ಹಗರಿಬೊಮ್ಮನಹಳ್ಳಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ 24 ಜೋಡಿಗಳು

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ 11: ತಾಲೂಕಿನ ಹಂಪಾಪಟ್ಟಣದ ಗ್ರಾಮದಲ್ಲಿ ನೆರಳು ಪತ್ರಿಕೆಯ 23ನೇ ವಾಷರ್ಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 24ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಶಾಸಕ ಎಸ್.ಭಿಮಾನಾಯ್ಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಾಕಷ್ಟು ಜನ ಬಡವರಿದ್ದು ಇಂದಿನ ದುಬಾರಿ ದುನಿಯಾ ಸೇರಿದಂತೆ ಬರದ ಛಾಯೆ ಮೂಡಿದ್ದು ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ನೆರಳು ಪತ್ರಿಕೆಯ ವಾಷರ್ಿಕೋತ್ಸವದ ಅಂಗವಾಗಿ ರೂಪಿಸಿರುವ ಸಾಮೂಹಿಕ ವಿವಾಹ ಕಾರ್ಯಕ್ರಮವು ಆಡಂಬರಕ್ಕೆ ಕಡಿವಾಣ ಹಾಕುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ, ಮುಂದಿನ ದಿನಗಳಲ್ಲಿ ಸಾಮೂಹಿ ವಿವಾಹಗಳನ್ನು ನಡೆಸುವವರಿಗೆ ತಾಳಿಯನ್ನು ನೀಡುತ್ತೇನೆಂದು ಶಾಸಕರು ಭರವಸೆಯನ್ನು ನೀಡಿದರು.

ಪತ್ರಿಕೆಯ ವಾಷರ್ಿಕೋತ್ಸವಕ್ಕೆ ಆಯೋಜಿಸಿದ್ದ ಸಾಮೂಹಿಕ ವಿವಾಹವು ಬಡವರ ಕಣ್ಣೀರೊರೆಸುವ ಕಾರ್ಯ ಮಾಡುತ್ತಿದೆ ಎಂದು ಪತ್ರಿಕಾ ಬಳಗವನ್ನು ಶ್ಲಾಘಿಸಿದರು,ಗ್ರಾಮದ ತಿಗಳನ ಕೆರೆ ಹಾಗೂ ಭೀಮನ ಕೆರೆಗೆ ಶೀಘ್ರವೆ ನೀರು ತುಂಬಿಸುವ ಕಾರ್ಯಕ್ಕೆ ಹಸಿರು ನಿಶಾನೆ ನೀಡಲಾಗುವುದು ಎಂದು ತಿಳಿಸಿದರು.

ತಹಶೀಲ್ದಾರ್ ಆಶಪ್ಪ ಪೂಜಾರ್ ಮಾತನಾಡಿ ಸರಳ ಸಜ್ಜನಿಕೆ ಜೀವನವನ್ನು ನಡೆಸುವವರು ಸಾಮೂಹಿಕ ವಿವಾಹಗಳನ್ನು ಅನುಸರಿಸುತ್ತಾರೆ ಎಂದು ತಿಳಿಸಿ ವೈವಾಹಿಕ ಜೀವನಕ್ಕೆ ಕಲಿಡುತ್ತಿರುವ ನವ ಜೋಡಿಗಳಿಗೆ ಶುಭ ಹಾರೈಸಿದರು.

ಮುಟಗನಹಳ್ಳಿ ಕೊಟ್ರೇಶ್, ಎಂ.ಪಿ.ವೀಣಾ ಮಹಾಂತೇಶ್ ಮಾತನಾಡಿದರು. ಪರಮಪೂಜ್ಯ ಹಾಲವೀರಪ್ಪಜ್ಜ ಹಾಗೂ ಮ.ನಿ.ಪ್ರ.ಮರಿಮಹಾಂತ ಮಹಾಸ್ವಾಮಿಗಳು ವಧುವರರಿಗೆ ಆಶಿರ್ವಚನ ನೀಡಿದರು.

ಈ ಸಂಧರ್ಭದಲ್ಲಿ  ಇಒ.ವಿಶ್ವನಾಥ್, ಕನ್ನಿಹಳ್ಳಿ ಚಂದ್ರು, ಹೆಗ್ಡಾಳ್ ರಾಮಣ್ಣ,ಕುರಿ ಶಿವಮೂತರ್ಿ, ಅನಿಲ್ ಕುಮಾರ ಜಾಣ, ಬಂಗ್ಲೆ ಮಲ್ಲಿಕಾಜರ್ುನ, ಪವಾಡಿ ಹನುಮಂತಪ್ಪ, ಸಿ.ಶಿವಾನಂದ, ಪತ್ರೇಶ್ ಹಿರೆಮಠ್, ನಾಗಮ್ಮ ಗೋಣಿಬಸಪ್ಪ, ಮಾಳ್ಗಿ ಗಿರೀಶ್ ಸೇರಿದಂತೆ ನೆರಳು ಪತ್ರಿಕಾ ಬಳಗ ಹಾಗೂ ಹಂಪಾಪಟ್ಟಣದ ಗ್ರಾಮಸ್ಥರು ಭಾಗವಹಿಸಿದ್ದರು.