ಪ್ರತಿ ವರ್ಷ ಗಣಪತಿ ಹಬ್ಬದ ಪ್ರಯುಕ್ತ ನಿರಂತರ ಅನ್ನದಾಸೋಹ

ಪ್ರತಿ ವರ್ಷ ಗಣಪತಿ ಹಬ್ಬದ ಪ್ರಯುಕ್ತ ನಿರಂತರ ಅನ್ನದಾಸೋಹ  Guruvandana Program: Belagavi

ಯಮಕನಮರಡಿ 07: ತುತ್ತು ಮಾಡಿ ಉಣಿಸಿದ ತಾಯಿ ಶ್ರೇಷ್ಠ ಬದುಕುವ ದಾರಿ ತೋರಿಸಿದ ತಂದೆ ಶ್ರೇಷ್ಠ ವಿದ್ಯೆ ಕಲಿಸಿದ ಗುರು ಶ್ರೇಷ್ಠ ಎಂಬುದಕ್ಕೆ ಸಾಕ್ಷಿಯಾದ ವೀರೇಶ್ ತುಬಚಿ ದಾಸೋಹ ಮೂರ್ತಿ ಸುಮಾರು 28 ವರ್ಷಗಳ ಕಾಲ ಪ್ರತಿ ವರ್ಷವೂ ಗಣಪತಿ ಹಬ್ಬದ ಪ್ರಯುಕ್ತ ನಿರಂತರ ಗ್ರಾಮದ ಎಲ್ಲ ಕುಲಬಾಂಧವರಿಗೆ ಅನ್ನದಾಸೋಹ ಮಾಡುತ್ತಾ ಬಂದಿರುವುದು ಒಂದು ಕಾಯಕ 12ನೇ ಶತಮಾನದಲ್ಲಿ ಅಪಾರ ಶರಣರು ತಮ್ಮ ಕಾಯಕದೊಂದಿಗೆ ಶರಣರಿಗೆ ದಾಸೋಹ ಮಾಡುತ್ತಿದ್ದರು ಅದರಂತೆ ಯಮಕನಮರಡಿ ಗ್ರಾಮದಲ್ಲಿ ಮೂರು ದಿನಗಳ ಗಣಪತಿ ಹಬ್ಬದ ಅಂಗವಾಗಿ ದಾಸೋಹ ಆಯೋಜಿಸಿ ಎಲ್ಲ ಜೀವರಾಶಿಗಳಿಗೆ ಲೇಸನ್ನು ಬಯಸುವ ಕಾಯಕ ದೊಂದಿಗೆ ವಿದ್ಯ ನೀಡಿದ ಗುರುಗಳ ಸ್ಮರಣೆಯು ಅತಿ ಮುಖ್ಯವಾದದ್ದು ಎಂದು ತಿಳಿದು ವೀರೇಶ್ ತುಬುಚಿ ಶರಣ ದಂಪತಿಗಳು ದಿನಾಂಕ್ 04 ರಂದು ಗುರುವಂದನ ಕಾರ್ಯಕ್ರಮವನ್ನು ಆಯೋಜಿಸಿ ತಮಗೆ ವಿದ್ಯೆ ನೀಡಿದ ಗುರುಗಳಿಗೆ ಸನ್ಮಾನಿಸಿ ಗುರುವಿನ ಕೃಪೆಗೆ ಪಾತ್ರರಾದರು ಇವರ ಕಾಯಕವು ನಿಜಕ್ಕೂ ಹೆಮ್ಮೆಪಡುವ ಸಂಗತಿಯಾಗಿದೆ. 

 ಮನುಷ್ಯನು ತಾನು ಸಂಪಾದಿಸಿದ ಸಂಪತ್ತಿನಲ್ಲಿ ಸ್ವಲ್ಪವಾದರೂ ದಾನ ಮಾಡಿ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳುವವನೇ ನಿಜವಾದ ಶರಣರು ಇಂದಿನ ಆಧುನಿಕ ಯುಗದಲ್ಲಿ ದಾನ ಧರ್ಮ ಪೂಜೆ ಪುರಸ್ಕಾರ ಸಂಪ್ರದಾಯಗಳು ನಶಿಸಿ ಹೋಗುತ್ತಿವೆ ಆದರೆ ದಾಸೋಹಿಗಳಾದ ವೀರಣ್ಣ ತುಬುಚಿ ಅವರು ಹಾಗೂ ಅವರ ಕುಟುಂಬವು ದಾಸೋಹ ಮೂರ್ತಿಗಳಾಗಿ ಬೆಳಗುತ್ತಿದ್ದಾರೆ ಇಂಥವರ ಕಾರ್ಯವನ್ನು ಯಾವತ್ತು ಮರೆಯುವಂತಿಲ್ಲ ವಿದ್ಯೆ ಕಲಿಸಿದ ಗುರುವೇಗೆ ಗುರುವಂದನೆ ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ ಸದರಿ ಕಾರ್ಯಕ್ರಮದಲ್ಲಿ ವಿದ್ಯ ಕಲಿಸಿದ ಲಗಮಣ್ಣ ಗಸ್ತಿ ಗುರುಲಿಂಗಯ್ಯಾ ಮಠಪತಿ, ನಿಲವ್ವಾತಾಯಿ ಕುಂಬಾರ  ಪ್ರಾಥಮಿಕ ಶಿಕ್ಷಕರು ಹಾಗೂ ಪ್ರೌಢಶಾಲೆಯ ಶಿಕ್ಷಕರಾದ ಎಸ್ ಎನ್ ಮಮದಾಪುರ್ ಕುಂಬಾರ್ ನಿವೃತ್ತ ಪ್ರಾಚಾರ್ಯ ಪ್ರಕಾಶ್ ಅವಲಕ್ಕಿ ಸೇರಿದಂತೆ ಶರಣ ಬಂಧುಗಳಾದ ಅಮಿತ್ ಕುಲಕರ್ಣಿ ಉತ್ತಮ್ ದೇಶ್ಪಾಂಡೆ ಗುಮುಚ್ಚಿ ಸಹಾಯಕರು ಹಾಗೂ ಗ್ರಾಮದ ಪ್ರಮುಖರಾದ ರಾಜೇಂದ್ರ ತುಬಚಿ ಎಸ್‌ಆರ್ ತಬರಿ ಪತ್ರಕರ್ತರಾದ ಗೋಪಾಲ ಛ ಪನಿ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹುಕ್ಕೇರಿ ಇದರ ಅಧ್ಯಕ್ಷರಾದ ಪ್ರಕಾಶ್ ಅವಲಕ್ಕಿ ಅವರು ಸಾಹಿತ್ಯ ಪರಿಷತ್ತ ವತಿಯಿಂದ ತುಬಚಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಿದರು ನಂತರ ಅನ್ನದಾಸೋಹಕ್ಕೆ ಸಂಪ್ರದಾಯದಂತೆ ಚಾಲನೆ ನೀಡಲಾಯಿತು.