ಹಾರೂಗೇರಿ ಪುರಸಭೆ ಅಧ್ಯಕ್ಷರಾಗಿ ಜ್ಞಾನೇಶ್ವರ ಅವಿರೋಧ ಆಯ್ಕೆ
Gyaneshwar elected unopposed as Harugeri Municipality President
ಲೋಕದರ್ಶನ ವರದಿ
ಹಾರೂಗೇರಿ, 17 : ಸ್ಥಳೀಯ ಪುರಸಭೆ ಅಧ್ಯಕ್ಷರಾಗಿ ಬಿಜೆಪಿಯ ಜ್ಞಾನೇಶ್ವರ ಶಂಕರ ಧರ್ಮಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪುರಸಭೆಯ ಮೊದಲ ಅವಧಿಯಲ್ಲಿ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಆಯ್ಕೆ ನಡೆಯಿತು. ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಿದ್ದು, ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಜ್ಞಾನೇಶ್ವರ ಧರ್ಮಟ್ಟಿ ಅವರು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಮಹಾದೇವ ಸನಮೂರಿ ತಿಳಿಸಿದರು.
ಹಾರೂಗೇರಿ ಪುರಸಭೆಯ ಒಟ್ಟು 23 ಸದಸ್ಯರಲ್ಲಿ ಬಿಜಪಿ 14, ಕಾಂಗ್ರೆಸ್ 8 ಮತ್ತು ಪಕ್ಷೇತರ 1 ಸದಸ್ಯ ಬಲ ಹೊಂದಿದೆ. ಜ್ಞಾನೇಶ್ವರ ಧರ್ಮಟ್ಟಿ ಅವಿರೋಧ ಆಯ್ಕೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜ್ಞಾನೇಶ್ವರ ಧರ್ಮಟ್ಟಿ ಮಾತನಾಡಿ ಪ್ರಸ್ತುತ ಜನರ ಬಳಿಗೆ ಅಭಿವೃದ್ಧಿ ಕೆಲಸಗಳನ್ನು ಕೊಂಡೊಯ್ಯಲು ಪ್ರಯತ್ನಿಸಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ನೈರ್ಮಲ್ಯ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳನ್ನು ತರಲು ಸಾರ್ವಜನಿಕರ ಸಹಕಾರ, ಹೊಂದಾಣಿಕೆ ಮತ್ತು ನಿರಂತರ ಸಂಪರ್ಕ ಅಗತ್ಯವಾಗಿದೆ ಎಂದರು.
ಅಧ್ಯಕ್ಷ ದಾರಿ ಸುಲಭ : ಬಿಜೆಪಿ ಮಾಜಿ ಶಾಸಕ ಪಿ.ರಾಜೀವ್ ಮಾರ್ಗದರ್ಶನದಂತೆ ಪಟ್ಟಣದ ವಸಂತ ಲಾಳಿ ಹಾಗೂ ಜ್ಞಾನೇಶ್ವರ ಧರ್ಮಟ್ಟಿ ನಡುವೆ ಅಧ್ಯಕ್ಷ ಸ್ಥಾನದ ಒಪ್ಪಂದವಾಗಿ ಅಧಿಕಾರ ಹಂಚಿಕೆ ಮಾಡಲಾಗಿತ್ತು. ವಸಂತ ಲಾಳಿ ಅರ್ಧ ಅವಧಿಗೆ ಅಧ್ಯಕ್ಷರಾಗಿ ಪೂರ್ಣಗೊಳಿಸಿದರು. ಒಪ್ಪಂದದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಇನ್ನರ್ಧ ಅವಧಿಯನ್ನು ಜ್ಞಾನೇಶ್ವರ ಧರ್ಮಟ್ಟಿ ಅವರಿಗೆ ಬಿಟ್ಟುಕೊಟ್ಟರು.
ಮಾಜಿ ಶಾಸಕ ಪಿ.ರಾಜೀವ್, ಪುರಸಭೆ ಉಪಾಧ್ಯಕ್ಷ ಬಸವರಾಜ ಅರಕೇರಿ, ಮಾಜಿ ಅಧ್ಯಕ್ಷ ವಸಂತ ಲಾಳಿ, ಮಂಡಲ ಅಧ್ಯಕ್ಷ ಶ್ರೀಧರ ಮೂಡಲಗಿ, ಮುಖ್ಯಾಧಿಕಾರಿ ಬಸವರಾಜ ಮನಗೂಳಿ, ಪರಗೌಡ ಉಮರಾಣಿ, ರೂಪಾ ನಾಗನೂರ, ವಿದ್ಯಾ ಅರಕೇರಿ, ಬಾಬುರಾವ ನಡೋಣಿ, ಸಂತೋಷ ಸಿಂಗಾಡಿ, ವಿಮಲಾ ಖೋತ, ಬಸವರಾಜ ಅರಳಿಕಟ್ಟಿ, ಬಸವರಾಜ ಚೌಗಲಾ, ಸುನಂದಾ ದಳವಾಯಿ, ಆನಂದ ಪಾಟೀಲ, ಪ್ರೇಮಾ ಠಕ್ಕಣ್ಣವರ, ಶೋಭಾ ಐನಾಪೂರೆ, ಪ್ರಶಾಂತ ಬದ್ನಿಕಾಯಿ, ನಮೃತಾ ಮುಡಸಿ, ಪಾರ್ವತಿ ಆಸಂಗಿ, ಸುವರ್ಣಾ ಸದಲಗಿ, ಬಾಳಪ್ಪ ಸನದಿ, ಕಾಂತಪ್ಪ ಬಾಡಗಿ, ಮಾಳಪ್ಪ ಹಾಡಕಾರ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 