ಪಿಕೆಪಿಎಸ್ ಅಧ್ಯಕ್ಷರಾಗಿ ಗುರುಸಂಗಪ್ಪ, ಉಪಾಧ್ಯಕ್ಷರಾಗಿ ಯಮನಪ್ಪ ಅವಿರೋಧ ಆಯ್ಕೆ

Gurusangappa elected unopposed as PKPS President, Yamanappa as Vice President

ತಾಳಿಕೋಟಿ 17: ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಗುರುಸಂಗಪ್ಪ ತ.ಕಶೆಟ್ಟಿ, ಉಪಾಧ್ಯಕ್ಷರಾಗಿ ಯಮನಪ್ಪ ದೇ.ಬರದೇನಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  

ಗುರುವಾರ ಸಂಘದ ಸಭಾ ಭವನದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಕ್ಕೆ ಒಂದೊಂದು ನಾಮ ಪತ್ರ ಮಾತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ವಿಜಯಕುಮಾರ ಉತ್ನಾಳ ಘೋಷಿಸಿದರು. ಸಹಾಯಕರಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಂಕರಗೌಡ ಪಾಟೀಲ,ಸಿಬ್ಬಂದಿ ಪ್ರವೀಣ ಪಾಟೀಲ ಹಾಗೂ ಪ್ರಕಾಶ ಪಾಟೀಲ ಕಾರ್ಯನಿರ್ವಹಿಸಿದರು. ನಿರ್ದೇಶಕರಾದ ಡಿ.ವಿ.ಪಾಟೀಲ, ದಸ್ತಗೀರಸಾಬ ಎಮ್‌. ಕೆಂಭಾವಿ,ಗೋವಿಂದಸಿಂಗ್ ವಿ. ಮೂಲಿಮನಿ,ಬಸನಗೌಡ ವಿ. ಮಾಲಿಪಾಟೀಲ,ಶರಣಪ್ಪ ಬಿ.ಇಲಕಲ್, ನಾಗಪ್ಪ ಗು.ಗೊಟಗುಣಕಿ,ಶ್ರೀಮತಿ ಸರೋಜಾ ಚ.ದೇಸಾಯಿ,ಜ್ಯೋತಿ ದಿ. ಹಜೇರಿ,ಮಡಿವಾಳಪ್ಪ ಭೀ.ಕಟ್ಟಿಮನಿ, ಬಸವರಾಜ ಮ.ಕುಂಬಾರ ಭಾಗವಹಿಸಿದ್ದರು. ವಿಜಯೋತ್ಸವ: ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಗುರುಸಂಗಪ್ಪ ಕಶೆಟ್ಟಿ ಹಾಗೂ ಯಮನಪ್ಪ ಬರೆದೇನಾಳ ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು. 

ಈ ವೇಳೆ ಪುರಸಭೆ ಮಾಜಿ ಉಪಾಧ್ಯಕ್ಷ ಮಾಸೂಮಸಾಬ ಕೆಂಭಾವಿ, ಚನ್ನಬಸ್ಸು ದೇಸಾಯಿ,ಬಿ.ಎಂ.ಪಾಟೀಲ, ಅಣ್ಣಪ್ಪ ಜಗತಾಪ, ಶರಣಗೌಡ ಗೊಟಗುಣಕಿ, ಮಹಿಬೂಬ ಕೆಂಭಾವಿ, ರಾಮು ಜಗತಾಪ, ನಿಂಗಣ್ಣ ಕುಂಟೋಜಿ, ಅಶೋಕ ಚಿನಗುಡಿ ಸಂಜೀವಪ್ಪ ಬರೆದೇನಾಳ, ಈರಣ್ಣ ಕಲಬುರ್ಗಿ, ಕಾಶಿನಾಥ ಪಾಟೀಲ, ರಾಮಣ್ಣ ಕಟ್ಟಿಮನಿ, ತನ್ವೀರ್ ಮನಗೂಳಿ ಮತ್ತಿತರರು ಇದ್ದರು.