ಗ್ರಾಮದ ನೇಕಾರ ಸಹಕಾರ ಸಂಘದಲ್ಲಿ ಕೈಮಗ್ಗ ತರಬೇತಿ ಶಿಬಿರ ಉದ್ಘಾಟನೆ
Handloom training camp inaugurated at village weaver cooperative society
ಹನುಮಸಾಗರ 01: ನೇಕಾರರು ಸ್ವಲಂಬಿಯಾಗಿ ಬದುಕನ್ನು ಸಾಗಿಸಲು ಸರಕಾರದ ತರಬೇತಿ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಕೈಮಗ್ಗದ ಮುಖ್ಯಾಧಿಕಾರಿ ತುಳಸಿರಾಮನ್ ಹೇಳಿದರು. ಪಟ್ಟಣದ ನೆಕಾರ ಸಹಕಾರಿ ಸಂಘದಲ್ಲಿ ಭಾರತ ಸರ್ಕಾರದ ಕೈಮಗ್ಗ ನೇಕಾರರ ಸೇವಾ ಕೇಂದ್ರ ಹಿ ಅಭಿವೃದ್ಧಿ ಆಯುಕ್ತರ ಕಚೇರಿ, ಬೆಂಗಳೂರು ಇವರ ವತಿಯಿಂದ ಸಮರ್ಥ್ ಯೋಜನೆಯಡಿ ಆಯೋಜಿಸಲಾದ **“ಕೈಮಗ್ಗ ನೇಕಾರ (ಪ್ರೇಮ್ ಲೂಮ್) ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ನೇಕಾರರ ಜೀವನಮಟ್ಟ ಸುಧಾರಣೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಸಮರ್ಥ್ ಯೋಜನೆ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಹಕಾರ ಸಂಘದ ಅಧ್ಯಕ್ಷ ಅನಿಲ್ ಎಂ. ಸಿನ್ನೂರ್ ಅವರು ಮಾತನಾಡಿ, ಕೈಮಗ್ಗ ಕ್ಷೇತ್ರ ಉಳಿಯಬೇಕಾದರೆ ಯುವ ನೇಕಾರರು ಕೌಶಲ್ಯ ತರಬೇತಿ ಪಡೆದು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅಗತ್ಯ. ತರಬೇತಿ ಕಾರ್ಯಕ್ರಮಗಳು ನೇಕಾರರಿಗೆ ಉದ್ಯೋಗಾವಕಾಶ ಮತ್ತು ಆದಾಯ ವೃದ್ಧಿಗೆ ಸಹಕಾರಿಯಾಗಲಿವೆ ಎಂದರು. ಇದೇ ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಪ್ರತಾಪ್, ವಸಂತ, ವಿರೇಂದ್ರ ಅಮರ್ಪ (ಜವಳಿ ಇಲಾಖೆ), ಮೈನುದ್ದಿನ್ ಖಜಿ, ಬಸವರಾಜ ಸಿನ್ನೂರ, ವಿಶಾಲ ಸಿನ್ನೂರ ಅವರು ಮಾತನಾಡಿ, ಸಮರ್ಥ್ ಯೋಜನೆಯಡಿ ನೀಡಲಾಗುವ ತರಬೇತಿ ನೇಕಾರರಿಗೆ ಸ್ವಾವಲಂಬನೆ ಸಾಧಿಸಲು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿಗಳು, ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ನೇಕಾರ ಸಂಘದ ಸದಸ್ಯರು ಇತರರು ಇದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 