ಕೊರೊನಾಸೋಂಕು, ಆರ್ಥಿಕ ಪರಿಹಾರ ಮಸೂದೆಗೆ ಟ್ರಂಪ್ ಅಂಕಿತHEALTH-TRUMP-CORONAVIRUS BILL
Lokadrshan Daily
1/5/25, 11:37 AM ಪ್ರಕಟಿಸಲಾಗಿದೆ
ವಾಷಿಂಗ್ಟನ್, ಮಾರ್ಚ್ 19 :- ಉಚಿತ ಕರೋನಾ ಚಿಕಿತ್ಸೆ, ಕಡಿಮೆ ಆದಾಯದ ಜನರಿಗೆ ಆಹಾರ ಖಾತ್ರಿ ಒದಗಿಸುವ, ಕಾಂಗ್ರೆಸ್ ಅಂಗೀಕರಿಸಿದ ಬಹುಕೋಟಿ ಡಾಲರ್ ಕೊರೊನಾ ಆರ್ಥಿಕ ಪರಿಹಾರ ಮಸೂದೆ, ಕಾಯಿದೆಯಾಗಿ ಜಾರಿಗೆ ಬರಲು ಅನುವಾಗುವಂತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಬಡ ಕುಟುಂಬಗಳಿಗೆ ನೆರವಾಗಲು ಈ ಮಸೂದೆ ಸಹಾಯವಾಗಲಿದೆ ಎಂದು ನಂತರ ಟ್ರಂಪ್ ಹೇಳಿದ್ದಾರೆ.
ಈ ಕಾಯಿದೆಯು ತುರ್ತು ಪೂರಕ ವಿನಿಯೋಗ ಮತ್ತು ಕಾನೂನಿನ ಇತರ ಬದಲಾವಣೆಗೆ ಅವಕಾಶ ಮಾಡಿಕೊಡಲಿದೆ ಎಂದು ಶ್ವೇತಭವನ ಉಲ್ಲೇಖಿಸಿದಂತೆ ಟ್ರಂಪ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಸೂದೆಯು ಕೋವಿಡ್ ಸೋಂಕಿನ ಉಚಿತ ಪರೀಕ್ಷೆಗೆ ಸಹಾಯ ಮಾಡಲಿದೆ , ತುರ್ತು ಪಾವತಿಸಿದ ರಜೆ , ಮೇಲಾಗಿ ಕಡಿಮೆ ಆದಾಯದ ಕುಟುಂಬಗಳಿಗೆ ಒಂದು ಬಿಲಿಯನ್ ಆಹಾರ ಸಹಾಯವನ್ನು ಖಾತ್ರಿಗೊಳಿಸುವ ಮತ್ತು ನಿರುದ್ಯೋಗ ವಿಮೆಗೆ ಹಣಕಾಸು ಸೌಲಭ್ಯ ಒದಗಿಸಲಿದೆ ಎಂದು ಅವರು ಹೇಳಿದರು.
ಇದೇ 11 ರಂದು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19 ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು . ವಿಶ್ವಾದ್ಯಂತ 200,000 ಕ್ಕೂ ಹೆಚ್ಚು ಜನರು ಕರೋನವೈರಸ್ ಸೋಂಕಿಗೆ ಒಳಗಾಗಿದ್ದು, 8,700 ಕ್ಕೂ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿದೆ.