ದಿ, 5 ರಂದು ಗ್ಯಾರವಿ ಹಬ್ಬದ ಆಚರಣೆ: ಅಮ್ಜದ್ ಪಟೇಲ್ ಗೆ ಆಹ್ವಾನ

ದಿ, 5  ರಂದು ಗ್ಯಾರವಿ ಹಬ್ಬದ ಆಚರಣೆ: ಅಮ್ಜದ್ ಪಟೇಲ್ ಗೆ ಆಹ್ವಾನ  Gyaravi festival celebration: Invitation to Patel

ಕೊಪ್ಪಳ 4:  ತಾಲೂಕಿನ ಅಳವಂಡಿ ಗ್ರಾಮದ ಹಜರತ್ ಮಹಬೂಬ್ ಸುಭಾನಿ ದರ್ಗಾ ಅವರಣದಲ್ಲಿ  ದಿ, 5  ರ ಮಧ್ಯಾಹ್ನ 3 ಗಂಟೆಗೆ ಗ್ಯಾರವಿ ಶರೀಫ್ ಹಬ್ಬದ ಪ್ರಯುಕ್ತ ಅಂಜುಮನ್ ಇಸ್ಲಾಂ ಕಮಿಟಿ ಅಳವಂಡಿ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸದರಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವಂತೆ ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ರವರಿಗೆ ಕಾರ್ಯಕ್ರಮ ದ ಸಂಘಟಕರು ಕೊಪ್ಪಳ ನಗರಸಭೆಯ ಕಚೇರಿ ಸಭಾಂಗಣದಲ್ಲಿ ಅವರನ್ನು ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಿ ಮನವಿ ಮಾಡಿಕೊಂಡರು, ಸದರಿ ಕಾರ್ಯಕ್ರಮ ದ ದಿವ್ಯ ಸಾನಿಧ್ಯವನ್ನು ಶ್ರೀ ಸಿದ್ದೇಶ್ವರ ಮಹಾಸಂಸ್ಥಾನ ಕಟ್ಟಿಮನಿ ಹಿರೇಮಠ ಅಳವಂಡಿಯ  108 ಶ್ರೀ ಮರಳಾರಾಧ್ಯಾ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಬೆಳಗಟ್ಟಿ ಶರೀಫ್ ದರ್ಗಾದ ಉಪ ಸಜಾದೆ ನಶೀನ್ ಮುಫ್ತಿ ಸೈಯದ್ ಶಾಹ್ ಮುಸ್ಟಫಾ ಖಾದ್ರಿ ಅಲಿಯಾಸ್ ಅನ್ವರ್ ಖಾದ್ರಿ ಜಂಟಿಯಾಗಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ, ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷ ಅನ್ವರ್ ಹುಸೇನ ಗಡಾದ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ, ಸಂಸದ ಕೆ ರಾಜಶೇಖರ ಹಿಟ್ನಾಳ, ಶಾಸಕ ಕೆ ರಾಘವೇಂದ್ರ ಹಿಟ್ನಾಳ, ಮುಂಡರಗಿ ಎಸ್ ಜಿ ಎಸ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಸಂಸ್ಥಾಪಕ ವೇದಮೂರ್ತಿ ಗುರುಮೂರ್ತಿ ಸ್ವಾಮಿ ಇನಾಮ್ದಾರ್ ಉದ್ಘಾಟನೆ ನೆರವೇರಿಸಲಿದ್ದು ಯಲಬುರ್ಗಾದ ಮೊಹಮ್ಮದ್ ರಾಶಿದ ಖಾಜಿ ಪ್ರವಚನ ನೀಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಮೀರ್ ಅಲಿ ,ಜಿಲ್ಲಾ ಪಂಚಾಯತಿಯ ಮಾಜಿ ಉಪಾಧ್ಯಕ್ಷರಾದ ರತ್ನಮ್ಮ ಬರಮಪ್ಪ ನಗರದ ,ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್, ಅಳವಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಂಕ್ರಮ್ಮ ಜೋಗಿನ್, ಉಪಾಧ್ಯಕ್ಷರಾದ ಶಾರದಮ್ಮ ಇಳಗೇರ್ ,ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು ಸೇರಿದಂತೆ ತಾಪಂ ಮಾಜಿ ಸದಸ್ಯ ಬಸವ ರೆಡ್ಡಿ ಹಳ್ಳಿಕೇರಿ, ರಂಗಪ್ಪ ಕರಡಿ ಭೂದಾನೀ ಹನುಮಂತಗೌಡರು ಗಾಳಿ, ಚೌಡಪ್ಪ ಜಂತ್ಲಿ ಗಾಳೆಪ್ಪ ಪೂಜಾರ, ದೇವಪ್ಪ ಕಟ್ಟಿಮನಿ, ಪ್ರಲಾದ ನಾಯಕ್, ಮುಸ್ಲಿಂ ಸಮುದಾಯದ ಮುಖಂಡರಾದ ಎಂ ಪಾಷಾ ಕಾಟನ್, ನಬಿಸಾಬ್ ಕೆಲುರ್ ,ಸಲೀಂ ಅಳವಂಡಿ ,ಅಕ್ಬರ್ ಪಾಶ ಪಲ್ಟನ್, ಅಜಿಂ ಅತ್ತಾರ್, ಅಲ್ಲದೆ ಪಂಚ್ ಕಮಿಟಿಯ ಸದಸ್ಯರಾದ ಮುಸ್ತಫ ಗಡಾದ್, ಮೈನು ಸಾಬ್ ಕಟ್ಟಿ, ಫಕೀರ್ ಸಾಬ್ ಹಳ್ಳಿಕೇರಿ ಮರ್ಧಾನ್ ಸಾಬ್ ಬಳಿಗೆರ್, ನನ್ನು ಸಾಬ್ ಬಿಸರಳ್ಳಿ, ಹಾಗೂ ಅಂಜುಮನ್ ಇಸ್ಲಾಂ ಕಮಿಟಿಯ ಪದಾಧಿಕಾರಿಗಳಾದ ಉಪಾಧ್ಯಕ್ಷ ರಜಾಕ್ ಸಾಬ್ ಮಠದ, ಕಾರ್ಯದರ್ಶಿ ಮೊಹಮ್ಮದ್ ಯೂನುಸ್ ಗಂಗಾವತಿ, ಸದಸ್ಯರಾದ ಅಹಮದ್ ಸಾಬ್ ಕೌಲೂರ್, ಬಾಬುಸಾಬ್ ಗಡಾದ್, ಚಾಂದ್ ಸಾಬ್ ಮುಲ್ಲಾ ,ಕಾಶಿಂ ಪೀರ್ ಕೋರ್ಲಹಳ್ಳಿ, ಹುಚ್ಚು ಸಾಬ್ ನದಾಫ್, ಯಮನೂರು ಸಾಬ್ ಕೊರಲಹಳ್ಳಿ ಪಾಲ್ಗೊಳ್ಳಲಿದ್ದು, ಇದೇ ವೇಳೆ ನಿವೃತ್ತ ಡಿ ಹೆಚ್ ಓ ಹಾಗೂ ಹಿರಿಯ ವೈದ್ಯ ಡಾ, ಟಿ ಎಚ್ ಮುಲ್ಲಾ ರವರಿಗೆ ವಿಶೇಷ ಸನ್ಮಾನ ನೆರವೇರಿಸಲಾಗುವುದು.

ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರುಗಳಾದ ಖಾದರ್ ಭಾಷಾ ಸೋಂಪುರ್ ಮತ್ತು ಹುಸೇನ್ ಕೌಲು ರು  ನೆರವೇರಿಸಿ ಕೊಡಲಿದ್ದಾರೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಶರೀಫ್ ಸಾಬ್ ಬಳಿಗಾರ, ಅಸ್ಲಾಂ ಗಡಾದ್ ಅಂಜುಮ ಚಿಜೇರಿ, ರೇಣುಕಾ ವಾಸ್ತು ನವರ್,  ಅಪೂರ್ವ ಹಳ್ಳಿಕೇರಿ, ಸರಸ್ವತಿ ಗುಗ್ಗರಿ ಸಹರಾ ನಸೀಮ ಕೌಲೂರ್, ಪವಿತ್ರ ಉಂಕಿ, ಮಮತಾಜ್ ಭೋಚನಹಳ್ಳಿ ,ಗಂಗಾಧರ ಕರಡಿ, ಮತ್ತು ಹಸಿನಾ ಬೇಗಠ ಮಠದ ರವರುಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ.