ಹೋತನಹಳ್ಳಿ ಗ್ರಾಮಕ್ಕೆ ರೂ. 38 ಲಕ್ಷ ವೆಚ್ಚದ ವಿದ್ಯುತ್ ಕಾಮಗಾರಿಗೆ ಹೆಸ್ಕಾಂ ಅಧ್ಯಕ್ಷರಿಂದ ಚಾಲನೆ

ಹೋತನಹಳ್ಳಿ ಗ್ರಾಮಕ್ಕೆ ರೂ. 38 ಲಕ್ಷ ವೆಚ್ಚದ ವಿದ್ಯುತ್ ಕಾಮಗಾರಿಗೆ ಹೆಸ್ಕಾಂ ಅಧ್ಯಕ್ಷರಿಂದ ಚಾಲನೆ HESCOM Chairman launches Rs. 38 lakh electricity project for Hotanahalli village

ಲೋಕದರ್ಶನ ವರದಿ 

ಶಿಗ್ಗಾವಿ 16 : ಹೋತನಹಳ್ಳಿ ಭಾಗದ ರೈತರಿಗೆ ಮತ್ತು ಸಾರ್ವಜನಿಕರಿಗೆ ಸಮರ​‍್ಕ ವಿದ್ಯುತ್ ಸಿಗುತ್ತಿಲ್ಲ ಎಂಬ ದೂರು ಇತ್ತು. ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಹೆಸ್ಕಾಂ ನಿಗಮದಿಂದ ಅಲ್ಪ ಸಮಯದಲ್ಲಿಯೇ ರೂ.38 ಲಕ್ಷ ಅನುದಾನವನ್ನು ಮಂಜೂರು ಮಾಡಿಸಲಾಗಿದೆ ಎಂದು ಹೆಸ್ಕಾಂ ಅಧ್ಯಕ್ಷ ಸೈಯದ ಅಜೀಂಪೀರ ಎಸ್ ಖಾದ್ರಿ ಹೇಳಿದರು. 

ತಾಲೂಕಿನ ಬಂಕಾಪುರ-ಹೋತನಹಳ್ಳಿ ಗ್ರಾಮಗಳಿಗೆ ಸಮರ​‍್ಕ ವಿದ್ಯುತ್ ಪೂರೈಸುವ ರೂ.38 ಲಕ್ಷ ರೂಪಾಯಿಗಳ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ರೈತರು ದೇಶದ ಬೆನ್ನೆಲುಬು, ಅವರಿಗೆ ಗುಣಮಟ್ಟದ ವಿದ್ಯುತ್ ಒದಗಿಸುವುದು ನಮ್ಮ ಕರ್ತವ್ಯ. ಈ ಯೋಜನೆಯಿಂದ ಬಂಕಾಪುರ ಹಾಗೂ ಹೋತನಹಳ್ಳಿ ಭಾಗದ ಜನರಿಗೆ ವಿದ್ಯುತ್ ಕೊರತೆ ನೀಗಲಿದೆ" ಎಂದು ಭರವಸೆ ನೀಡಿದರು. ಕಾಮಗಾರಿಗೆ ಚಾಲನೆ ನೀಡಿದ ಹೆಸ್ಕಾಂ ಅಧ್ಯಕ್ಷರನ್ನು ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಮುಖಂಡರು ಸನ್ಮಾನಿಸಿ ಗೌರವಿಸಿದರು. 

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಆಂಜನೇಯ ಗುಡಗೇರಿ, ಪ್ರಮುಖರಾದ ಶಂಕ್ರಣ್ಣ ಕಟಗಿ, ಗದಿಗೆಪ್ಪ ಬಳ್ಳಾರಿ, ಸಿದ್ದನಗೌಡ ಪಾಟೀಲ, ಗುಡ್ಡಪ್ಪ ಬಳ್ಳಾರಿ, ನೂರಹ್ಮದ ದ್ಯಾಮನಕೊಪ್ಪ, ಮಪಿಜಹ್ಮದ ದ್ಯಾಮನಕೊಪ್ಪ, ಮಾಬುಬಲಿ ಕಲ್ಯಾಣ, ಬಸವಣ್ಣೆಪ್ಪ ಹುಣಸಿಕಟ್ಟಿ, ಸಿದ್ದಲಿಂಗಪ್ಪ ತೋಟದ ಸೇರಿದಂತೆ ಪಕ್ಷದ ಮುಖಂಡರು, ಹೆಸ್ಕಾಂ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.