ಹಡಪದ ಅಪ್ಪಣ್ಣ ಇವರದು ಕ್ಷೌರಿಕ ಕಾಯಕ ಜೀವನ ಕಾರ್ಯ ನಿಷ್ಠೆ ಸೇವಾನಿಷ್ಠೆ : ತಹಶೀಲ್ದಾರ್ ಗೌಸಿಯಾ ಬೇಗಂ

ಹಡಪದ ಅಪ್ಪಣ್ಣ ಇವರದು ಕ್ಷೌರಿಕ ಕಾಯಕ ಜೀವನ ಕಾರ್ಯ ನಿಷ್ಠೆ ಸೇವಾನಿಷ್ಠೆ : ತಹಶೀಲ್ದಾರ್ ಗೌಸಿಯಾ ಬೇಗಂ Hadapad Appanna Jayanti: Siruguppa news

ಸಿರುಗುಪ್ಪ  10:  ಪ್ರತಿಯೊಬ್ಬ ಮಕ್ಕಳಿಗೆ ಶಿಕ್ಷಣವನ್ನಾಗಿಸಿ ಶಿವಶರಣ ನಿಜ ಸುಖಿ ಹಡಪದ ಅಪ್ಪಣ್ಣ ಇವರದು ಕ್ಷೌರಿಕ ಕಾಯಕ ಜೀವನ ಕಾರ್ಯ ನಿಷ್ಠೆ ಸೇವಾನಿಷ್ಠೆ ಎಂದು ತಹಸಿಲ್ದಾರ್ ಗೌಸಿಯಾ ಬೇಗಂ ಅವರು ಹೇಳಿದರು ಕರ್ನಾಟಕ ಸರ್ಕಾರ ತಾಲೂಕ ಆಡಳಿತ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯ ಸಭಾ ಭವನದಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ 866ನೇ ಜಯಂತೋತ್ಸವ ಸಮಾರಂಭದಲ್ಲಿ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಮಾಲಾರೆ​‍್ಣ ಪುಷ್ಪ ಅರ​‍್ಿಸಿ ನಮನ ಸಲ್ಲಿಸಿ ಅವರು ಮಾತನಾಡುತ್ತಾ ನಡೆ ನುಡಿ ಏಕತೆಯ ಮಹಾಜ್ಞಾನಿ ವಚನಕಾರ ನಿಜ ಸುಖಿ ಶಿವಶರಣ ಹಡಪದ ಅಪ್ಪಣ್ಣ ಅವರ ಆದರ್ಶ ಗುಣ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದು ಕರೆ ಕೊಟ್ಟರು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ ಮಲ್ಲಿಕಾರ್ಜುನ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತ ಬಯಸಿದರು ಹಡಪದ ಅಪ್ಪಣ್ಣ ತಾಲೂಕು ಸಮುದಾಯದ ಅಧ್ಯಕ್ಷರಾದ ವೀರೇಶ ಉಪಾಧ್ಯಕ್ಷರಾದ ಈರಣ್ಣ ಗೌರವ ಅಧ್ಯಕ್ಷರಾದ ನಾಗರಾಜ ಅವರು ಮಾತನಾಡಿ ಶೈಕ್ಷಣಿಕ ಆರ್ಥಿಕ ರಾಜಕೀಯ ವಾಗಿ ಮತ್ತು ಸಮುದಾಯದ ಹಿತ ದೃಷ್ಟಿಯಿಂದ ನಮ್ಮ ಸಮಾಜಕ್ಕಾಗಿ ಸಮುದಾಯ ಭವನ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅವರು ತಹಸಿಲ್ದಾರರಲ್ಲಿ ವಿನಂತಿಸಿ ಮನವಿ ಮಾಡಿಕೊಂಡರು. 

ಸಿರುಗುಪ್ಪ ನಗರದ ಬಸವೇಶ್ವರ ಕಾಲೇಜು ಪ್ರಾಂಶುಪಾಲರಾದ ಜಡಪ್ಪ ಜಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿ ಬಸವಣ್ಣನವರು ಹಡಪದ ಅಪ್ಪಣ್ಣ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದರು ಜನರ ಮೂಡನಂಬಿಕೆಯನ್ನು ಹೋಗಲಾಡಿಸಲೆಂದೇ ತಮ್ಮನ್ನು ಭೇಟಿಯಾಗಲು ಬರುವ ಯಾರೇ ಆಗಲಿ ಮೊದಲು ಹಡಪದ ಅಪ್ಪಣ್ಣನವರನ್ನು ಭೇಟಿಯಾಗಿಯೇ ಬರಬೇಕು ಎಂಬ ನಿಯಮ ಮಾಡಿದರು ಬಸವಣ್ಣನವರಿಗೆ ಅತ್ಯಂತ ನಿಕಟ ವರ್ತಿಯಾದ ಶರಣರು ​‍್ರ​‍್ರಥಮ ಸಂಸತ್ತಾದ ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗ ವಹಿಸುತ್ತಿದ್ದರು ತಮ್ಮ ಅಪಾರವಾದ ಜ್ಞಾನದಿಂದ ಎಲ್ಲಾ ಶರಣರ ಮೆಚ್ಚುಗೆಗೆ ಪಾತ್ರರಾಗಿ ನಿಜ ಸುಖಿ ಅಪ್ಪಣ್ಣ ಎಂಬ ಬಿರುದನ್ನು ಪಡೆದರು ಹಡಪದ ಅಪ್ಪಣ್ಣನವರ ಧರ್ಮಪತ್ನಿ ಲಿಂಗಮ್ಮನವರು ಕೂಡ ಮಹಾಜ್ಞಾನಿಗಳಾಗಿದ್ದರು ಹಡಪದ ಅಪ್ಪಣ್ಣನವರು ಬಿಜಾಪುರ್ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕು ಮಸಬಿನಾಳ ಗ್ರಾಮದ ಚೆನ್ನವೀರ​‍್ಪ ದೇವಕೆಮ್ಮನವರ ಸುಪುತ್ರ ರಾಗಿ ಕ್ರಿಸ್ತಶಕ 1160 ಎಂದು ಗುರಿತಿಸಲಾಗಿದೆ ಅಪ್ಪಣ್ಣ ಪ್ರಿಯ ಚನ್ನಬಸವಣ್ಣ ಅಂಕಿತದಲ್ಲಿ 114 ವಚನಗಳನ್ನು ರಚಿಸಿದ್ದಾರೆ ಹಡಪದ ಅಪ್ಪಣ್ಣ ಅವರು ಮಾಡಿದ ಚಿಂತನೆ ಸೇವೆ ವಚನಗಳ ಆಶಯ ಇವತ್ತಿನ ಜನಾಂಗ ಅರಿತು ಆಚರಿಸಬೇಕಾಗಿದೆ. 

 ಮಹಾಜ್ಞಾನಿ ವಚನಕಾರ ಹಡಪದ ಅಪ್ಪಣ್ಣ ಅವರ ಜೀವನ ಚರಿತ್ರೆಯನ್ನು ವಿವರಿಸಿ ಹೇಳಿದರು ಉಪ ತಹಸಿಲ್ದಾರ್ ಸಿದ್ದಾರ್ಥ ಕಾರಂಜಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಸದಸ್ಯರು ಸಮಾಜ ಸುಧಾರಕ ಎ ಅಬ್ದುಲ್ ನಬಿ ಹಡಪದ ಅಪ್ಪಣ್ಣ ಸಮುದಾಯದ ಮುಖಂಡರು ಸಂಘದ ಸದಸ್ಯರು ಎಲ್ಲ ಇಲಾಖೆಯ ಅಧಿಕಾರಿಗಳು ಇದ್ದರು.2ನಡೆ ನುಡಿ ಏಕತೆಯ ಮಹಾಜ್ಞಾನಿ ವಚನಕಾರ ನಿಜ ಸುಖಿ ಶಿವಶರಣ ಹಡಪದ ಅಪ್ಪಣ್ಣ -ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಬಸವರಾಜಸಿರುಗುಪ್ಪ-ನಡೆ-ನುಡಿ ಏಕತೆಯ ಸಮನ್ವಯವೇ ಬಸವ ಪ್ರಿಯ ನುಡಿದಂತೆ ನಡೆದು ಒಂದಾಗುವ ಮಹಾಜ್ಞಾನಿ ವಚನಕಾರ ನಿಜ ಸುಖಿ ಮಹಾಜ್ಞಾನಿ ವಚನಕಾರ ನಿಜ ಸುಖಿ ಶಿವಶರಣ ಹಡಪದ ಅಪ್ಪಣ್ಣ ಎಂದು ತಾಲೂಕ ಪಂಚಾಯತ್ ಸಹಾಯಕ ನಿರ್ದೇಶಕ ಬಸವರಾಜ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರುಸಿರುಗುಪ್ಪ ತಾಲೂಕ ಪಂಚಾಯತ್ ಕಾರ್ಯಾಲಯದಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಾಲೂಕು ಆಡಳಿತ ತಾಲೂಕು ಪಂಚಾಯತ್ ಸಿರುಗುಪ್ಪ ಸಹಭಾಗಿತ್ವದಲ್ಲಿ 866ನೇ ಹಡಪದ ಅಪ್ಪಣ್ಣ ಅವರ ಜಯಂತಿ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಮಾಲಾರೆ​‍್ಣ ಪುಷ್ಪ ಸಮರೆ​‍್ಣ ಗೌರವ ನಮನ ಸಲ್ಲಿಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. 

ತಾಲೂಕ ಪಂಚಾಯತ್ ವ್ಯವಸ್ಥಾಪಕಿ ಸುಜಾತ ಕೋರಿ ರಾಷ್ಟ್ರೀಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯ ಸಮಾಜ ಸುಧಾರಕ ಅಬ್ದುಲ್ ನಬಿ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಷಾದ್ ಅಲಿ ಕಚೇರಿಯ ಸಿಬ್ಬಂದಿ ವರ್ಗ ಮತ್ತಿತರರು ಇದ್ದರು3ಸಿರುಗುಪ್ಪ ಸೌದಾಗರ್ ಮಸಿದ್ ಹುಸೇನಿ ಸಾಹೇಬ್ ಭಾವೈಕ್ಯತಾ ಮೊಹರಂನ ಜಿಯಾರತ್ ದರ್ಶನ ಪಡೆದ ಶಾಸಕ ಬಿ ಎಂ ನಾಗರಾಜಸಿರುಗುಪ್ಪ-ನಗರದ ಸೌದಾಗರ್ ಮಸೀದಿಯ ಹುಸೇನಿ ಸಾಹೇಬ್ ಭಾವೈಕ್ಯತ ಮೊಹರಂ ನ ಜಿಯಾರತ್ ಷರೀಫ್ ಫಿಟಾರ ಪೆಟ್ಟಿಗೆ ಜಾಗೀರ್ದಾರ್ ಪಟೇಲ್ ಖತೀಬ್ ಜಹೀರುದ್ದೀನ್ ಬಾಬು ಅವರ ನೇತೃತ್ವದಲ್ಲಿ ಖುರಾನ್ ಫಾತೆಹಾ ಓದಿಕೆ ದೀನ್ ಜಗಾಯಿಸಿ ಜಿಯಾರತ್ ದರ್ಶನದಲ್ಲಿ ಶಾಸಕ ಬಿ ಎಂ ನಾಗರಾಜ ಅವರು ಆಶೀರ್ವಾದ ಪಡೆದು ಸರ್ವ ಜನಾಂಗದವರೊಂದಿಗೆ ಅನ್ನದಾಸೋಹ ಪ್ರಸಾದ ವ್ಯವಸ್ಥೆಯಲ್ಲಿ ಪಾಲ್ಗೊಂಡರು ಮತ್ತು ಜೂಲೂಸ್ ಮೆರವಣಿಗೆ ಶೆಹೆನಾಯಿ ತಾಷ ರಂಡೋಲ್ ತಪ್ಪಡಿ ವಾದ್ಯಗಳೊಂದಿಗೆ ಖತೀಬ್ ಸಾಹೇಬರ ನಿವಾಸಕ್ಕೆ ಫಿಟಾರ ಪೆಟ್ಟಿಗೆ ತೆರಳಿತು ಆರಂಭದಲ್ಲಿ ಶಾಸಕ ಬಿ.ಎಂ. ನಾಗರಾಜ, ಖತೀಬ್ ಜಹೀರುದ್ದೀನ್ ಬಾಬು, ನಗರಸಭೆ ಅಧ್ಯಕ್ಷರ ಪತಿ ಬಿ. ವೆಂಕಟೇಶ್, ನಗರಸಭೆ ಸದಸ್ಯ ಹೆಚ್‌. ಗಣೇಶ್, ಬಿ ಎಂ ಮಣಿಕಂಠ ನಾಯಕ, ಆದೋನಿ ಬಿ.ಗೋವಿಂದಪ್ಪ, ಲತ್ತಿಬಾಯಿ ಮೊಹಮ್ಮದ್ ಆಜಮ್, ಹಂಡಿ ರಹೀಂ ಸಾಬ್, ಪತ್ತಾರ್ ಶ್ರೀನಿವಾಸ್, ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಮೊಹಮ್ಮದ್ ನೌಷಾದ್ ಅಲಿ ಹಾಜಿ ಎ. ಅಬ್ದುಲ್ ನಬಿ ಸುನಾರ್ ಮೆಹಬೂಬ್ ಬಾಷಾ, ಮಕಾನ್ ದಾರ್ ಮೆಹಬೂಬ್ ಬಾಷಾ, ಎ. ಟೈಲರ್ ಮೆಹಬೂಬ್ ಸುಬಾನ್ ಸಾಬ್, ಹಂಡಿ ಹುಸೇನ್, ಸೌದಾಗರ್ ಹಾಜಿ ಮೊಹಮ್ಮದ್ ಇಲಿಯಾಸ್, ಸೇರಿದಂತೆ ಮತ್ತಿತರ ಪ್ರಮುಖರಿಗೆ ಸೌದಾಗರ್ ಮಸೀದಿ ಮೊಹರಂ ಹುಸೇನಿ ಸಾಹೇಬ್ ಕಮಿಟಿಯ ಅಧ್ಯಕ್ಷರು ಪದಾಧಿಕಾರಿಗಳು ಎಲ್ಲಾ ಸದಸ್ಯರಾದ ಹಂಡಿ ಶಾಹಿದ್, ವೈ.ಷಾಬು, ಪತ್ತರ್ ಶಿವಕುಮಾರ್, ತೀನ್ ಸುಳಿ ಹುಸೇನ್, ಮೊಹಮ್ಮದ್ ಮುನವರ್, ಸರ್ದಾರ್, ರಾಜ, ಬಿ.ಹಮೀದ್, ಸುನಾರ್ ಅಜೀಮ್, ಶಾಮಿದ್, ರಮೇಶ್, ಚಾಂದ್ ಬಾಷಾ, ಹಂಡಿ ಆಲಂ, ತಪ್ಪಡಿ ರಾಜ, ಹಂಡಿ ಖಾಜಾ ಅವರು ಗಣ್ಯಮಾನ್ಯರಿಗೆ ಗೌರವಿಸಿ ಸನ್ಮಾನಿಸಿದರು. 

4ಪವಿತ್ರ ಹಜ್ ಯಾತ್ರೆ-2026 ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಸಿರುಗುಪ್ಪ-2026ನೇ ಸಾಲಿನಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈ 7 ರಿಂದ ಆರಂಭವಾಗಿದೆ ಎಂದು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಮಾಜಿ ಬಳ್ಳಾರಿ ಜಿಲ್ಲಾ ಸದಸ್ಯರು ಸಾಮಾಜಿಕ ಕಾರ್ಯಕರ್ತ ಅಲ್ಹಾಜ್ ಎ. ಅಬ್ದುಲ್ ನಬಿ ಚಿಸ್ತಿ ನಿಜಾಮಿ ಅವರು ತಿಳಿಸಿದ್ದಾರೆಆಸಕ್ತಿಯುಳ್ಳ ಹಜ್ ಯಾತ್ರಾರ್ಥಿ ಹಾಜಿಗಳು ಹಜ್ ಯಾತ್ರೆಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಮುಂಬೈನ ಭಾರತೀಯ ಹಜ್ ಕಮಿಟಿಯ ವೆಬ್ ಸೈಟ್ https://haj committee.gov.in CxÀªÁ suvidha App  ಮುಖಾಂತರ ಸಲ್ಲಿಸಬಹುದಾಗಿದೆ ಕರ್ನಾಟಕ ರಾಜ್ಯ ಹಜ್ ಕಮೀಟಿ ಬೆಂಗಳೂರು ಅಧ್ಯಕ್ಷರಾದ ಜುಲ್ಫಿ ಖಾರ್ ಅಹ್ಮದ್ ಖಾನ್ ಅವರು ಪ್ರಕಟಿಸಿದ್ದಾರೆ ಎಂದು ಜನಾಭಿಪ್ರಾಯ ಮುಖಂಡ ಅಲ್ಹಾಜ್ ಅಬ್ದುಲ್ ನಬಿ ತಿಳಿಸಿದ್ದಾರೆ