ಒಮಾನ್ ದೊರೆ ನಿಧನಕ್ಕೆ ಗುಟೆರಸ್ ಸಂತಾಪ

ವಿಶ್ವಸಂಸ್ಥೆ,  ಜ12:       ಒಮಾನ್ ದೊರೆ  ಸುಲ್ತಾನ್ ಕಬೂಸ್ ಬಿನ್ ಸೆಡ್  ಅವರ  ನಿಧನಕ್ಕೆ  ವಿಶ್ವಸಂಸ್ಥೆ   ಪ್ರಧಾನ ಕಾರ್ಯದರ್ಶಿ  ಆಂಟೋನಿಯೊ ಗುಟೆರೆಸ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.  

  ಸುಲ್ತಾನ್ ಕಬೂಸ್ ಬಿನ್ ಸೆಡ್ ಅವರ ನಿಧನಕ್ಕೆ ರಾಜಮನೆತನ, ಸರ್ಕಾರ ಮತ್ತು ಒಮಾನ್ ಜನರಿಗೆ ಪ್ರಧಾನ ಕಾರ್ಯದರ್ಶಿಯವರು ಸಂತಾಪ ಸೂಚಿಸಿದ್ದಾರೆ  ಎಂದು ಗುಟೆರೆಸ್ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.   

ಸುಲ್ತಾನರ ನಾಯಕತ್ವ,  ಅವರು ನೀಡಿದ ಕೊಡುಗೆಯನ್ನು ಅವರು ಸ್ಮರಿಸಿದ್ದಾರೆ  "ಒಮಾನ್ ಅನ್ನು 50 ವರ್ಷಗಳ ಕಾಲ ಮುನ್ನಡೆಸಿ ಅಭಿವೃದ್ದಿಗೆ ತಮ್ಮದೆ ಕೊಡುಗೆ ಕೊಟ್ಟಿದ್ದಾರೆ ಎಂದೂ  ಸಂದೇಶದಲ್ಲಿ ಬಣ್ಣಸಿದ್ದಾರೆ. 

ಈ ಪ್ರದೇಶದಲ್ಲಿ ಮತ್ತು ಜಾಗತಿಕವಾಗಿ ಶಾಂತಿ,  ಮತ್ತು ಸಹಬಾಳ್ವೆಯ ಸಂದೇಶ ಸಾರಲು ಅವರು  ಬದ್ಧರಾಗಿ ದೇಶದ ಜನರು ಮತ್ತು  ಅದರಾಚೆ ಇರುವವರ ಗೌರವವನ್ನು ಗಳಿಸಿದ್ದರು  ಎಂದು  ಹೇಳಿದ್ದಾರೆ.  

ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ರಾಜತಾಂತ್ರಿಕ ಕ್ಷೇತ್ರಕ್ಕೂ ನಿರಂತರ ಕೊಡುಗೆ ನೀಡಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ ಒಮಾನ್ ದೊರೆ ಕಬೂಸ್ ಬಿನ್ ಸೈದ್ ನ ಸುಲ್ತಾನ್ ಶುಕ್ರವಾರ ನಿಧನರಾಗಿದ್ದರು.