ಕೈ ತೋಳೆಯುದು ಬಹಳ ಮುಖ್ಯ: ಮಲ್ಲೇಶ
Hand washing is very important: Mallesh
ಕೈ ತೋಳೆಯುದು ಬಹಳ ಮುಖ್ಯ: ಮಲ್ಲೇಶ
ಬ್ಯಾಡಗಿ 15: ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ನೀರು ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡಿಕೊಂಡರೆ ಆರೋಗ್ಯ ಸ್ಥಿರವಾಗಿಟ್ಟುಕೊಳ್ಳಲು ಸಾಧ್ಯ ಎಂದು ಮೋಟೆಬೆನ್ನೂರು ಗ್ರಾ ಪಂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲೇಶ ಮೋಟೆನವರ ಅಭಿಪ್ರಾಯಪಟ್ಟರು. ತಾಲೂಕಿನ ಮೋಟೆಬೆನ್ನೂರು ಗ್ರಾಮ ಪಂಚಾಯತಿ ಆವರಣದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ಧ ವಿಶ್ವ ಕೈ ತೊಳೆಯುವ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳ ಜೊತೆ ಕೈ ತೊಳೆಯುವ ಮೂಲಕ ಮಾತನಾಡಿದರು. ವಿಶ್ವ ಕೈತೊಳೆಯುವ ದಿನಾಚರಣೆಯಿಂದ ಅಂಗನವಾಡಿ ಹಾಗು ಶಾಲೆಗಳಲ್ಲಿ ಮಕ್ಕಳಿಗೆ ಅಗತ್ಯ ಜಾಗೃತಿ ಮೂಡಿಸುವ ಅಗತ್ಯವಿದೆ. ಚಿಕ್ಕಮಕ್ಕಳು ಆಟವಾಡಿ ಅದೇ ಕೈ ಗಳಿಂದ ಆಹಾರ ಸೇವನೆ ಮಾಡಲು ಮುಂದಾಗುವುದು ಸಹಜ. ಆದ್ದರಿಂದ ಶಾಲೆಗಳಲ್ಲಿ ಮಕ್ಕಳಿಗೆ ಕೈ ತೊಳೆಯುವ ಕುರಿತು ಜಾಗೃತಿ ಮೂಡಿಸಿದಲ್ಲಿ ಶೇ.25ರಿಂದ 50ರಷ್ಟು ಮಕ್ಕಳಿಗೆ ಅನಾರೋಗ್ಯ ದೂರವಾಗಲಿದೆ ಎಂದರು.ಮಣ್ಣಲ್ಲಿ ಆಟವಾಡುವ ಮಕ್ಕಳು ಕೈ ತೊಳೆಯದೇ ಆಹಾರ ಸೇವನೆ ಮಾಡುವುದರಿಂದ ಅತಿಸಾರ, ವಾಂತಿ, ಭೇದಿ, ನ್ಯೂಮೋನಿಯಾ ರೋಗಗಳು ಹರಡುವ ಸಾಧ್ಯತೆಯಿರುತ್ತದೆ. ಕೈ ತೊಳೆಯುವುದು ಸಣ್ಣ ವಿಷಯವಾದರೂ ನಿರ್ಲಕ್ಷಿಸಿದಲ್ಲಿ ದೊಡ್ಡ ಅಪಾಯಗಳು ಎದುರಾಗಲಿವೆ. ಎಂದು ಅಂಗನವಾಡಿ ಶಿಕ್ಷಕಿ ಬಸಮ್ಮ ತಾಯತಂದಿ.ಹೇಳಿದರುಈ ವೇಳೆ ಗ್ರೇಡ 1 ಕಾರ್ಯದರ್ಶಿ ಕೃಷ್ಣಗೌಡ ಭಗವಂತ ಗೌಡ್ರು . ಕಾರ್ಯದರ್ಶಿ ನಾಗಪ್ಪ ಪೀಠದ. ಮಾದೇವಕ್ಕ ಕರ್ಕಣ್ಣನವರ್ ಪಂಚಾಯತಿಯ ಸಿಬ್ಬಂದಿಗಳು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 