶ್ರೇಷ್ಠ: ಡಾ.ಮೀನಾ  Hands that serve are better than lips that pray: Dr. Meena

ಧಾರವಾಡ 29: ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳು ಶ್ರೇಷ್ಠ. ಹಾಗೆಯೇ ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುವ ಸಂಸ್ಥೆಗಳಲ್ಲಿ ಲಯನ್ಸ್‌ ಸಂಸ್ಥೆ ಅಗ್ರಸ್ಥಾನದಲ್ಲಿದೆ ಎಂದು ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರಕರ ತಿಳಿಸಿದರು.  

ನಗರದ ಮಂದಾರ ಹೊಟೇಲ್ ನಲ್ಲಿ ಜರುಗಿದ 2025-26 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಮಾಜಮುಖಿ ಸೇವೆಗಳ ಮೂಲಕ ಇಂದಿನ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯನ್ನು ಅಳವಡಿಸಬೇಕೆಂದು ಹೇಳಿದರು.  

ಲಯನ್ಸ್‌ ಮಾಜಿ ರಾಜ್ಯಪಾಲ ಮೋನಿಕಾ ಸಾವಂತ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ,60 ವರ್ಷಗಳನ್ನು ಪೂರೈಸಿದ ಧಾರವಾಡ ಲಯನ್ಸ್‌ ಸಂಸ್ಥೆಯು ಇತರ ಲಯನ್ಸ್‌ ಸಂಸ್ಥೆಗಳಿಗೆ ಮಾದರಿಯಾಗಿದೆ.ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ಲಯನ್ಸ್‌ ಸಂಸ್ಥೆಯು 200ಕ್ಕೂ ಹೆಚ್ಚು ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, 14 ದಶಲಕ್ಷ ಸದಸ್ಯರನ್ನು ಒಳಗೊಂಡಿದೆ ಎಂದರು.ಲಯನ್ಸ್‌ ಸಂಸ್ಥೆಯು ಸೇವೆ ಮತ್ತು ನಾಯಕತ್ವ ಗುಣಗಳನ್ನು ಕಲಿಸುತ್ತದೆ ಎಂದು ಹೇಳಿದರು.  

ಧಾರವಾಡ ಲಯನ್ಸ್‌ ಸಂಸ್ಥೆಯ ಅಧ್ಯಕ್ಷರಾಗಿ ಅಶ್ವಿನ್ ಕೊಪ್ಪಿಕರ,ಕಾರ್ಯದರ್ಶಿಯಾಗಿ ಪ್ರೊ.ಸುರೇಶ ಗುದಗನವರ , ಖಜಾಂಚಿಯಾಗಿ ಶ್ರೀಕಾಂತ ದೇವಗಿರಿ ಹಾಗೂ ಇತರ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕರಿಸಿದರು.  

ನೂತನ ಅಧ್ಯಕ್ಷ ಅಶ್ವಿನ್ ಕೊಪ್ಪಿಕರ ಮಾತನಾಡಿ,ಹಿರಿಯ ಸದಸ್ಯರ ಸಹಕಾರದೊಂದಿಗೆ ಸಮಾಜಮುಖಿ ಕೆಲಸ ಮಾಡುವುದಾಗಿ ಹೇಳಿದರು. ನಿಕಟ ಪೂರ್ವ ಅಧ್ಯಕ್ಷ ಗುರುರಾಜ ಪಿಸೆ ಅನಿಸಿಕೆಗಳನ್ನು ಹಂಚಿಕೊಂಡರು. ಲಯನ್ಸ್‌ ಮಾಜಿ ರಾಜ್ಯಪಾಲ ಹರ್ಷ ದೇಸಾಯಿ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.  

ಜ್ಞಾನೇಶ ನಾತು,ಶೈಲಾ ಕರಗುದರಿ, ರೆಹನಾ ಕೊತವಾಲ,ಭುಜಂಗ ಶೆಟ್ಟಿ, ಹರ್ಷ ಡಂಬಳ, ಮುಕುಂದ ಹೆಬ್ಲಿಕರ,ಅಶೋಕ ಬಾಗಿ,ವಿಜಯ ಮುಧೋಳಕರ,ಡಾ.ಕೆ.ವಿ.ಅಚ್ಯುತ ಇತರರು ಹಾಜರಿದ್ದರು.  

ಅನುರಾಧಾ.ಕೆ  ಪ್ರಾರ್ಥಿಸಿದರು. ಡಾ.ಶ್ರೇಯಾ ಪಾಸ್ತೆ ಧ್ವಜ ವಂದನೆ ಸಲ್ಲಿಸಿದರು. ಆರ್‌. ಕೆ.ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಕವಿತಾ ಅಂಗಡಿ ವರದಿ ವಾಚನ ಮಾಡಿದರು.ಆನಂದ ಕಮಲಾಪುರ ಹಾಗೂ ಡಾ.ರಾಜಶ್ರೀ ಗುದಗನವರ ಅತಿಥಿಗಳನ್ನು ಪರಿಚಯಿಸಿದರು. ಡಾ.ಅನಿರುಧ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಪ್ರೊ.ಸುರೇಶ ಗುದಗನವರ ವಂದಿಸಿದರು.