ಹಗರಿಬೊಮ್ಮನಹಳ್ಳಿ; ಪಶುಗಳಿಗೆ ಪೌಷ್ಟಿಕ ಆಹಾರ ವಿತರಣೆ

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ 11: ಹಳೇ ಹಗರಿಬೊಮ್ಮನಹಳ್ಳಿಯ ಪಶು ಆಸ್ಪತ್ರೆಯಲ್ಲಿ ಶುಕ್ರವಾರ ಹೆಂಗರುಗಳಿಗೆ ಕರು ಸಕಾಣಿಕೆ ಯೋಜನೆಯಲ್ಲಿ ಫಲಾನುಭವಿಗಳಿಗೆ ಪೌಷ್ಠಿಕ ಆಹಾರ ವಿತರಿಸಲಾಯಿತು.

ಪ.ಜಾ ಹಾಗೂ ಪ.ಪಂಗಡದವರಿಗೆ ಈ ಯೋಜನೆಯು ಲಭ್ಯವಿದ್ದು ಇದು ಮಿಶ್ರತಳಿಯ ಹೆಂಗರುಗಳಿಗೆ ಸರಕಾರವು ಪೌಷ್ಠಿಕ ಆಹಾರ ನೀಡುತ್ತಿದೆ. 3ರಿಂದ 6ತಿಂಗಳುಗಳ ಹೆಂಗರುಗಳಿಗೆ ಪೌಷ್ಠಿಕ ಆಹಾರ ನೀಡಿ ಮುಂದಿನ ದಿನಗಳಲ್ಲಿ ಈ ಯೋಜನೆಯಿಂದ ಆಥರ್ಿಕ ಸಬಲತೆ ಕಾಣುವುದಾಗಿದೆ. 2018-2019ರ ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಪಶು ವೈಧ್ಯಾಧಿಕಾರಿ ದೇವಗಿರಿ ತಿಳಿಸಿದರು.

ಫಲಾನುಭವಿಗಳು ನೀಡಿದ ಆಹಾರವನ್ನು ಒಂದು ಕರುವಿಗೆ ನೀಡಿ ಅದರ ಸಂಪೂರ್ಣ ಆರೈಕೆ ಮಾಡಬೇಕು ಇದರ ಜೊತೆ ಒಂದು ಚಿಕಿತ್ಸಾ ಕಿಟ್ ನೀಡಲಾಗುವುದು ಇದನ್ನು ಹಂತ ಹಂತವಾಗಿ ಬಳಸಬೇಕು ಹಾಗೂ ಆಹಾರದ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಇದರಿಂದ ಹೆಂಗರುಗಳು ಮುಂದಿನ ದಿನಗಳಲ್ಲಿ ಆರ್ಥಿಕ ಸಬಲತೆ ಕಾಣಬಹುದಾಗಿದೆ ಕೇವಲ ಆಹಾರವನ್ನು ನೀಡದೆ ಅದರ ಆರೈಕೆ ಮಾಡಬೇಕು ಪಶು ಆಸ್ಪತ್ರೆಯ ಸಿಬ್ಬಂದಿಗಳು ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಮೆಡಿಕಲ್ ಕಿಟ್ ಹಾಗೂ ಆಹಾರ ನೀಡುವಿಕೆಯ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.