ವಾ.ಕ.ರ.ಸಾ.ಸಂ ನಿರ್ದೇಶಕರಾಗಿ ಹೆಚ್‌.ಎಸ್‌. ಕೀರ್ತನಾ ಅಧಿಕಾರ ಸ್ವೀಕಾರ

ವಾ.ಕ.ರ.ಸಾ.ಸಂ ನಿರ್ದೇಶಕರಾಗಿ ಹೆಚ್‌.ಎಸ್‌. ಕೀರ್ತನಾ ಅಧಿಕಾರ ಸ್ವೀಕಾರ H.S. Keerthana assumes office as Director of NWKRTC

ಲೋಕದರ್ಶನ ವರದಿ 

ಗದಗ ಸೆ.28: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಹೆಚ್‌.ಎಸ್‌. ಕೀರ್ತನಾ, ಭಾ.ಆ.ಸೇ. ಅವರು ಸೋಮವಾರ (ಸೆ.28) ಅಧಿಕಾರ ವಹಿಸಿಕೊಂಡರು.  2020ನೇ ಕರ್ನಾಟಕ ಬ್ಯಾಚ್ನ ಭಾರತೀಯ ಆಡಳಿತ ಸೇವೆ  ಅಧಿಕಾರಿಯಾಗಿರುವ ಹೆಚ್‌.ಎಸ್‌. ಕೀರ್ತನಾ ಅವರು ಈ ಹಿಂದೆ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಅಇಓ) ಸೇವೆ ಸಲ್ಲಿಸಿದ್ದರು. ಇದೀಗ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದಾರೆ.