ಹೆಚ್ಚು ಕೌಶಲ್ಯವುಳ್ಳ ವಿದೇಶಿ ನೌಕರರಿಗೆ ಎಚ್1ಬಿ


ವಾಷಿಂಗ್ಟನ್, ಡಿ.1- ಉನ್ನತ ಕೌಶಲ್ಯ ಮತ್ತು ಅಧಿಕ ವೇತನದ ಸಾಮಥ್ರ್ಯ ಹೊಂದಿರುವ ಭಾರತದ ಉದ್ಯೋಗಿಗಳಿಗೆ ಅಮೆರಿಕ ಸಿಹಿ ಸುದ್ದಿಯೊಂದನ್ನು ನೀಡಿದೆ.

ಅಮೆರಿಕಾ ಸಕರ್ಾರ ನೀಡುವ ಹೆಚ್-1ಬಿ ವೀಸಾವನ್ನು ಹೆಚ್ಚು ಕೌಶಲ್ಯ ಹೊಂದಿರುವ ಮತ್ತು ಅತಿ ಹೆಚ್ಚು ವೇತನ ಪಡೆಯುವ ವಿದೇಶಿ ನೌಕರರಿಗೆ ನೀಡುವ ಪ್ರಸ್ತಾವನೆಯನ್ನು ಡೊನಾಲ್ಡ್ ಟ್ರಂಪ್ ನೇತೃತ್ವದ ಸಕರ್ಾರ ಕೈಗೊಂಡಿದೆ.

ಹೊಸ ಮೆರಿಟ್ ಆಧಾರಿತ ನಿಯಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆಚ್ -1 ಬಿ ವೀಸಾದಡಿ ಕೆಲಸ ಮಾಡುತ್ತಿರುವ ವಿದೇಶಿ ನೌಕರರನ್ನು ಒಳಗೊಂಡ ಕಂಪೆನಿಗಳು ಕಡ್ಡಾಯವಾಗಿ ಗೊತ್ತುಪಡಿಸಿದ ನೋಂದಣಿ ಅವಧಿಯಲ್ಲಿ ಅಮೆರಿಕಾ ನಾಗರಿಕತ್ವ ಮತ್ತು ವಲಸೆ ಸೇವೆಗಳೊಂದಿಗೆ ವಿದ್ಯುನ್ಮಾನವಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

ಅಮೆರಿಕಾದ ಕಾಂಗ್ರೆಸ್ ನೇತೃತ್ವದ ಸಕರ್ಾರ ಪ್ರತಿ ಹಣಕಾಸು ವರ್ಷದಲ್ಲಿ 65 ಸಾವಿರ ಹೆಚ್-1ಬಿ ವೀಸಾ ನೀಡುವಿಕೆಗೆ ಮಿತಿ ಹಾಕುತ್ತದೆ. ಅವುಗಳಲ್ಲಿ ಇನ್ನು ಮುಂದೆ ಮೊದಲ 20 ಸಾವಿರ ವೀಸಾ ಅಜರ್ಿಗಳನ್ನು ಕೌಶಲ್ಯಭರಿತ ಮತ್ತು ಹೆಚ್ಚು ವೇತನ ಪಡೆಯುವ ವಿದೇಶಿ ನೌಕರರಿಗೆ ನೀಡಲು ಸಕರ್ಾರ ಪ್ರಸ್ತಾವನೆ ಸಲ್ಲಿಸಿದೆ.

ಸಕರ್ಾರದ ಈ ಹೊಸ ಪ್ರಸ್ತಾವನೆಯಿಂದ ಅಮೆರಿಕಾದ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಸ್ನಾತಕೋತ್ತರ ಡಿಗ್ರಿ ಪಡೆದ ಅತಿ ಹೆಚ್ಚು ಕೌಶಲ್ಯಭರಿತ ಮತ್ತು ಅತಿ ಹೆಚ್ಚು ವೇತನ ಪಡೆಯುವವರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಹೆಚ್1-ಬಿ ವೀಸಾಗೆ ಇನ್ನು ಮುಂದೆ ಎಲೆಕ್ಟ್ರಾನಿಕ್ ದಾಖಲಾತಿ ಸೌಲಭ್ಯ ನೀಡುವುದರಿಂದ ಅಜರ್ಿ ಸಲ್ಲಿಸುವವರಿಗೆ ಒಟ್ಟಾರೆ ಖಚರ್ು ಕಡಿಮೆಯಾಗಲಿದೆ ಮತ್ತು ಅಮೆರಿಕಾ ನಾಗರಿಕತ್ವ ಮತ್ತು ವಲಸೆ ಸೇವೆಗಳ ಇಲಾಖೆ ಹೆಚ್ಚು ದಕ್ಷವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಅಜರ್ಿದಾರರ ಆಯ್ಕೆ ಸಮಯವನ್ನು ಕೂಡ ಕಡಿಮೆ ಮಾಡಲಿದೆ.

ಈ ಬೆಳವಣಿಗೆ ಭಾರತದ ಪ್ರತಿಭಾವಂತ ಉದ್ಯೋಗಿಗಳೂ ಸೇರಿದಂತೆ ವಿವಿಧ ದೇಶಗಳ ನೌಕರರಿಗೂ ಸಹಕಾರಿಯಾಗಲಿದೆ.