ಬಳ್ಳಾರಿ ರಾಮಕೃಷ್ಣ ಮಿಷನ್ ಕೇಂದ್ರದ ಆಶ್ರಯದ ವ್ಯಾಪ್ತಿಗೆ ದಾಖಲೆಗಳ ಹಸ್ತಾಂತರ
ಲೋಕದರ್ಶನ ವರದಿ
ಬಳ್ಳಾರಿ 21: ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ಕೊಲ್ಕತ್ತಾದ ಶ್ರೀ ರಾಮಕೃಷ್ಣ ಮಿಷನ್, ಬೇಲೂರು ಮಠಕ್ಕೆ ಸೋಮವಾರ ಸಂಜೆ ಹಸ್ತಾಂತರ ಮಾಡಲಾಯಿತು.
ಬಳ್ಳಾರಿಯ ಹಿರಿಯರಾಗಿರುವ ಮಾಜಿ ಸಚಿವರಾದ ಅಲ್ಲಂ ವೀರಭದ್ರ್ಪ, ರಾಜ್ಯ ಸಭಾದ ಮಾಜಿ ಸದಸ್ಯರಾಗಿರುವ ಕೆ.ಸಿ. ಕೊಂಡಯ್ಯ, ಶಾಸಕರಾದ ನಾರಾ ಭರತರೆಡ್ಡಿ, ಮಾಜಿ ಶಾಸಕರಾದ ಜಿ. ಸೋಮಶೇಖರ ರೆಡ್ಡಿ, ಮೇಯರ್ ಪಿ. ಗಾದೆಪ್ಪ, ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರದ ಅಧ್ಯಕ್ಷರಾದ ಶ್ರೀಧರ ಬೋನಗೇರಿ, ಉಪಾಧ್ಯಕ್ಷರಾದ ಪೃಥ್ವಿರಾಜ್ ಭೂಪಾಲ್ ಮತ್ತು ಸಿಎ. ಸಿ. ಎರ್ರಿಸ್ವಾಮಿ ಅವರು ಭಕ್ತಾದಿಗಳ ಸಮ್ಮುಖದಲ್ಲಿ ರಾಮಕೃಷ್ಣ ಮಿಷನ್, ಬೇಲೂರು ಮಠದ ಪ್ರಧಾನ ಸಹಾಯಕ ಕಾರ್ಯದರ್ಶಿಗಳಾದ ಸ್ವಾಮಿ ಸತ್ಯೇಶಾನಂದಜೀ ಮಹಾರಾಜ್, ಬೆಂಗಳೂರಿನ ರಾಮಕೃಷ್ಣ ಮಿಷನ್, ಶಿವನಹಳ್ಳಿಯ ಸ್ವಾಮಿ ಮಹಾವಾಕ್ಯಾನಂದಜೀ ಮಹಾರಾಜ್ ಮತ್ತು ಬಳ್ಳಾರಿಯ ನೂತನ ಉಸ್ತುವಾರಿಗಳಾಗಿರುವ ಸ್ವಾಮಿ ಮಂಗಲನಾಥಾನಂದಜೀ ಮಹಾರಾಜ್ ಅವರು ದಾಖಲೆಗಳನ್ನು ಹಸ್ತಾಂತರ ಮಾಡಿದರು. ನಂತರ ದಾಖಲೆಗಳನ್ನು ಸ್ವೀಕರಿಸಿದ ಸ್ವಾಮಿಗಳು ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರವನ್ನು ರಾಮಕೃಷ್ಣ ಮಿಷನ್ಗೆ ಸೇರೆ್ಡ ಮಾಡಿಕೊಳ್ಳಲಾಗಿದೆ ಎಂದು ಘೋಷಣೆ ಮಾಡಿದರು.
ಅಲ್ಲಂ ವೀರಭದ್ರ್ಪ, ಶ್ರೀ ಕೆ.ಸಿ. ಕೊಂಡಯ್ಯ, ನಾರಾ ಭರತರೆಡ್ಡಿ, ಜಿ. ಸೋಮಶೇಖರ್ ರೆಡ್ಡಿ ಇವರುಗಳು ಮಾತನಾಡಿದಾಗ ಬಳ್ಳಾರಿಯ ರಾಮಕೃಷ್ಣ ಮಿಷನ್ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಯಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು ಹಾಗೂ ಸರ್ವದ ತಮ್ಮ ಸಹಾಯ ಈ ಮಠಕ್ಕೆ ಇದ್ದೇ ಇರುತ್ತದೆ ಎಂದು ವ್ಯಕ್ತಪಡಿಸಿದರು.
ಶ್ರೀ ಶ್ರೀಧರ್ ಬೋನಗೇರಿಯವರು ಸಭೆಗೆ ಪ್ರಾಸ್ತವಿಕ ನುಡಿಯನ್ನು ನೀಡಿದರು, ಪೃಥ್ವೀರಾಜ್ ಭೂಪಾಲ್ರವರು ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರದಿಂದ ರಾಮಕೃಷ್ಣ ಮಿಷನ್ಗೆ ಸೇರೆ್ಡ ಆಗುವವರೆಗಿನ ಬೆಳವಣಿಗೆಗಳನ್ನು ಮತ್ತು ದಾನಿಗಳ ಕುರಿತು ವರದಿ ನೀಡಿದರು. ಸಿ ಎ. ಸಿ ಎರ್ರಿಸ್ವಾಮಿಯವರು ದಾನಿಗಳ ಕುರಿತು ಮಾಹಿತಿ ನೀಡಿದರು. ಕೇಂದ್ರದ ಕಾರ್ಯದರ್ಶಿಗಳಾದ ಜಗನ್ನಾಥರವರು ಸಭೆಗೆ ಸ್ವಾಗತ ಕೋರಿದರು, ಶಿಕ್ಷಕರಾದ ರಾಜಶೇಖರವರು ಕಾರ್ಯಕ್ರಮದ ನಿರುಪಣೆ ಮಾಡಿದರು. ಕಾರ್ಯಕಾರಿ ಸಮಿತಿ ಸದಸ್ಯ ಗಡಿಗೆ ರಾಕೇಶರವರು ವಂದನಾರೆ್ಣ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 